‘ಗೋವಾದ ಆಟ ನಡೆಯದಂತೆ ನೋಡಿಕೊಳ್ಳಬೇಕು’

7
ಸಂಪೂರ್ಣ ಬೇಡಿಕೆ ಈಡೇರಿಲ್ಲ. ಆದರೂ, ತೃಪ್ತಿ ತಂದಿದೆ

‘ಗೋವಾದ ಆಟ ನಡೆಯದಂತೆ ನೋಡಿಕೊಳ್ಳಬೇಕು’

Published:
Updated:
Deccan Herald

ನರಗುಂದ: ಮಹದಾಯಿ ನ್ಯಾಯಮಂಡಳಿ ತೀರ್ಪು ಕಳೆದ ಎರಡು ದಶಕಗಳ ರೈತರ ಹೋರಾಟಕ್ಕೆ ಸಂದ ಜಯವಾಗಿದೆ. ನಮ್ಮ ಹೋರಾಟ ಕಳಸಾ– ಬಂಡೂರಿಯಿಂದ 7.56 ಟಿಎಂಸಿ ಅಡಿ ನೀರು ಪಡೆಯುವುದಾಗಿತ್ತು. ಆದರೆ, ಈಗ ಮಹದಾಯಿ ಕಣಿವೆ ತಿರುವು ಯೋಜನೆಯಿಂದ 13.7 ಟಿಎಂಸಿ ಅಡಿ ನೀರು ನಮಗೆ ಸಿಕ್ಕಿದೆ. ಇದರಲ್ಲಿ 5.4 ಟಿಎಂಸಿ ಅಡಿ ನೀರು ಮಾತ್ರ ಕುಡಿಯಲು ಮತ್ತು ಕೃಷಿಗೆ ಬಳಸಿಕೊಳ್ಳಬೇಕಿದೆ. ಹಾಗೆ ನೋಡಿದರೆ ನಮ್ಮ 7.56 ಟಿಎಂಸಿ ಅಡಿ ನೀರಿನ ಬೇಡಿಕೆ ಈಡೇರಿಲ್ಲ. ಆದರೂ, ಈ ತೀರ್ಪು ತೃಪ್ತಿ ತಂದಿದೆ.

ಇನ್ನು ರಾಜ್ಯ ಸರ್ಕಾರದ ಜವಾಬ್ದಾರಿ ನಿರ್ಣಾಯಕ. ಕಳಸಾ– ಬಂಡೂರಿ ಕಾಮಗಾರಿಯಲ್ಲಿ ಕಳಸ ನಾಲಾ ಕಾಮಗಾರಿ ಮುಗಿದಿದೆ. ಮಹದಾಯಿ ನೀರು ಬರದಂತೆ ತಡೆಯಲು ಕಟ್ಟಿದ ತಡೆಗೋಡೆಯನ್ನು ಮೊದಲು ಒಡೆದು ಹಾಕಬೇಕು. ಇದರಿಂದ ಕನಿಷ್ಠ 1 ಟಿಎಂಸಿ ಅಡಿ ನೀರು ಕೂಡಲೇ ಸಿಗುತ್ತದೆ.

ಗೋವಾ ಸುಪ್ರೀಂಕೋರ್ಟ್‌ಗೆ ಹೋಗುವ ಮುನ್ನವೇ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಬೇಕು. ಗೋವಾದ ಆಟ ನಡೆಯದಂತೆ ನೋಡಿಕೊಳ್ಳಬೇಕು.

ರೈತರ ಜಮೀನಿಗೆ ನೀರು ಸಿಗಬೇಕಾದರೆ ತ್ವರಿತವಾಗಿ ಕಾಲುವೆ ಕಾಮಗಾರಿ ಮುಗಿಯಬೇಕು. ಮಲಪ್ರಭಾ ನದಿ ನೀರು ಪೂರೈಕೆ ಕಾಲುವೆಗಳನ್ನು ನವೀಕರಣ ಮಾಡಬೇಕು. ಹೊಸದು ನಿರ್ಮಿಸಬೇಕಾದರೆ, ನಿರ್ಮಾಣಕ್ಕೆ ಮುಂದಾಗಬೇಕು. ಇದಕ್ಕೆ ಪ್ರತ್ಯೇಕ ಅನುದಾನ ಮೀಸಲಿಡಬೇಕು. ನರಗುಂದ ತಾಲ್ಲೂಕಿನ ಕೊನೆಯ ಹಳ್ಳಿಗಳಿಗೂ ಈ ನೀರು ಲಭಿಸಬೇಕು.

ನಮ್ಮ ಪಾಲಿನ ನೀರು ಸಂಗ್ರಹಿಸಲು ನವಿಲುತೀರ್ಥ ಜಲಾಶಯ ಸಾಕು. ಆದರೆ, ಈ ಜಲಾಶಯ ನೀರಿನಿಂದ ಭರ್ತಿಯಾಗುವಂತೆ ನೋಡಿ
ಕೊಳ್ಳುವುದು ಸರ್ಕಾರದ ಕೆಲಸ. ಈಗ ಮಾಡಿರುವ ನೀರಿನ ಹಂಚಿಕೆಯಲ್ಲಿ 13.7 ಟಿಎಂಸಿ ಅಡಿಯಲ್ಲಿ 8 ಟಿಎಂಸಿ ಅಡಿ ನೀರು ವಿದ್ಯುತ್‌ ಉತ್ಪಾದನೆಗೆ ಇದೆ. ಆದ್ದರಿಂದ ಸಂಪೂರ್ಣ 36 ಟಿಎಂಸಿ ಅಡಿ ನೀರು ಪಡೆಯಲು ರಾಜ್ಯ ಸರ್ಕಾರ ಎಲ್ಲ ಪ್ರಯತ್ನ ಮಾಡಬೇಕು. 600 ಮೆಗಾವಾಟ್ ವಿದ್ಯುತ್‌ ಉತ್ಪಾದನೆ ಸಹ ಈ ತೀರ್ಪಿನಿಂದ ಸಾಧ್ಯವಾಗಿದೆ. ಈ ಯೋಜನೆಯತ್ತಲೂ ಸರ್ಕಾರ ಗಮನ ಹರಿಸಿ, ಅದನ್ನು ಸಾಕಾರಗೊಳಿಸಬೇಕು.

ವಿಜಯ ಕುಲಕರ್ಣಿ, (ಲೇಖಕರು– ಅಧ್ಯಕ್ಷರು ಕಳಸಾ ಬಂಡೂರಿ, ಮಲಪ್ರಭಾ ಹೋರಾಟ ಸಮನ್ವಯ ಸಮಿತಿ, ನರಗುಂದ)

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !