‘ಮದಕರಿ ನಾಯಕ’ದಲ್ಲಿ ದರ್ಶನ್ ಬದಲು ಸುದೀಪ್‍ ನಟಿಸಲಿ

7
ಪ್ರಸನ್ನಾನಂದಪುರಿ ಸ್ವಾಮೀಜಿ ಅಭಿಮತ

‘ಮದಕರಿ ನಾಯಕ’ದಲ್ಲಿ ದರ್ಶನ್ ಬದಲು ಸುದೀಪ್‍ ನಟಿಸಲಿ

Published:
Updated:
Deccan Herald

ಹರಿಹರ: ಚಿತ್ರದುರ್ಗದ ‘ಗಂಡುಗಲಿ ಮದಕರಿ ನಾಯಕ’ನ ಸಿನಿಮಾದಲ್ಲಿ ಮದಕರಿ ನಾಯಕನ ಪಾತ್ರದಲ್ಲಿ ನಟ ದರ್ಶನ ಬದಲು ಸುದೀಪ್ ನಟಿಸಲಿ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಅಭಿಪ್ರಾಯಪಟ್ಟರು.

‘ಗಂಡುಗಲಿ ಮದಕರಿ ನಾಯಕ’ ಸಿನಿಮಾದ ಬಗ್ಗೆ ಮಾಧ್ಯಮಗಳಲ್ಲಿನ ಚರ್ಚೆ ಕುರಿತು ತಾಲ್ಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ನಮ್ಮ ಸಮುದಾಯದ ನಟ ಸುದೀಪ್ ಅವರು ನಟಿಸಿದರೆ ಕಥೆಗೆ ನಿಜವಾದ ಅರ್ಥ ಬರುತ್ತದೆ. ಇದು ನಮ್ಮ ಸಮಾಜದ ಜನರ ಒತ್ತಾಯ ಕೂಡ ಆಗಿದೆ’ ಎಂದು ಸ್ವಾಮೀಜಿ ಪ್ರತಿಕ್ರಿಯಿಸಿದರು.

‘2010ರಲ್ಲಿ ನಟ ಸುದೀಪ್ ಅವರನ್ನು ಮದಕರಿ ನಾಯಕ ಚಿತ್ರದಲ್ಲಿ ನಟಿಸಲು ಸಮುದಾಯದ ಮುಖಂಡರು ಒತ್ತಾಯಿಸಿದ ಸಂದರ್ಭದಲ್ಲಿ ಅವರು ತಾವು ಹಿಂದಿ ಮತ್ತು ತೆಲುಗು ಚಿತ್ರಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಬಿಡುವು ಇಲ್ಲ, ಮುಂದಿನ ದಿನಗಳಲ್ಲಿ ಮದಕರಿ ನಾಯಕ ಸಿನಿಮಾದಲ್ಲಿ ನಟಿಸುವುದಾಗಿ ಮಾತು ನೀಡಿದ್ದರು’ ಎಂದು ಸ್ಮರಿಸಿದರು.

‘ನಟ ದರ್ಶನ್ ಬಗ್ಗೆ ಯಾವುದೇ ವೈಮನಸ್ಸಿಲ್ಲ. ಅವರು ಕಲಾವಿದರ ಕುಟುಂಬದಿಂದ ಬಂದವರು. ಅವರ ಬಗ್ಗೆ ಅಪಾರವಾದ ಗೌರವ ಇದೆ. ಆದರೆ, ಸಮುದಾಯದ ಇತಿಹಾಸ ಬಿಂಬಿಸುವ ಚಿತ್ರವನ್ನು ಸಮುದಾಯದ ನಟ ನಟಿಸಿದರೆ ಚಿತ್ರ ಅರ್ಥಪೂರ್ಣವಾಗಿ ಮೂಡಿಬರಲಿದೆ’ ಎಂದು ಅಭಿಪ್ರಾಯಪಟ್ಟರು.

‘ಮದಕರಿ ನಾಯಕ ಚಲನಚಿತ್ರದ ಕಥೆ ನೈಜ ಇತಿಹಾಸ ಹೊಂದಿದ್ದರೆ ಚಿತ್ರ ನಿರ್ಮಾಣಕ್ಕೆ ಅಭ್ಯಂತರವಿಲ್ಲ. ಕೆಲವು ಇತಿಹಾಸಕಾರರು ಚರಿತ್ರೆಯಲ್ಲಿ ಮದಕರಿ ನಾಯಕನ ಕೊನೆಯ ದಿನಗಳನ್ನು ಹೀನಾಯವಾಗಿ ಚಿತ್ರಿಸಿದ್ದಾರೆ. ಅಂತಹ ಗ್ರಂಥಗಳಿಂದ ಆಯ್ದುಕೊಂಡ ಭಾಗಗಳಿಂದ ಚಿತ್ರಕತೆ ರಚಿಸಿದಾಗ ನೈಜ ಇತಿಹಾಸಕ್ಕೆ ಧಕ್ಕೆಯಾಗುವ ಸಂಭವವಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !