ಶ್ರೀಗಳ ದೇಹದಲ್ಲಿ ವಿಷ ಹೇಗೆ ಬಂತು: ಈಶ ವಿಠಲದಾಸ ಸ್ವಾಮೀಜಿ ಪ್ರಶ್ನೆ

7

ಶ್ರೀಗಳ ದೇಹದಲ್ಲಿ ವಿಷ ಹೇಗೆ ಬಂತು: ಈಶ ವಿಠಲದಾಸ ಸ್ವಾಮೀಜಿ ಪ್ರಶ್ನೆ

Published:
Updated:

ಉಡುಪಿ: ಶೀರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರ ನಿಧನ ದಿಗ್ಭ್ರಮೆ ಉಂಟು ಮಾಡಿದೆ. ಶ್ರೀಗಳ ದೇಹದಲ್ಲಿ ವಿಷ ಹೇಗೆ ಬಂತು? ಎಂಬ ಬಗ್ಗೆ ಉನ್ನತಮಟ್ಟದ ತನಿಖೆಯಾಗಬೇಕು ಎಂದು ಕೇಮಾರು ಮಠದ ಈಶ ವಿಠಲದಾಸ ಸ್ವಾಮೀಜಿ ಒತ್ತಾಯಿಸಿದ್ದಾರೆ.

ಶ್ರೀಗಳ ನಿಧನದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಈಶ ವಿಠಲದಾಸ ಸ್ವಾಮೀಜಿ, 'ಲಕ್ಷ್ಮೀವರ ತೀರ್ಥ ಶ್ರೀಗಳು ತಮ್ಮ ಈಚೆಗೆ ನನ್ನೊಡನೆ ಮಾತನಾಡಿ ತಮ್ಮ ಆತಂಕ ತೋಡಿಕೊಂಡಿದ್ದರು. ಪಟ್ಟದ ದೇವರ ವಿಷಯದಲ್ಲಿ ಸ್ವಾಮೀಜಿ ಕಾನೂನು ಹೋರಾಟ ವಿಚಾರಕ್ಕೆ ಮುಂದಾಗಿದ್ದರು. ಶ್ರೀಗಳ ನಿಧನದ ಸಂಬಂಧ ವಕೀಲರನ್ನು ಸಂಪರ್ಕ ಮಾಡಿದ್ದೆವು. ಬುಧವಾರ ಅಥವಾ ಗುರುವಾರ ನಾವು ಉಡುಪಿ ನ್ಯಾಯಾಲಯದಲ್ಲಿ ಕ್ರಿಮಿನಲ್‌ ದಾವೆ ಹೂಡುವುದು ಎಂದು ನಿರ್ಣಯವಾಗಿತ್ತು’ ಎಂದರು.

‘ನನ್ನ ಪ್ರಕಾರ ಶ್ರೀಗಳಿಗೆ ಸಾಯುವಂತ ಕಾಯಿಲೆ ಇರಲಿಲ್ಲ. ಆರೋಗ್ಯ ಕುಗ್ಗಿರಲಿಲ್ಲ. ಅನಾರೋಗ್ಯದ ಬಗ್ಗೆ ಅವರಿಗೆ ಬೇಸರ ಇತ್ತು. ಆದರೆ, ಆರೋಗ್ಯ ಅಷ್ಟು ಕುಂದಿರಲಿಲ್ಲ. ವನಮಹೋತ್ಸವದಲ್ಲಿ ಅವರನ್ನು ಜತೆಗೆ ನೋಡಿದ ಪ್ರಕಾಶ್ ನಮ್ಮಜತೆಗಿದ್ದಾರೆ. ಅವರು ಉತ್ತಮ ಆರೋಗ್ಯ ಹೊಂದಿದ್ದರು’ ಎಂದು ಹೇಳಿದರು. 

‘ಶ್ರೀಗಳು ನಮ್ಮ ಬಳಿ ‘48 ದಿನ ಏನೂ ಮಾತನಾಡುವುದಿಲ್ಲ’ ಎಂದಿದ್ದರು. ‘48 ದಿನ ದೇವರ ಅನುಷ್ಠಾನದಲ್ಲಿ ಇರುತ್ತೇನೆ. ನನಗೆ ದೇವರು ಸಿಗಬೇಕು’ ಎಂದು ಹೇಳಿದ್ದರು. ಅದರಲ್ಲಿ ಈಗಾಗಲೇ 10– 12 ದಿನ ಅನುಷ್ಠಾನವಾಗಿದೆ. ಈಗ ಈ ಬೆಳವಣಿಗೆ ದಿಗ್ಭ್ರಮೆ ಮತ್ತು ಗೊಂದಲ ತಂದಿದೆ. ಭಕ್ತರಲ್ಲಿ ದೊಡ್ಡ ಬೇಸರ ಮೂಡಿಸಿದೆ ಎಂದು ವಿವರಿಸಿದರು.

‘ಅವರು ಸ್ವತಃ ವಿಷ ತೆಗೆದುಕೊಳ್ಳುವಂಥ ಮನಸ್ಥಿತಿಯಲ್ಲಿರಲಿಲ್ಲ. ಆಹಾರ ಸೇವನೆ ಮೂಲಕ ವಿಷವು ಸೇರಿದೆ ಎಂದು ವೈದ್ಯರು ಹೇಳಿದ್ದಾರೆ. ಶ್ರೀಗಳ ದೇಹದಲ್ಲಿ ವಿಷ ಹೇಗೆ ಬಂದಿದೆ ಎಂಬುದೇ ಅನುಮಾನ. ಅದರ ಬಗ್ಗೆ ಉನ್ನತಮಟ್ಟದ ತನಿಖೆಯಾಗಬೇಕು’ ಎಂದು ಸ್ವಾಮೀಜಿ ಒತ್ತಾಯಿಸಿದರು.

'ದೇವರ ವಿಚಾರ ಸಂಬಂಧ ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇವೆ. ಸಿಎಂ ಈ ಸಂಬಂಧ ಗಮನ ನೀಡುವಂತೆ ಪಶ್ಚಿಮ ವಲಯದ ಐಜಿಗೆ ಸೂಚಿಸಿದ್ದಾರೆ ಎಂದು ಸ್ವಾಮೀಜಿ ಹೇಳಿದ್ದರು. ಈವರೆಗೆ ಯಾವುದೇ ಬೆಳವಣಿಗೆ ಆಗಿಲ್ಲ. ಈ ಕುರಿತು ಪೊಲೀಸ್ ಅಧಿಕಾರಿಯೊಬ್ಬರನ್ನು ಸಂಪರ್ಕಿಸಿದಾಗ ಅವರು ಇದು ನಮಗೆ ಸಂಬಂಧಪಡುವುದಿಲ್ಲ, ನೀವು ನ್ಯಾಯಾಲಯದಲ್ಲಿ ದಾವೆ ಹೂಡಬಹುದು ಎಂದು ಹೇಳದ್ದರು' ಎಂದು ತಿಳಿಸಿದರು. 

‘ದೇಹದಲ್ಲಿ ವಿಷಪೂರಿತ ವಸ್ತು ಇದೆ ಎಂದು ವೈದ್ಯರು ಹೇಳಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದು ಭಕ್ತರಲ್ಲಿ ಅನುಮಾನ ಮೂಡಿಸಿದೆ. ಸರ್ಕಾರ ಮಧ್ಯ ಪ್ರವೇಶಿಸಬೇಕು. ಸಿಎಂ ಸ್ವಾಮೀಜಿ ಸಾವಿಗೆ ನ್ಯಾಯದೊರಕಿಸಿಕೊಡಬೇಕು. ಈ ಬಗ್ಗೆ ಜಿಲ್ಲಾಡಳಿತ ಮತ್ತು ಪೊಲೀಸರು ಕಾರ್ಯಪ್ರವೃತ್ತರಾಗಬೇಕು. ಉನ್ನತಮಟ್ಟದ ತನಿಖೆಯಾಗಬೇಕು. ಸಿಎಂ ಕುಮಾರಸ್ವಾಮಿ ಮತ್ತವರ ತಂದೆ ದೇವೇಗೌಡರು ಗುರು ಭಕ್ತರು. ಅವರು ಸ್ವಾಮೀಜಿಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಆಗ್ರಹಿಸಿದರು.

‘ಸ್ವಾಮೀಜಿಗಳು ದೇವರ ವಿಷಯವನ್ನು ಪತ್ರದಲ್ಲಿ ಕೇಳಿದ್ದರು. ನಾಲ್ಕು ಮೂರ್ತಿಗಳಿವೆ, ವಿಠಲ ಸತ್ಯಭಾಮೆ, ನಾಟ್ಯಕೃಷ್ಣ, ಹಯಗ್ರೀವ, ಲಕ್ಷ್ಮೀನರಸಿಂಹ ದೇವರು. ಇವು ಬಂಗಾರ ಕವಚ ಇರುವ ದೇವರುಗಳು. ಇವನ್ನು ಕೊಡಬೇಕು ಎಂದು ನಾವು ಒತ್ತಾಯ ಮಾಡಿದ್ದೆವು’ ಎಂದು ಹೇಳಿದರು. 

‘ಶ್ರೀಗಳು ಜೀವ ಬೆದರಿಕೆ ಇದ್ದ ಬಗ್ಗೆ ನಮ್ಮ ಬಳಿ ಹೇಳಿಕೊಂಡಿರಲಿಲ್ಲ. ಈ ಸಂಬಂಧ ಮಾಧ್ಯಮದವರ ಜತೆ ಮಾತನಾಡಿದ್ದ ವೇಳೆ ಶ್ರೀಗಳು, ಗನ್‌ ಮ್ಯಾನ್‌ ಅವಶ್ಯಕತೆ ನಮಗಿತ್ತು. ಆದರೆ, ಬೇರೆಯವರಿಗೆ ನೀಡಿದ್ದಾರೆ ಎಂದು ಹೇಳಿದ್ದರು’ ಎಂದು ಈಶ ವಿಠಲದಾಸ ಸ್ವಾಮೀಜಿ ಹೇಳಿದರು.

ಇನ್ನಷ್ಟು ಸುದ್ದಿಗಳು...

ಮಡಿವಂತಿಕೆ, ಮೌಢ್ಯ ಮೀರಿನಿಂತ ಸ‌ಂತ

ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ವಿಧಿವಶ

ಲಕ್ಷ್ಮೀವರ ತೀರ್ಥರ ದೇಹದಲ್ಲಿ ವಿಷದ ಅಂಶ: ಪೊಲೀಸರಿಗೆ ಮಾಹಿತಿ

ಉಡುಪಿ ಶೀರೂರು ಮಠದ ಲಕ್ಷ್ಮೀವರ ತೀರ್ಥರಿಗೆ ಭಿನ್ನಾಭಿಪ್ರಾಯವೇ ಮುಳುವಾಯ್ತೇ?

ಶೀರೂರು ಶ್ರೀಗಳಿಗೆ ವಿಷಪ್ರಾಶನದ ಅನುಮಾನವಿಲ್ಲ: ಪೇಜಾವರ ಶ್ರೀ

ಅಸಹಜ ಸಾವೆಂಬ ಅನುಮಾನ ವ್ಯಕ್ತವಾದಲ್ಲಿ ತನಿಖೆಗೆ ಆದೇಶ: ಕುಮಾರಸ್ವಾಮಿ

ಶೀರೂರು ಮಠದ ಲಕ್ಷ್ಮೀವರ ತೀರ್ಥರ ಬದುಕಿನ ಹಾದಿ...

ಶಿರೂರು ಸ್ವಾಮೀಜಿ ಏಕೆ ವಿರೋಧ ಕಟ್ಟಿಕೊಂಡಿದ್ದರು?

ಬರಹ ಇಷ್ಟವಾಯಿತೆ?

 • 6

  Happy
 • 2

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !