ಎಸ್.ಸೂರ್ಯಪ್ರಕಾಶ ಪಂಡಿತ್
ಪ್ರಜಾವಾಣಿ ಮುಖ್ಯ ಉಪಸಂಪಾದಕ. ಲೇಖಕ; ಅಂಕಣಕಾರ. ತತ್ತ್ವಶಾಸ್ತ್ರ, ಕಲಾಮೀಮಾಂಸೆ, ಇತಿಹಾಸ, ವಿಜ್ಞಾನದ ವಿಷಯಗಳಲ್ಲಿ ಖುಷಿ ಮತ್ತು ಕೃಷಿ. ಸುಮಾರು ಮೂರು ಸಾವಿರಕ್ಕೂ ಹೆಚ್ಚು ಲೇಖನಗಳ ಪ್ರಕಟ. ‘ರಾಮಾಯಣ ರಸಯಾನ’ ಮತ್ತು ‘ಭವದ ಗೀತೆ ಭಗವದ್ಗೀತೆ’ ಅಂಕಣಗಳು ಜನಪ್ರಿಯ. ಆನಂದ ಕುಮಾರಸ್ವಾಮಿ ಬಗ್ಗೆ ವಿಶೇಷ ಅಧ್ಯಯನ. ಪುಸ್ತಕ ಸಂಗ್ರಹಣೆಯ ಹವ್ಯಾಸ; 75 ಸಾವಿರಕ್ಕೂ ಅಧಿಕ ಪುಸ್ತಕಗಳ ಸಂಗ್ರಹ.