ಕಾಸರಗೋಡು: 13 ಮಂದಿಗೆ ಇಲಿಜ್ವರ

7

ಕಾಸರಗೋಡು: 13 ಮಂದಿಗೆ ಇಲಿಜ್ವರ

Published:
Updated:

ಕಾಸರಗೋಡು: ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ವ್ಯಾಪಕವಾಗಿರುವ ಇಲಿಜ್ವರ ಇದೀಗ ಕಾಸರಗೋಡಿನಲ್ಲೂ ಕಾಣಿಸಿಕೊಂಡಿದ್ದು, 13 ಮಂದಿಯಲ್ಲಿ ಇದು ಪತ್ತೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಪಿ.ದಿನೇಶ್‌ ಕುಮಾರ್‌ ತಿಳಿಸಿದ್ದಾರೆ.

ಇಲಿಜ್ವರ ಶಂಕೆಯ ಮೇರೆಗೆ ಜ್ವರ ಬಾಧಿತರಾದ 33 ಮಂದಿಯ ಬಗ್ಗೆ ವೈದ್ಯರು ತೀವ್ರ ನಿಗಾ ಇರಿಸಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ನೆರೆ ಉಂಟಾಗಿಲ್ಲವಾದರೂ, ನೆರೆ ಪೀಡಿತ ವಿವಿಧ ಜಿಲ್ಲೆಗಳಲ್ಲಿ ಕಾಸರಗೋಡಿನ ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ಪರಿಹಾರ ಕೆಲಸಗಳಲ್ಲಿ ತೊಡಗಿದ್ದರು. ಹಲವರಿಗೆ ಅಲ್ಲಿಂದ ಇಲಿ ಜ್ವರ ತಗುಲಿರಬಹುದು ಎಂದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !