ಚೆನ್ನೈ: ಇಲ್ಲಿನ ಎಂ.ಎ. ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ಮುಕ್ತಾಯಗೊಂಡ ಭಾರತ ಹಾಗೂ ಜಿಂಬಾಂಬ್ವೆ ತಂಡಗಳ ನಡುವಿನ ಪಂದ್ಯದಲ್ಲಿ ಭಾರತ ತಂಡವು ಬೃಹತ್ ಅಂತರದ ಗೆಲುವು ಸಾಧಿಸಿದೆ. ಆದರೆ, ಜಿಂಬಾಂಬ್ವೆ ತಂಡದ ಆರಂಭಿಕ ಬ್ಯಾಟರ್ ಬ್ರಿಯಾನ್ ಬೆನೆಟ್ ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ತೋರುವ ಮೂಲಕ ಗಮನಸೆಳೆದಿದ್ದಾರೆ.

ಸಿಖಂದರ್ ರಾಜಾ ನಾಯಕತ್ವದ ಜಿಂಬಾಂಬ್ವೆ ತಂಡವು ಲೀಗ್ನಲ್ಲಿ ಬಲಿಷ್ಠ ತಂಡಗಳನ್ನು ಸೋಲಿಸಿ ಅಜೇಯವಾಗಿ ಸೂಪರ್–8ಕ್ಕೆ ಪ್ರವೇಶ ಪಡೆದುಕೊಂಡಿತ್ತು. ಆದರೆ, ಸೂಪರ್–8ರಲ್ಲಿ ವೆಸ್ಟ್ ಇಂಡೀಸ್ ಹಾಗೂ ಭಾರತ ವಿರುದ್ಧ ಸೋತು ಟೂರ್ನಿಯಿಂದ ನಿರ್ಗಮಿಸಿದೆ. ಇದರ ಹೊರತಾಗಿಯೂ ಜಿಂಬಾಂಬ್ವೆ ಬ್ಯಾಟರ್ ಬೆನೆಟ್ ದಾಖಲೆ ಬರೆದಿದ್ದಾರೆ.

ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಆಡಿರುವ ಐದು ಪಂದ್ಯಗಳಿಂದ 277ರ ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ಬೆನೆಟ್, ಐದು ಪಂದ್ಯದಲ್ಲಿ ಒಮ್ಮೆ ಮಾತ್ರ ಔಟ್ ಆಗಿದ್ದಾರೆ. ಉಳಿದ 4 ಪಂದ್ಯಗಳಲ್ಲಿ ಅಜೇಯರಾಗಿ ಉಳಿದಿರುವ ಅವರು, ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರರಾಗಿದ್ದಾರೆ. 283 ರನ್ ಗಳಿಸಿರುವ ಪಾಕಿಸ್ತಾನದ ಸಾಯಿಬ್ಜಾದ ಫರ್ಹಾನ್ ಅಗ್ರಸ್ಥಾನದಲ್ಲಿದ್ದಾರೆ.

ಬೆನೆಟ್ ಅವರು ಮುಂಬೈನಲ್ಲಿ ವೆಸ್ಟ್ ಇಂಡೀಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಅಕೀಲ್ ಹೊಸೈನ್ ಬೌಲಿಂಗ್ನಲ್ಲಿ 5 ರನ್ ಗಳಿಸಿದ್ದಾಗ ಔಟ್ ಆಗಿದ್ದರು. ಅದನ್ನು ಹೊರತುಪಡಿಸಿ, ಉಳಿದ ಎಲ್ಲಾ ಪಂದ್ಯಗಳಲ್ಲೂ ಅಜೇಯರಾಗಿಯೇ ಉಳಿದಿದ್ದಾರೆ. ಓಮನ್ ವಿರುದ್ಧ 48*, ಆಸ್ಟ್ರೇಲಿಯಾ ವಿರುದ್ಧ 64*, ಶ್ರೀಲಂಕಾ ವಿರುದ್ಧ 63* ಮತ್ತು ಭಾರತದ ವಿರುದ್ಧ 97* ರನ್ ಗಳಿಸಿದ್ದಾರೆ.
.T20 WC | ಜಿಂಬಾಬ್ವೆ ವಿರುದ್ಧ 72 ರನ್ಗಳ ಜಯ: ಭಾರತದ ಸೆಮಿ ಕನಸು ಜೀವಂತ.IND vs NZ | ಇಶಾನ್ ರನ್..ರನ್.. ಭಾರತ ವಿನ್.. .
ವಿರಾಟ್ ಕೊಹ್ಲಿ ದಾಖಲೆ ಮುರಿದ ಬೆನೆಟ್

ಜಿಂಬಾಂಬ್ವೆ ತಂಡದ ಆರಂಭಿಕ ಬ್ಯಾಟರ್ 4 ಇನಿಂಗ್ಸ್ಗಳಲ್ಲಿ ಅಜೇಯರಾಗಿ ಉಳಿದಿದ್ದಾರೆ, ಆ ಮೂಲಕ ಟಿ20 ವಿಶ್ವಕಪ್ನ ಒಂದೇ ಆವೃತ್ತಿಯಲ್ಲಿ ಅಜೇಯರಾಗಿ ಉಳಿದ ಪಂದ್ಯಗಳಿಂದ ಅತೀ ಹೆಚ್ಚು ರನ್ ಸಿಡಿಸಿದ ಆಟಗಾರ ಎಂಬ ದಾಖಲೆ ತಮ್ಮದಾಗಿಸಿಕೊಂಡರು. ಅವರು ಔಟ್ ಆದ ಪಂದ್ಯ ಹೊರತುಪಡಿಸಿ, ಅಜೇಯರಾಗಿ ಉಳಿದ ಪಂದ್ಯಗಳಿಂದ 272 ರನ್ ಕಲೆಹಾಕಿದ್ದಾರೆ. ಇದಕ್ಕೂ ಮೊದಲು 2026ರಲ್ಲಿ 226 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಅವರ ಹೆಸರಿನಲ್ಲಿ ಈ ದಾಖಲೆ ಇತ್ತು.

ಭಾರತದ ವಿರುದ್ಧ ಅತೀ ಹೆಚ್ಚು ರನ್

ಮಾತ್ರವಲ್ಲ, ನಿನ್ನೆ (ಗುರುವಾರ) ಮುಕ್ತಾಯಗೊಂಡ ಪಂದ್ಯದಲ್ಲಿ ಭಾರತದ ವಿರುದ್ಧ ಅಜೇಯ 97 ರನ್ ಗಳಿಸುವ ಮೂಲಕ ಭಾರತ ತಂಡದ ವಿರುದ್ಧ ಟಿ20 ವಿಶ್ವಕಪ್ನ ಪಂದ್ಯವೊಂದರಲ್ಲಿ ಅತೀ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎಂಬ ದಾಖಲೆ ತಮ್ಮದಾಗಿಸಿಕೊಂಡರು. 99 ರನ್ ಗಳಿಸಿರುವ ಕ್ರಿಸ್ ಗೇಯ್ಲ್ ಅವರು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.