ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Live Updates:ರಾಜ್ಯದಲ್ಲಿ ಸರಾಸರಿ ಶೇ 67.67ರಷ್ಟು ಮತದಾನ, ಮಂಡ್ಯ ಅತಿ ಹೆಚ್ಚು

Last Updated 18 ಏಪ್ರಿಲ್ 2019, 15:14 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ವಿವಿಧೆಡೆ ಗುರುವಾರ ಬೆಳಿಗ್ಗೆ 7ಕ್ಕೆ ಆರಂಭಗೊಂಡಮತದಾನ ಪ್ರಕ್ರಿಯೆ ಸಂಜೆ 6ಕ್ಕೆ ಮುಕ್ತಾಯಗೊಂಡಿದೆ. ಕೆಲವು ಕಡೆ ಮತಯಂತ್ರಗಳ ದೋಷ, ಮತದಾರರ ಸಾಲಿನಲ್ಲಿ ಉಂಟಾದ ನೂಕುನುಗ್ಗಲು, ಸಾಲಿನಲ್ಲಿ ನಿಂತಸೆಲೆಬ್ರಿಟಿಗಳು, ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆ,...ಇಂಥ ಕೆಲವು ಘಟನೆಗಳೊಂದಿಗೆ ಬಹುತೇಕ ಶಾಂತವಾಗಿಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಮಳೆಯ ಸಿಂಚನದೊಂದಿಗೆ ಮುಗಿದಿದೆ.

(ರಾತ್ರಿ 8ರವರೆಗಿನ ಮಾಹಿತಿ)

8:45:ರಾಜ್ಯದಲ್ಲಿ ಸರಾಸರಿ ಶೇ 67.67ಮತದಾನ ಆಗಿದ್ದು, ಮಂಡ್ಯದಲ್ಲಿಶೇ 79.98ರಷ್ಟು ಮತದಾನ ದಾಖಲಾಗಿದೆ. ಬೆಂಗಳೂರು ನಗರದ ಮೂರೂ ಕ್ಷೇತ್ರಗಳಲ್ಲಿ ಮತದಾನ‍ಪ್ರಮಾಣ ಕಡಿಮೆ ದಾಖಲಾಗಿದೆ.

(ಸಂಜೆ 7ರವರೆಗಿನ ಮಾಹಿತಿ)

8:10:ರಾಜ್ಯದಲ್ಲಿ ಸರಾಸರಿ ಶೇ 66.76 ಮತದಾನ ಆಗಿದ್ದು, ದಕ್ಷಿಣ ಕನ್ನಡದಲ್ಲಿ ಶೇ 77.70ರಷ್ಟು ಮತದಾನ ದಾಖಲಾಗಿದೆ. ಬೆಂಗಳೂರು ನಗರದ ಮೂರೂ ಕ್ಷೇತ್ರಗಳಲ್ಲಿ ಮತದಾನ‍ಪ್ರಮಾಣ ಕಡಿಮೆ ದಾಖಲಾಗಿದೆ.

7:40:ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ: ಶೇಕಡ 77.25ರಷ್ಟು ಮತದಾನ. ಇದರೊಂದಿಗೆ ಸಾರ್ವಕಾಲಿಕ ದಾಖಲೆ ನಿರ್ಮಾಣವಾಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಶೇಕಡ 77.14ರಷ್ಟು ಮತದಾನವಾಗಿತ್ತು. ಅದು ಅತ್ಯಧಿಕ ದಾಖಲೆಯ ಮತದಾನವಾಗಿತ್ತು.

(ಸಂಜೆ 5ರವರೆಗಿನಮತದಾನ ಮಾಹಿತಿ)

6.18:ದೇಶದ 11 ರಾಜ್ಯ, ಒಂದು ಕೇಂದ್ರಾಡಳಿ ಪ್ರದೇಶದಲೋಕಸಭಾ ಕ್ಷೇತ್ರಗಳಲ್ಲಿ ಎರಡನೇ ಹಂತದ ಮತದಾನ ಪ್ರಕ್ರಿಯೆ: ಸರಾಸರಿ ಶೇ 61.12ರಷ್ಟು ಮತದಾನ. ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು, ಶೇ 75.27ರಷ್ಟು ಮತದಾನ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ:ಒಟ್ಟು ಶೇ 69.33

ಗೌರಿಬಿದನೂರು- 67.5
ಬಾಗೇಪಲ್ಲಿ- 62.2
ಚಿಕ್ಕಬಳ್ಳಾಪುರ- 75.27
ಯಲಹಂಕ-55.96
ಹೊಸಕೋಟೆ- 81.6
ದೇವನಹಳ್ಳಿ-78.29
ದೊಡ್ಡಬಳ್ಳಾಪುರ-73.73
ನೆಲಮಂಗಲ-71.71

5.40: ರಾಜ್ಯದಲ್ಲಿ ಸಂಜೆ 5ರ ವರೆಗೆ ಸರಾಸರಿ ಶೇ 61.84ರಷ್ಟು ಮತದಾನ

4.30:ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮತ ಚಲಾಯಿಸಿದರು.

4.00:104 ವರ್ಷದ ವೀರಣ್ಣ ಆರಾಧ್ಯ ಅವರು ಗುರುವಾರ ಮಧ್ಯಾಹ್ನ ಮತದಾನ ಮಾಡಲು ಮೈಸೂರಿನ ತ್ಯಾಗರಾಜ ರಸ್ತೆಯ ಅಕ್ಕನ ಬಳಗ ಮತಗಟ್ಟೆಗೆ ಬಂದ ಕ್ಷಣ.

3.00:ಮಧ್ಯಾಹ್ನ 3 ಗಂಟೆವರೆಗೆ ರಾಜ್ಯದಲ್ಲಿ ಶೇ 49.26ರಷ್ಟು ಮತದಾ‌ನ

2.30:ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸ್ವಗ್ರಾಮ ಸಿದ್ದರಾಮನಹುಂಡಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (ಮತಗಟ್ಟೆ ಸಂಖ್ಯೆ 86) ಮತದಾನ ಮಾಡಿದರು. ಪುತ್ರ ಹಾಗೂ ಶಾಸಕ ಡಾ.ಯತೀಂದ್ರ ಕೂಡ ಇದೇ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು.

1.42:ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಕೊಕ್ಕಡ ಮತಗಟ್ಟೆಗೆ ಮತ ಚಲಾಯಿಸಲು ಬಂದ ಎಂಡೋಸಲ್ಫಾನ್ ಪೀಡಿತ ಮತದಾರರು.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಕೊಕ್ಕಡ ಮತಗಟ್ಟೆಗೆ ಮತ ಚಲಾಯಿಸಲು ಬಂದ ಎಂಡೋಸಲ್ಫಾನ್ ಪೀಡಿತ ಮತದಾರರು.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಕೊಕ್ಕಡ ಮತಗಟ್ಟೆಗೆ ಮತ ಚಲಾಯಿಸಲು ಬಂದ ಎಂಡೋಸಲ್ಫಾನ್ ಪೀಡಿತ ಮತದಾರರು.

1.31:ಮಂಡ್ಯ ಜಿಲ್ಲೆ ದೊಡ್ಡರಸಿನಕೆರೆಯಲ್ಲಿ ನಿಖಿಲ್- ಸುಮಲತಾ ಬೆಂಬಲಿಗರ ನಡುವೆ ಗಲಾಟೆಯಾಗಿದ್ದು, ಪೊಲೀಸರಿಂದ ಲಘು ಲಾಠಿ ಪ್ರಹಾರ ನಡೆದಿದೆ.

1.07ಮಂಡ್ಯ ಜಿಲ್ಲೆಪಾಂಡವಪುರ ತಾಲ್ಲೂಕುಚಿಕ್ಕಮರಳಿ ಗ್ರಾಮದ ತುಂಬು ಗರ್ಭಿಣಿ ಮಂಗಳಾ ನವೀನ್, ಮತ ಹಾಕಿದ ನಂತರವೇ ಹೆರಿಗೆಗೆ ತೆರಳಿದರು. ಈಗ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ.

1.06 ಉಡುಪಿಯ ನಾರ್ಥ್ ಶಾಲೆಯ ಮತಗಟ್ಟೆಯಲ್ಲಿಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಮತ ಚಲಾಯಿಸಿದರು.

ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ
ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ

ಬೆಂಗಳೂರಿನ ಹಲಸೂರು ಚಿನ್ಮಯ ವಿದ್ಯಾಲಯದಲ್ಲಿ ಮತ ಚಲಾಯಿಸಿದ ನಟಿ ಐಂದ್ರಿತಾ ರೇ ಎಲ್ಲರೂ ಮತ ಚಲಾಯಿಸಬೇಕೆಂದು ಕರೆ ನೀಡಿದರು.

12.45 ಹಾಸನ ಜಿಲ್ಲೆಅರಸೀಕೆರೆತಾಲ್ಲೂಕುಕಾಳೇನಹಳ್ಳಿ ಹಟ್ಟಿಯಲ್ಲಿಚಲನಚಿತ್ರ ನಟ ಧನಂಜಯ್ ಮತದಾನ ಮಾಡಿದರು.

12.38ಚಿತ್ರದುರ್ಗ ತಾಲ್ಲೂಕಿನ ಮಠದಕುರುಬರಹಟ್ಟಿ ಸರ್ಕಾರಿ ಶಾಲೆ ಮತಗಟ್ಟೆಯಲ್ಲಿ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರ ಮತ ಚಲಾಯಿಸಿದರು.ಬಿಸಿಲೆಂಬ ಕಾರಣಕ್ಕೆ ಯಾರೂ ಮನೆಯಲ್ಲಿ ಉಳಿಯಕೂಡದು. ಎಲ್ಲರೂ ಮತದಾನ ಮಾಡಲೇಬೇಕು ಎಂದು ಅವರು ಕರೆ ನೀಡಿದರು.

ಚಿತ್ರದುರ್ಗ
ಚಿತ್ರದುರ್ಗ

12.35 ದೊಡ್ಡಬಳ್ಳಾಪುರ ತಾಲ್ಲೂಕು ಮುತ್ತೂರು ಗ್ರಾಮದಲ್ಲಿ ಮತ ಚಲಾಯಿಸಿದ ಅಂಧರನ್ನುಜಿಲ್ಲಾಧಿಕಾರಿ ಕರೀಗೌಡ ಅಭಿನಂದಿಸಿದರು.

ದೊಡ್ಡಬಳ್ಳಾಪುರ
ದೊಡ್ಡಬಳ್ಳಾಪುರ

12.27 ಬೆಂಗಳೂರು ಜಯನಗರ ಬಿಇಎಸ್ ಕಾಲೇಜಿನಲ್ಲಿ ಇನ್‌ಫೋಸಿಸ್‌ ಅಧ್ಯಕ್ಷನಾರಾಯಣ ಮೂರ್ತಿ ಮತ್ತು ಪತ್ನಿ ಸುಧಾ ಮೂರ್ತಿ ಮತ ಚಲಾಯಿಸಿದರು

ಇನ್‌ಫೋಸಿಸ್ ನಾರಾಯಣಮೂರ್ತಿ, ಸುಧಾಮೂರ್ತಿ
ಇನ್‌ಫೋಸಿಸ್ ನಾರಾಯಣಮೂರ್ತಿ, ಸುಧಾಮೂರ್ತಿ

12.27 ಬೆಂಗಳೂರು ಜಯನಗರ ಬಿಇಎಸ್ ಕಾಲೇಜಿನಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮತ ಚಲಾಯಿಸಿದರು.

Caption
Caption

12.25ಬೆಂಗಳೂರಿನ ಹಲಸೂರು ಚಿನ್ಮಯ ವಿದ್ಯಾಲಯದಲ್ಲಿ ಮತ ಚಲಾಯಿಸಿದ ನಟಿ ಐಂದ್ರಿತಾ ರೇ

ಐಂದ್ರಿತಾ ರೇ
ಐಂದ್ರಿತಾ ರೇ

12.23ಬೆಂಗಳೂರು ರಾಜರಾಜೇಶ್ವರಿನಗರದಲ್ಲಿ ಮತ ಚಲಾಯಿಸಿದ ಅಮೂಲ್ಯ ದಂಪತಿ

ಅಮೂಲ್ಯ
ಅಮೂಲ್ಯ

12.09ತುಮಕೂರಿನ ಸಖಿ ಮತಗಟ್ಟೆಯಲ್ಲಿ ಲೀಸಾ ಎಂಬುವರು ಮೊದಲ ಬಾರಿಗೆ ಮತ ಚಲಾಯಿಸಿದರು.

ಲೀಸಾ
ಲೀಸಾ

12.06 ಬೆಂಗಳೂರಿನಲ್ಲಿ ಮತ ಚಲಾಯಿಸಿದ ನಟಿಯರಾದಕಾರುಣ್ಯ ರಾಮ್, ಶ್ರದ್ಧಾ ಶ್ರೀನಾಥ್ ಮತ್ತು ನಟ ಗಣೇಶ್.

ಕಾರುಣ್ಯ ರಾಮ್, ಶ್ರದ್ಧಾ ಶ್ರೀನಾಥ್
ಕಾರುಣ್ಯ ರಾಮ್, ಶ್ರದ್ಧಾ ಶ್ರೀನಾಥ್
ಗಣೇಶ್
ಗಣೇಶ್

11.57 ಹಾಸನ ಜಿಲ್ಲೆಹೊಳೆನರಸೀಪುರ ತಾಲ್ಲೂಕುಪಡುವಲಹಿಪ್ಪೆಯಲ್ಲಿ ಸಂಸದ ಎಚ್.ಡಿ.ದೇವೇಗೌಡ, ಪತ್ನಿ ಚನ್ನಮ್ಮ ಹಾಗೂ ಸಚಿವ ಎಚ್.ಡಿ‌.ರೇವಣ್ಣ , ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಮತಗಟ್ಟೆ 244ರಲ್ಲಿ ಹಕ್ಕು ಚಲಾಯಿಸಿದರು.

11.54ಹಾಸನ ಜಿಲ್ಲೆಬೇಲೂರು ತಾಲೂಕಿನ ಅಂಗಡಿಹಳ್ಳಿಯ ಮತಗಟ್ಟೆಗೆ ಹಕ್ಕಿಪಿಕ್ಕಿ‌ ಸಮುದಾಯದ ಮಹಿಳೆಯರು ಆದಿವಾಸಿಗಳ ಸಾಂಪ್ರದಾಯಿಕ ವೇಷಧರಿಸಿ ಮತದಾನದಲ್ಲಿ ಪಾಲ್ಗೊಂಡು ಗಮನ ಸೆಳೆದರು. ಹಕ್ಕಿಪಿಕ್ಕಿ ಸಮುದಾಯದ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿರುವ ಗ್ರಾಮದ ಎಂಚನ, ಕಾಂಚನ್ಬಿ ಹಾಗೂ ಆನಂದ ಎಂಬವರು ಆದಿವಾಸಿ ಸಾಂಪ್ರದಾಯಿಕ ಉಡುಗೆಯಲ್ಲಿ ಮತಗಟ್ಟೆಗೆ ಬಂದಿದ್ದರು. ವಿವಿಧ ವಿನ್ಯಾಸದ ಮಣಿ ಸರಗಳು, ತಲೆಗೆ ಹೂವು, ನವಿಲುಗರಿಯ ಕಿರೀಟ ಧರಿಸಿದ್ದ ಮಹಿಳೆಯರು ಎಲ್ಲರ ಆಕರ್ಷಣೆ ಕೇಂದ್ರವಾಗಿದ್ದರು.

ಅಲೆಮಾರಿಗಳ ಅಲಂಕಾರ
ಅಲೆಮಾರಿಗಳ ಅಲಂಕಾರ

11.45 ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕು ದೊಡ್ಡನಕುಂಟೆಯ ಮತಗಟ್ಟೆ ಮುಂದೆ ಐಸ್‌ಕ್ಯಾಂಡಿ ಸವಿದ ಮತದಾರರು.

ದೊಡ್ಡನಕುಂಟೆ ಗ್ರಾಮ
ದೊಡ್ಡನಕುಂಟೆ ಗ್ರಾಮ

11.39ಮಂಗಳೂರು ಸಮೀಪದ ಇಂದಬೆಟ್ಟು ಗ್ರಾಮದಲ್ಲಿ ಮದುವೆ ಮಂಟಪಕ್ಕೆ ತೆರಳುವ ಮುನ್ನ ವಧು ಶೋಭಾ ಅವರು ಮತ ಚಲಾಯಿಸಿದರು. ಬೆಳ್ತಂಗಡಿಯಲ್ಲಿ ಮೂಡಿಗೆರೆ ತಾಲೂಕಿನ ನಿಡುವಳೆ ರಮೇಶ್ ಎಂಬವರ ಜೊತೆಗೆ ಶೋಭಾ ಅವರ ಮದುವೆ ನಡೆಯಲಿದೆ.

ಶೋಭಾ
ಶೋಭಾ

11.35 ರಾಮನಗರದ ಅರ್ಚಕರಹಳ್ಳಿಯಲ್ಲಿ ಇರುವ ಆದಿಚುಂಚನಗಿರಿ ಶಾಖಾ ಮಠಕ್ಕೆ ಗುರುವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕುಟುಂಬದೊಂದಿಗೆ ಭೇಟಿ ನೀಡಿ ನಿರ್ಮಲಾನಂದನಾಥ ಸ್ವಾಮೀಜಿ ಜೊತೆ ಚರ್ಚಿಸಿದರು.

ಆದಿಚುಂಚನಗಿರಿ ಶ್ರೀ
ಆದಿಚುಂಚನಗಿರಿ ಶ್ರೀ

11.30 ಚಿಕ್ಕಮಗಳೂರಿನ ಬಸವನಹಳ್ಳಿಯ ಮತಕೇಂದ್ರದಲ್ಲಿ ಶಾಸಕ ಸಿ.ಟಿ.ರವಿ ಮತ್ತು ಪತ್ನಿ ಪಲ್ಲವಿಮತ ಚಲಾಯಿಸಿದರು.

ಚಿಕ್ಕಮಗಳೂರು
ಚಿಕ್ಕಮಗಳೂರು

11.27 ಬೆಂಗಳೂರಿನ ಇಂಟರ್‌ನ್ಯಾಷನಲ್ ಅಕಾಡೆಮಿಯಲ್ಲಿ ಮತ ಚಲಾಯಿಸಿದ ಶತಾಯುಷಿ ಲೇಖಕ, ನಿಘಂಟು ಹಾಗೂವ್ಯಾಕರಣ ತಜ್ಞ ಜಿ.ವೆಂಕಟಸುಬ್ಬಯ್ಯ

ಜಿ.ವೆಂಕಟಸುಬ್ಬಯ್ಯ
ಜಿ.ವೆಂಕಟಸುಬ್ಬಯ್ಯ

11.16 ಬೆಂಗಳೂರು ಕೇಂದ್ರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಆಟೊರಿಕ್ಷಾದಲ್ಲಿ ಮತಗಟ್ಟೆಗೆ ಬಂದು ಎಲ್ಲರ ಗಮನ ಸೆಳೆದರು.

ರಿಜ್ವಾನ್ ಅರ್ಷದ್
ರಿಜ್ವಾನ್ ಅರ್ಷದ್

11.11 ತುಮಕೂರು ಜಿಲ್ಲೆ ಹುಳಿಯಾರು ಹೋಬಳಿ ಸೋಮೇನಹಳ್ಳಿ ಗ್ರಾಮದ ಮತಗಟ್ಟೆಗೆ ಮತದಾರರ ಗುರುತಿನ ಚೀಟಿಯೊಂದಿಗೆ ಮತ ಚಲಾಯಿಸಲು ಬಂದಿದ್ದ ಎಂ.ಕೆ.ಖಲೀಲ್ ಅವರು ಮತದಾರರ ಪಟ್ಡಿಯಲ್ಲಿ ತಮ್ಮ ಹೆಸರು ಡಿಲೀಟ್ ಆಗಿದ್ದ ಕಾರಣಮತದಾನದಿಂದ ವಂಚಿತರಾದರು. ಯುವ ಮತದಾರ ಬೇಸರದಿಂದ ಮನೆಯತ್ತ ಹೆಜ್ಜೆ ಹಾಕಿದರು.

ಖಲೀಲ್
ಖಲೀಲ್

11.07ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಮತದಾನ ಮಾಡಿದರು.

ಪಿ.ಸಿ.ಮೋಹನ್
ಪಿ.ಸಿ.ಮೋಹನ್

11.06 ಬೆಂಗಳೂರಿನಲ್ಲಿ ಮತ ಚಲಾಯಿಸಿದ ನಟಿಯರಾದ ಸಂಯುಕ್ತ ಹೊರನಾಡು ಮತ್ತು ಪ್ರಣೀತ ಸುಭಾಷ್

ಬೆಂಗಳೂರು
ಬೆಂಗಳೂರು

10.59 ಚಿತ್ರದುರ್ಗದಲ್ಲಿ ಮತ ಚಲಾಯಿಸಿದ ವಿವಿಧ ಮಠಾಧೀಶರು.

ಚಿತ್ರದುರ್ಗ
ಚಿತ್ರದುರ್ಗ

10.54 ಬೆಂಗಳೂರು ಮಲ್ಲೇಶ್ವರಂನಲ್ಲಿರುವ ಎಂಇಎಸ್ ಕಾಲೇಜಿನ ಮತಗಟ್ಟೆಯಲ್ಲಿ ಮತದಾನದ ಸರತಿ ಸಾಲಿನಲ್ಲಿ ನಿಂತಿರುವ ನಟ ಜಗ್ಗೇಶ್.

ಸರದಿಯಲ್ಲಿ ನಿಂತಿರುವ ಜಗ್ಗೇಶ್
ಸರದಿಯಲ್ಲಿ ನಿಂತಿರುವ ಜಗ್ಗೇಶ್

10.51 ತುಮಕೂರು ಜಿಲ್ಲೆ ತೋವಿನಕೆರೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಹಲವು ದಶಕಗಳ ದ್ವೇಷ ಮರೆತು ಮತಗಟ್ಟೆ ಬಳಿ ಒಂದಾಗಿ ನಿಂತು ಮತದಾರರಿಗೆ ತಮ್ಮ ಅಭ್ಯರ್ಥಿಗೆ ಮತ ನೀಡಲು ಮನವಿ ಮಾಡಿದರು.

ತೋವಿನಕೆರೆ
ತೋವಿನಕೆರೆ

10.50 ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿಯ ಸೂಕ್ಷ್ಮಮತಗಟ್ಟೆಗೆ(157) ಸಶಸ್ತ್ರಪೊಲೀಸರಭದ್ರತೆಯ ಒದಗಿಸಲಾಗಿದೆ.

ಹೊಳವನಹಳ್ಳಿ
ಹೊಳವನಹಳ್ಳಿ

10.47 ಚಾಮರಾಜನಗರ ತಾಲ್ಲೂಕಿನ ಗಡಿ ಭಾಗ ಪುಣಜನೂರು ಆಸು ಪಾಸಿನ ಮತಗಟ್ಟೆಗಳಲ್ಲಿ ಉತ್ಸಾಹದ ಮತದಾನ.

ಪುಣಜನೂರು
ಪುಣಜನೂರು

10.38 ಚಿಕ್ಕಬಳ್ಳಾಪುರ ಜಿಲ್ಲೆಚಿಂತಾಮಣಿ ತಾಲ್ಲೂಕಿನ ಎಗವಮಿಂಡಿಗಲ್ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ. ಕಳೆದ ನಾಲ್ಕೈದು ತಿಂಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಸ್ಥರು. ಖಾಲಿ ಕೊಡಗಳ ಸಮೇತ ಪ್ರತಿಭಟನೆ. ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ಹಲವು ಬಾರಿ ಮನವಿ ಮಾಡಿದರೂ ಕ್ರಮ ಕೈಗೊಳ್ಳದ ಜಿಲ್ಲಾಡಳಿತದ ವಿರುದ್ಧ ಆಕ್ರೋಶ. ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಮತದಾನ ಬಹಿಷ್ಕಾರ. ಬಣಗುಡುತ್ತಿರುವ ಮತಗಟ್ಟೆ.

ಚಿಂತಾಮಣಿ ತಾಲ್ಲೂಕಿನ ಎಗವಮಿಂಡಿಗಲ್ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ
ಚಿಂತಾಮಣಿ ತಾಲ್ಲೂಕಿನ ಎಗವಮಿಂಡಿಗಲ್ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ

10.30 ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ನ್ಯೂ ತಿಪ್ಪಸಂದ್ರ ಮತಗಟ್ಟೆಯಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ಪತ್ನಿ ಮಂಜುಳಾ ಲಿಂಬಾವಳಿ ಅವರ ಜೊತೆಗೆ ಮತದಾನ ಮಾಡಿದರು.

ಬೆಂಗಳೂರಿನಲ್ಲಿ ಲಿಂಬಾವಳಿ ದಂಪತಿ ಮತದಾನ
ಬೆಂಗಳೂರಿನಲ್ಲಿ ಲಿಂಬಾವಳಿ ದಂಪತಿ ಮತದಾನ

10.20ಚಾಮರಾಜನಗರಮತಗಟ್ಟೆ ಸಂಖ್ಯೆ 48ರಲ್ಲಿ ಕರ್ತವ್ಯ ನಿರತ ಮತಗಟ್ಟೆ ಅಧಿಕಾರಿ ಶಾಂತಮೂರ್ತಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರು ಮೂಲತಃ ಹನೂರು ತಾಲ್ಲೂಕಿನವರು.ಹೆಚ್ಚುವರಿ ಮತಗಟ್ಟೆ ಅಧಿಕಾರಿಯಾಗಿದ್ದರು. ತಕ್ಷಣವೇ ಜಿಲ್ಲಾ ಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಫಲಕಾರಿಯಾಗಲಿಲ್ಲ. ಶಾಂತಮೂರ್ತಿ ಅವರು ಹನೂರು ಜಿ.ವಿ ಗೌಡ ಕಾಲೇಜಿನಲ್ಲಿ ಉಪನ್ಯಾಸಕರು

ಶಾಂತಮೂರ್ತಿ
ಶಾಂತಮೂರ್ತಿ

10.25 ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀ ಬಿ.ಎನ್. ಬಚ್ಚೇಗೌಡ ಅವರ ಹೊಸಕೋಟೆಯಲ್ಲಿ ಪತ್ನಿಯ ಜೊತೆಗೆ ಮತ ಚಲಾಯಿಸಿದರು.

ಮತ ಚಲಾಯಿಸಿದ ಬಚ್ಚೇಗೌಡ ದಂಪತಿ
ಮತ ಚಲಾಯಿಸಿದ ಬಚ್ಚೇಗೌಡ ದಂಪತಿ

10.16 ಹಾಸನ ಜಿಲ್ಲೆಅರಕಲಗೂಡು ತಾಲ್ಲೂಕಿನ ಹನ್ಯಾಳು ಗ್ರಾಮದ ಮತಗಟ್ಟೆಯಲ್ಲಿ ಬಿಜೆಪಿ ಅಭ್ಯರ್ಥಿ ಎ.ಮಂಜು ಅವರು ಪತ್ನಿ ತಾರಾ ಜತೆ ಮತ ಚಲಾಯಿಸಿದರು.

ಎ.ಮಂಜು, ತಾರಾ ದಂಪತಿ
ಎ.ಮಂಜು, ತಾರಾ ದಂಪತಿ

10.14ಹಾಸನ ಜಿಲ್ಲೆಬೇಲೂರು ತಾಲೂಕು ಚಿಕ್ಕಬ್ಯಾಡಗೆರೆಯಲ್ಲಿ ಸ್ಥಳೀಯರು ದಿಢೀರ್ ಪ್ರತಿಭಟನೆ ನಡೆಸಿ ಮತದಾನ ಬಹಿಷ್ಕರಿಸುವ ಬೆದರಿಕೆಯೊಡ್ಡಿದರು.ಚುನಾವಣೆಸಂದರ್ಭಆಮಿಷವೊಡ್ಡಿ ಮತ ಹಾಕಿಸಿಕೊಳ್ಳುತ್ತೀರಿ.ನಂತರ ನಮ್ಮ ಸಮಸ್ಯೆ ಕೇಳುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

10.12ಹಾಸನ ಜಿಲ್ಲೆಅರಕಲಗೂಡು ತಾಲ್ಲೂಕಿನ ಕದಟ್ಟೆಪುರ ಮತಗಟ್ಟೆಯಮತಯಂತ್ರದಲ್ಲಿ ದೋಷ ಕಾಣಿಸಿಕೊಂಡಿತ್ತು. ದೋಷ ಸರಿಪಡಿಸಿದ ಬಳಿಕ ಏಜಂಟರ ಸಮ್ಮುಖದಲ್ಲಿಎರಡನೇಬಾರಿಗೆ ಅಣಕು ಮತದಾನ ನಡೆಸಲಾಯಿತು. ನಂತರವಷ್ಟೇಮತದಾನ ಪ್ರಕ್ರಿಯೆ ಆರಂಭವಾಯಿತು

10.09 ಬೆಂಗಳೂರುಬನಶಂಕರಿಯಕಿಮ್ಸ್ ಕಾಲೇಜಿನಲ್ಲಿ ಕ್ರಿಕೆಟ್ ಆಟಗಾರ ಅನಿಲ್‌ ಕುಂಬ್ಳೆ ಮತ್ತು ನಟಿ ಪ್ರಣೀತಾ ಸುಭಾಷ್ ಮತ ಚಲಾಯಿಸಿದರು.

ಸಾಲಿನಲ್ಲಿ ನಿಂತಿರುವ ಅನಿಲ್‌ ಕುಂಬ್ಳೆ
ಸಾಲಿನಲ್ಲಿ ನಿಂತಿರುವ ಅನಿಲ್‌ ಕುಂಬ್ಳೆ
ಪ್ರಣೀತಾ
ಪ್ರಣೀತಾ

10.05ಗುಬ್ಬಿ ತಾಲ್ಲೂಕಿನ ವಿವಿಧೆಡೆಮತಯಂತ್ರದಲ್ಲಿ ತಾಂತ್ರಿಕ ದೋಷ. ನಾಲ್ಕು ಮತಗಟ್ಟೆಗಳ ಮತಯಂತ್ರದಲ್ಲಿ ತಾಂತ್ರಿಕದೋಷ ಕಾಣಿಸಿಕೊಂಡು ಮತದಾನ ವಿಳಂಬವಾಗಿದೆ. ಕಾಡಶೆಟ್ಟಿಹಳ್ಳಿ(164), ಅದಗೊಂಡನಹಳ್ಳಿ (165), ಕಡಬ(178) ಹಾಗೂ ಅಳಿಲುಘಟ್ಟ(45, 46) ಮತಗಟ್ಟೆಗಳಮತಯಂತ್ರದಲ್ಲಿ ದೋಷ ಕಾಣಿಸಿದೆ. ಮತಯಂತ್ರ ಬದಲಾವಣೆ ಮಾಡಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ.

10.03 ಮೈಸೂರಿನ ಶಾರದಾದೇವಿನಗರದ ಮತಗಟ್ಟೆಯಲ್ಲಿಅಜ್ಜಿ ರತ್ಮಮ್ಮ, ಪುತ್ರ ವಾಸುಕಿ ಹಾಗೂ ಮೊಮ್ಮಗ ಪ್ರಣವ್ ಮತ ಚಲಾಯಿಸಿದರು. ಪ್ರಣವ್‌ಗೆ ಇದು ಮೊದಲ ಮತದಾನ.

Caption
Caption

9.59 ಕೋಲಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಜಗದೀಶ್‌ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಆವರಣದ ಮತಗಟ್ಟೆ ಸಂಖ್ಯೆ 108ರಲ್ಲಿ ಜನರೊಂದಿಗೆ ಸಾಲಿನಲ್ಲಿ ನಿಂತು ಮತದಾನ ಮಾಡಿದರು.

Caption
Caption

9.56 ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಡೆ ಸಂಖ್ಯೆ 167ರ ಓಬಳಾಪುರ ಮತಗಟ್ಟೆಯಲ್ಲಿ 78 ವರ್ಷದ ನಂಜಮ್ಮ ಗಾಲಿ ಕುರ್ಚಿಯಲ್ಲಿ ಬಂದು ಮತದಾನ ಮಾಡಿದರು.

Caption
Caption

9.53 ಹಾಸನ ಜಿಲ್ಲೆಯಲ್ಲಿಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಶಿಕ್ಷಕಿ ವನಜಾ ಅವರು253 ಮತಗಟ್ಟೆಯ ತಟ್ಟೇಕೆರೆ ಶಾಲಾ ಆವರಣದಲ್ಲಿ ಪರಿಸರ ಉಳಿವಿಗಾಗಿ ಸಸಿ ನೆಟ್ಟರು.

9.50 ರಾಮನಗರದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಪತ್ನಿ ಅನಿತಾ ಕುಮಾರಸ್ವಾಮಿ ಮತ್ತು ಪುತ್ರ ನಿಖಿಲ್ ಕುಮಾರಸ್ವಾಮಿ ಅವರೊಂದಿಗೆ ಮತ ಚಲಾಯಿಸಿದರು.

ರಾಮನಗರ
ರಾಮನಗರ

9.49 ಹಾಸನಹಿರೀಸಾವೆ ಹೋಬಳಿಯ ಮೂಕಿಕೆರೆ ಗ್ರಾಮದ ಮತಗಟ್ಟೆ 31ರಲ್ಲಿ ವಿವಿ ಪ್ಯಾಟ್ ನಲ್ಲಿ ತಾಂತ್ರಿಕ ತೊಂದರೆ. ಮೂವತ್ತು ನಿಮಿಷ ಮತದಾನ ಸ್ಥಗಿತ. ಸ್ಥಳಕ್ಕೆ ತಹಶೀಲ್ದಾರ ಮಾರುತಿ ಮತ್ತು ತಂಡ ಆಗಮಿಸಿ ವಿವಿ ಪ್ಯಾಟ್ ಬದಲಾವಣೆ ಮಾಡಿದ ನಂತರ ಮತದಾನ ಮುಂದುವರಿಕೆ.

9.46ಕೊಡಗು ಜಿಲ್ಲೆ ಅಲ್ಲಲ್ಲಿಕೈಕೊಟ್ಟ ಮತಯಂತ್ರಜಿಲ್ಲೆಯ 543 ಮತಗಟ್ಟೆಗಳ ಪೈಕಿ 539 ಮತಗಟ್ಟೆಗಳಲ್ಲಿ ಮತದಾನ ಆರಂಭವಾಗಿದೆ. ಸುಂಟಿಕೊಪ್ಪದ ಎರಡು ಮತಗಟ್ಟೆಗಳಲ್ಲಿ ಇವಿಎಂ ಕೈಕೊಟ್ಟಿದೆ. ವಿರಾಜಪೇಟೆ ತಾಲ್ಲೂಕಿನ ಕರಡಿಗೋಡು ಹಾಗೂ ಮರಗೋಡಿನಲ್ಲಿ ಸಮಸ್ಯೆಯಾಗಿದೆ.ಉಳಿದಂತೆ ಬೆಳಿಗ್ಗೆಯೇ ಮತದಾನ ಬಿರುಸಾಗಿ ನಡೆಯುತ್ತಿದೆ.

ಕೊಡಗು
ಕೊಡಗು

9.42 ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ಮತ ಚಲಾಯಿಸಿದ ನಂತರ ಮಂದಹಾಸ ಬೀರಿದರು.

ತೇಜಸ್ವಿ ಸೂರ್ಯ
ತೇಜಸ್ವಿ ಸೂರ್ಯ

9.40ಚಿಂತಾಮಣಿಯ ಸಮೀಪ ವೀರಪಲ್ಲಿಯಲ್ಲಿ 105 ವಯಸ್ಸಿನ ನರಸಿಂಹನಾಯ್ಡು ಮತ್ತು 96 ನರಸಮ್ಮ ದಂಪತಿಗಳು ಮತ ಚಲಾವಣೆಮಾಡಿದರು.

ಚಿಂತಾಮಣಿ
ಚಿಂತಾಮಣಿ

ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನಲ್ಲಿ ಮತದಾನ ಮಾಡಲೆಂದು ಭಜನೆ ಮಾಡುತ್ತಾ ಬಂದರು

9.37 ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಮತದಾನ ಬಿರುಸಿನಿಂದ ಸಾಗಿದ್ದು, ಬೆಳಿಗ್ಗೆ 9 ಗಂಟೆಯ ಹೊತ್ತಿಗೆ ಶೇ 9.80 ರಷ್ಟು ಮತದಾನವಾಗಿದೆ.

9.30 : ಚಿತ್ರದುರ್ಗದಲ್ಲಿಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮತ ಚಲಾವಣೆ ಮಾಡಿದರು.

ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

9.27 ಚಿಕ್ಕಬಳ್ಳಾಪುರದ ಮತಗಟ್ಟೆ ಸಂಖ್ಯೆ 162ರಲ್ಲಿ ಮೈತ್ರಿ ಅಭ್ಯರ್ಥಿ, ಸಂಸದ ವೀರಪ್ಪ ಮೊಯಿಲಿ ಅವರು ಪತ್ನಿ ಮಾಲತಿ, ಪುತ್ರ ಹರ್ಷ ಮತ್ತು ಪುತ್ರಿ ಹಂಸ ಅವರ ಸಮೇತ ಮತ ಚಲಾಯಿಸಲು ಮತಗಟ್ಟೆ ಹೊರಗೆ ಸರದಿ ಸಾಲಿನಲ್ಲಿ ನಿಂತಿದ್ದರು.

ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ

9.25 ಚಿತ್ರದುರ್ಗ ತಾಲ್ಲೂಕಿನ ಒಬೇನಹಳ್ಳಿಯಲ್ಲಿ ಮತದಾನ ಆರಂಭವಾಗಿಲ್ಲ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಗ್ರಾಮಸ್ಥರ ಒತ್ತಾಯ.

9.23ಹಾಸನ–ಸಚಿವ ರೇವಣ್ಣ ದಂಪತಿಗಳಿಂದ ಟೆಂಪಲ್ ರನ್

ಮತದಾನಕ್ಕೂ ಮುನ್ನ ಹೊಳೆನರಸೀಪುರ ತಾಲ್ಲೂಕಿನ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ನಮಿಸಿದ ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ತಂದೆಯೂ ಆಗಿರುವ ಸಚಿವ ಎಚ್‌.ಡಿ.ರೇವಣ್ಣ.ಪಡುವಲಹಿಪ್ಪೆಯ ಶ್ರೀ ವಿದ್ಯಾಗಣಪತಿ, ಶ್ರೀ ಕೊದಂಡರಾಮಸ್ವಾಮಿ, ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಕೆ ಪುತ್ರ ಪ್ರಜ್ವಲ್, ನಿಖಿಲ್, ದೇವೇಗೌಡ ಸೇರಿದಂತೆ ಮೈತ್ರಿ ಪಕ್ಷದ ಅಭ್ಯರ್ಥಿಗಳನ್ನುಗೆಲ್ಲಿಸುವಂತೆದೇವರಿಗೆ ಮೊರೆ.ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಸಹ ಹೊಳೆನರಸೀಪುರದ ಲಕ್ಷ್ಮೀನರಸಿಂಹ ಸ್ವಾಮಿ, ರಾಘವೇಂದ್ರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.

ಹೊಳೆನರಸೀಪುರದಲ್ಲಿ ರೇವಣ್ಣ ದಂಪತಿ
ಹೊಳೆನರಸೀಪುರದಲ್ಲಿ ರೇವಣ್ಣ ದಂಪತಿ

9.19 ಮೈಸೂರಿನಲ್ಲಿ ರಾಜ ವಂಶಸ್ಥ ಯದುವೀರ ಮತ್ತು ಪತ್ನಿ ತ್ರಿಷಿಕಾ ಕುಮಾರಿ ಮತ ಚಲಾಯಿಸಿದರು.

ಮೈಸೂರು
ಮೈಸೂರು

9.15 ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಮತ ಚಲಾಯಿಸಿದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್

ನಳಿನ್ ಕುಮಾರ್ ಕಟೀಲ್
ನಳಿನ್ ಕುಮಾರ್ ಕಟೀಲ್

9.11 ತುಮಕೂರುಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜ್ ಅವರು ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಪಕ್ಷದ ವರಿಷ್ಠರ ಸೂಚನೆ ಮೇರೆಗೆ ಹಿಂದಕ್ಕೆ ಪಡೆದಿದ್ದ ಕೆ.ಎನ್.ರಾಜಣ್ಣ ಅವರನ್ನು ಬೆಳಿಗ್ಗೆ ಕ್ಯಾತ್ಸಂದ್ರದ ಮನೆಯಲ್ಲಿ ಭೇಟಿ ಮಾಡಿದರು.

ತುಮಕೂರು
ತುಮಕೂರು

ಹಾಸನ ಮತ ಚಲಾಯಿಸಲು ಸಾಲಿನಲ್ಲಿ ನಿಂತಿರುವ ಜನರು

9.09ಚಿತ್ರದುರ್ಗ ಜಿಲ್ಲಾ ಪಂಚಾಯತಿ ಸಿಇಒ ಸತ್ಯಭಾಮಾ ಅವರು ಇಲ್ಲಿನ ಸೇಂಟ್ ಜೋಸೆಫ್ ಹೈಸ್ಕೂಲಿನಲ್ಲಿ ಮತ ಚಲಾಯಿಸಿದರು.

ಚಿತ್ರದುರ್ಗ
ಚಿತ್ರದುರ್ಗ

9.06 ಕನಕಪುರ ತಾಲ್ಲೂಕಿನ ಕೆರಳಾಳುಸಂದ್ರ ಮತಗಟ್ಟೆಯಲ್ಲಿ ತಾಂತ್ರಿಕ ದೋಷವಿದ್ದ ಇವಿಎಂ ಯಂತ್ರಗಳನ್ನು ಚುನಾವಣಾ ಸಿಬ್ಬಂದಿ ಬದಲಿಸಿದರು.

ಕನಕಪುರ
ಕನಕಪುರ

9.05ಚಿತ್ರದುರ್ಗದಧವಳಗಿರಿ ಬಡಾವಣೆ ಬರಗೇರಮ್ಮ ಶಾಲೆಯಲ್ಲಿ ಸ್ಥಾಪಿಸಿರುವ ಮತ ಕೇಂದ್ರದಲ್ಲಿಕಾಂಗ್ರೆಸ್ ಆಭ್ಯರ್ಥಿ ಚಂದ್ರಪ್ಪ ಪತ್ನಿ ಜೊತೆಗೆಮತದಾನ ಮಾಡಿದರು.ಈ ಬಾರಿ ಮೂರು ಲಕ್ಷ ಮತಗಳ ಅಂತರದಿಂದ ಗೆಲುವು ಖಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

9.05 ಚಿತ್ರದುರ್ಗ ವಿ.ವಿ.ಪ್ಯಾಟ್‌ನಲ್ಲಿ ದೋಷ: ಮತದಾನ ವಿಳಂಬ

ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಬಿರುಸಿನ ಮತದಾನ ನಡೆಯುತ್ತಿದ್ದು, ಮತಗಟ್ಟೆ ಎದುರು ಜನರು ಸಾಲುಗಟ್ಟಿ ನಿಂತಿದ್ದಾರೆ. ಬೆಳಿಗ್ಗೆ ಮತಗಟ್ಟೆಗೆ ಹಾಜರಾದ ಅನೇಕರು ಮೊದಲು ಮತ ಹಾಕಿ ಸಂಭ್ರಮಿಸಿದರು. ಬೆಳಗಿನಲ್ಲಿ ವಾಯು ವಿಹಾರಕ್ಕೆ ಬಂದಿದ್ದವರು ಮತಗಟ್ಟೆಗೆ ಧಾವಿಸಿ ಹಕ್ಕು ಚಲಾವಣೆ ಮಾಡಿದರು.

ಚೋಳಗಟ್ಟದ ಮತಗಟ್ಟೆ ಸಂಖ್ಯೆ 77ರಲ್ಲಿ ವಿ.ವಿ.ಪ್ಯಾಟ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮತದಾನ ವಿಳಂಬವಾಗಿ ಆರಂಭವಾಯಿತು. ಮತಗಟ್ಟೆಗೆ ತೆರಳುವುದಕ್ಕೂ ಮೊದಲು ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರು ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದರು. ವಿಘ್ನೇಶ, ಸಾಯಿಬಾಬಾ, ಆಂಜನೇಯಸ್ವಾಮಿ ದೇವಸ್ಥಾನಕ್ಕೆ ತೆರಳಿ ಆಶೀರ್ವಾದಪಡೆದರು.

ಚಿತ್ರದುರ್ಗ
ಚಿತ್ರದುರ್ಗ

8.57 ಬೆಂಗಳೂರು ಬನಶಂಕರಿಯ ಬಿಎನ್ಎಂ ಶಾಲೆಯಲ್ಲಿ ಮತ ಚಲಾಯಿಸಲು ಕಾಯುತ್ತಿರುವ ನಟ ರಮೇಶ್ ಅರವಿಂದ್

ಬೆಂಗಳೂರು ಬನಶಂಕರಿ
ಬೆಂಗಳೂರು ಬನಶಂಕರಿ

8.56 ಮಳವಳ್ಳಿ ತಾಲ್ಲೂಕು ಚಿಕ್ಕಮುಲಗೂಡು ಗ್ರಾಮದಲ್ಲಿ ಅಯ್ಯಪ್ಪ ಮಾಲಾಧಾರಿಗಳಿಂದ ಮತದಾನ. ಭಜನೆ ಮಾಡುತ್ತಲೇ ಮತಗಟ್ಟೆಗೆಬಂದ ಭಕ್ತರು.

ಮಳವಳ್ಳಿ ತಾಲ್ಲೂಕು ಚಿಕ್ಕಮುಲಗೂಡು ಗ್ರಾಮ
ಮಳವಳ್ಳಿ ತಾಲ್ಲೂಕು ಚಿಕ್ಕಮುಲಗೂಡು ಗ್ರಾಮ

8.55ಚಾಮರಾಜನಗರ ಜಿಲ್ಲೆಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೊಡ್ಡಾಣೆ ಗ್ರಾಮದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಚುನಾವಣೆ ಬಹಿಷ್ಕಾರ ಮಾಡಿದ್ದಾರೆ.

8.40 ತುಮಕೂರಿನ ಅಶೋಕನಗರದ ಶಾರದಾ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮತಗಟ್ಡೆಯಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷದ ಕಾರಣ ಹತ್ತುನಿಮಿಷ ಮತದಾನ ಸ್ಥಗಿತಗೊಳಿಸಲಾಗಿತ್ತು. ಮತಯಂತ್ರ ಬದಲಾವಣೆ ಮಾಡಿ ಮತದಾನಕ್ಕೆ ಅವಕಾಶ ಮಾಡಲಾಗಿದೆ.

8.32 ಗೌರಿಬಿದನೂರು ನಾಗಸಂದ್ರ ಗ್ರಾಮದಲ್ಲಿಇನ್ನೂ ಆರಂಭವಾಗದ ಮತದಾನ. ಸರದಿ ಸಾಲಿನಲ್ಲೇ ನಿಂತ ಸಚಿವ ಶಿವಶಂಕರರೆಡ್ಡಿ.

8.31 ಬಾಗೇಪಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಂ 52 ರ ಮತಗಟ್ಟೆಯಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷ. ಕಳೆದ 1 ಗಂಟೆಯಿಂದ ಸರಣಿ ಸಾಲಿನಲ್ಲಿ ಕಾಯುತ್ತಿರುವ ಮತದಾರರು. ಮತಗಟ್ಟೆ ಅಧಿಕಾರಿಗಳ ವಿರುದ್ಧ ಮತದಾರರ ಅಸಮಧಾನ.

ಬಾಗೇಪಲ್ಲಿ
ಬಾಗೇಪಲ್ಲಿ

8.30ಹಾಸನ ಜಿಲ್ಲೆಬೇಲೂರು ತಾಲೂಕು ಕೇಶವನಗರ ಮತಗಟ್ಟೆ ಮತಯಂತ್ರದಲ್ಲಿ ದೋಷ ಕಂಡು ಬಂದ ಕಾರಣ ಮತದಾನಅರ್ಧಗಂಟೆ ವಿಳಂಬವಾಗಿ ಆರಂಭವಾಯಿತು.ನಿಡುಗೋಡು ಗ್ರಾಮದಲ್ಲಿ ಕರೆಂಟ್ ಇರಲಿಲ್ಲ.ಕತ್ತಲ ಕಾರಣಕ್ಕೆ ಮತದಾನ ವಿಳಂಬವಾಯಿತು.ಶಾಲೆಯ ಚಾವಣಿ ಹೆಂಚು ತೆಗೆದು ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು.ಸಕಲೇಶಪುರ ತಾಲೂಕು ಹೇರೂರು ಮತಗಟ್ಟೆ ಸಂಖ್ಯೆ 284 ರಲ್ಲೂ ಮತದಾನ ವಿಳಂಬವಾಗಿದೆ.

8.33 ಬೆಂಗಳೂರು ಜಯನಗರ ಸಹಕಾರಿ ವಿದ್ಯಾಕೇಂದ್ರದ ಮತಗಟ್ಟೆಯ ಎದುರು ಉದ್ದನೆ ಸಾಲು ಕಂಡು ಬಂತು.

8.30 ಬೆಂಗಳೂರು ಬನಶಂಕರಿಯ ಭಾಗೀರತಿ ಬಾಯಿ ನಾರಾಯಣ್ ರಾವ್ (BNM) ಪಬ್ಲಿಕ್ ಶಾಲೆಯಲ್ಲಿ ಮತ ಚಲಾಯಿಸಲು ನೂಕು ನುಗ್ಗಲು ಕಂಡು ಬಂತು.

ಬೆಂಗಳೂರಿನ ಬನಶಂಕರಿ
ಬೆಂಗಳೂರಿನ ಬನಶಂಕರಿ

8.20ಮತ ಹಾಕಿ ಮದುವೆಯಾಗುವೆ... ಉಡುಪಿ ಜಿಲ್ಲೆ ಹೆಬ್ರಿಯ ಇಂದಿರಾನಗರ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಇಂದು ವಿವಾಹವಾಗಬೇಕಿದ್ದ ವಧು ಅಕ್ಷತ ಪ್ರಥಮ ಮತದಾರರಾಗಿ ಮತ ಚಲಾಯಿಸಿದ್ದು ವಿಶೇಷವಾಗಿತ್ತು.

ಹೆಬ್ರಿ
ಹೆಬ್ರಿ

8.15 ಮಂಗಳೂರಿನ ಗಾಂಧಿನಗರ ಶಾಲೆಗೆ83ರ ಹರೆಯದ ಆಂತೋಣಿ ಡಿಸೋಜ ಮತ ಚಲಾವಣೆಗೆಂದು ಬಂದಿದ್ದರು.

ಮಂಗಳೂರು
ಮಂಗಳೂರು

8.14 ಮಂಗಳೂರುಶಾಸಕ ವೇದವ್ಯಾಸ ಕಾಮತ್ ಮತದಾನಕ್ಕಾಗಿ ಗಾಂಧಿ ನಗರದ ಮತಕೇಂದ್ರದಲ್ಲಿ ಸಾಲಿನಲ್ಲಿ ನಿಂತಿದ್ದರು

ಮಂಗಳೂರು
ಮಂಗಳೂರು

8.04ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರು ತಾಯಿ, ಪತ್ನಿ, ಅಕ್ಕನ ಜತೆ ಇಲ್ಲಿನ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮತದಾನ ಮಾಡಿದರು.

ಪ್ರಮೋದ್ ಮಧ್ವರಾಜ್
ಪ್ರಮೋದ್ ಮಧ್ವರಾಜ್
ಉಡುಪಿ
ಉಡುಪಿ

8.03ಮತದಾನ ಮಾಡಿದ ತುಮಕೂರು ಸಿದ್ಧಗಂಗಾಮಠದ ಅಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ

ತುಮಕೂರು
ತುಮಕೂರು

7.56 ಉಡುಪಿ ಜಿಲ್ಲೆ ಅಜ್ಜರಕಾಡಿನಕ್ರಿಶ್ಚಿಯನ್ ಹೈಸ್ಕೂಲ್‌ನಲ್ಲಿ ಸಾಲುಗಟ್ಟಿ ನಿಂತಿರುವ ಮತದಾರರು

ಉಡುಪಿ
ಉಡುಪಿ

7.55ಉಡುಪಿಯಲ್ಲಿ ಉತ್ಸಾಹದಿಂದ ಮತಗಟ್ಟೆಗೆ ಧಾವಿಸುತ್ತಿರುವ ಜನರು

ಉಡುಪಿಜಿಲ್ಲೆಯ ವಿವಿಧೆಡೆಸರತಿಯಲ್ಲಿ ನಿಂತು ಮತದಾರರು ಹಕ್ಕು ಚಲಾಯಿಸುತ್ತಿರುವ ದೃಶ್ಯ ಕಂಡುಬಂತು.ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್ ಪತ್ನಿ ಸಮೇತ ಅಜ್ಜರಕಾಡಿನಲ್ಲಿರುವ ವಿವೇಕಾನಂದ ಶಾಲೆಯಲ್ಲಿ ಮತ ಹಾಕಿದರು. ಇಲ್ಲಿನ ಕ್ರಿಶ್ಚಿಯನ್ ಹೈಸ್ಕೂಲ್‌ನಲ್ಲಿ ವೃದ್ಧರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಕಂಡುಬಂದರು. ಕರಾವಳಿಯಲ್ಲಿ ಬಿಸಿಲಿನ ದಗೆ ಹೆಚ್ಚಾಗಿರುವುದರಿಂದ ಬೆಳಿಗ್ಗೆಯೇ ಮತದಾನ ಮಾಡುವವರ ಸಂಖ್ಯೆ ಹೆಚ್ಚು.

ಉಡುಪಿ ಜಿಲ್ಲೆಯಲ್ಲಿ ಮತ ಚಲಾಯಿಸಿದ ಆಸ್ಕರ್ ಫರ್ನಾಂಡಿಸ್
ಉಡುಪಿ ಜಿಲ್ಲೆಯಲ್ಲಿ ಮತ ಚಲಾಯಿಸಿದ ಆಸ್ಕರ್ ಫರ್ನಾಂಡಿಸ್

7.53 ಮೈಸೂರಿನಲ್ಲಿ ಮತದಾನ ನೀರಸವಾಗಿ ಆರಂಭವಾಗಿದೆ. ಜೆ.ಪಿ.ನಗರದ ಮಹದೇವಪುರದ ಮತಗಟ್ಟೆಯೊಂದರಲ್ಲಿ ಮತದಾನ ನೀರಸಗತಿಯಲ್ಲಿ ನಡೆಯುತ್ತಿದೆ.

ಮೈಸೂರು
ಮೈಸೂರು

7.49 ರಾಜಾಜಿನಗರದ ರಾಮಮಂದಿರದ'ಸಖಿ' ಮತಗಟ್ಟೆಯಲ್ಲಿ ಮತದಾನ ಮಾಡಲು ಸಾಲುಗಟ್ಟಿ ನಿಂತಿರುವ ಮತದಾರರು.

ರಾಜಾಜಿನಗರ
ರಾಜಾಜಿನಗರ
ಬಲ್ಮಠ
ಬಲ್ಮಠ

7.48 ಮಂಗಳೂರಿನ ಬಲ್ಮಠ ಮತಗಟ್ಟೆಯಲ್ಲಿ ಬೆಳಿಗ್ಗೆಯೇ ಮತದಾನಕ್ಕೆ ಸರತಿ ನಿಂತಿರುವುದು

7.45 ಬೆಂಗಳೂರಿನ ಜಯನಗರದಲ್ಲಿ ತಾಂತ್ರಿಕ ಸಮಸ್ಯೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಲಿಲ್ಲ.

7.42ಮಂಗಳೂರಿನ ಬಲ್ಮಠದಲ್ಲಿ ಮತ ಚಲಾಯಿಸಿದ ಮೈತ್ರಿ ಅಭ್ಯರ್ಥಿ ಮಿಥುನ್ ರೈ

7.41ಮೈಸೂರಿನಲ್ಲಿ ವಿಳಂಬ
ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ 230ರಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಮತದಾನ ಪ್ರಕ್ರಿಯೆ ಕೆಲಕಾಲ ತಡವಾಯಿತು. ಈಗ ತಂತ್ರಜ್ಞರು ಸರಿಪಡಿಸಿದ್ದು ಮತದಾನ ಪ್ರಕ್ರಿಯೆ ನಡೆಯುತ್ತಿದೆ.

7.40ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮತದಾನ ಆರಂಭ

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ 2672 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆಯು ಗುರುವಾರ ಬೆಳಿಗ್ಗೆ 7ಕ್ಕೆ ಆರಂಭಗೊಂಡಿತು. ರಾಮನಗರದ ಸರ್ಕಾರಿ ಉರ್ದು ಶಾಲೆಯಲ್ಲಿನ ಮತಗಟ್ಟೆಯಲ್ಲಿನ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಮತದಾನವು 20 ನಿಮಿಷ ತಡವಾಯಿತು. ಅಲ್ಲಲ್ಲಿ ಮತಗಟ್ಟೆಗಳ ಬಳಿ ಜನರ ಸಾಲು ಕಂಡುಬಂದಿತು.

ದೇಶದ ಅತಿದೊಡ್ಡ ಲೋಕಸಭಾ ಕ್ಷೇತ್ರಗಳಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಸಹ ಒಂದಾಗಿದೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳು ಇದ್ದು, ಒಟ್ಟು 24.97 ಲಕ್ಷ ಮತದಾರರು ಹಕ್ಕು ಚಲಾಯಿಸುವ ಅಧಿಕಾರ ಹೊಂದಿದ್ದಾರೆ.

7.38ಕುಟುಂಬ ಸದಸ್ಯರ ಜೊತೆಗೆ ಮತದಾನ ಮಾಡಿದ ಉತ್ತರ ಕ್ಷೇತ್ರದ ಅಭ್ಯರ್ಥಿ ಡಿ.ವಿ.ಸದಾನಂದಗೌಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT