ಹೋಬಾರ್ಟ್: ಜೀವದಾನಗಳ ಲಾಭ ಪಡೆದ ಜಾರ್ಜಿಯಾ ವೋಲ್ ಅವರ ಶತಕ (101) ಬಾರಿಸಿದರೆ, ಫೋಬಿ ಲಿಚ್ಫೀಲ್ಡ್ 80 ರನ್ ಬಾರಿಸಿದರು. ಇವರಿಬ್ಬರ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ ತಂಡ ಮಹಿಳೆಯರ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ತಂಡದ ನಮೇಲೆ ಶುಕ್ರವಾರ ಐದು ವಿಕೆಟ್ಗಳ ಸುಲಭ ಜಯಗಳಿಸಿತು. ಇನ್ನೂ ಒಂದು ಪಂದ್ಯ ಇರುವಂತೆ ಆತಿಥೇಯ ತಂಡ ಸರಣಿಯನ್ನು 2–0ಯಿಂದ ತನ್ನದಾಗಿಸಿಕೊಂಡಿತು.

ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ಭಾನುವಾರ ನಡೆಯಲಿದೆ.

ಭಾರತ ತಂಡ ಬ್ಯಾಟಿಂಗ್ ಸ್ನೇಹಿ ಪಿಚ್ನಲ್ಲಿ 9 ವಿಕೆಟ್ಗೆ 251 ರನ್ ಹೊಡೆಯಿತು. ಪ್ರತೀಕಾ ರಾವಲ್ (52, 81ಎ, 4x6) ಮತ್ತು ಹರ್ಮನ್ಪ್ರೀತ್ ಕೌರ್ (54, 70 ಎಸೆತ, 4x2, 6x1) ಅವರ ಅರ್ಧಶತಕಗಳನ್ನು ಬಾರಿಸಿದರು. ಆಸ್ಟ್ರೇಲಿಯಾ ಇನ್ನೂ 13.5 ಓವರುಗಳಿರುವಂತೆ 5 ವಿಕೆಟ್ಗೆ 252 ರನ್ ಬಾರಿಸಿತು.

ವಿಕೆಟ್ ಕೀಪರ್ ರಿಚಾ ಘೋಷ್ ಅವರು ಲೆಗ್ಸೈಡ್ನಲ್ಲಿ ಕ್ಯಾಚ್ಪಡೆಯಲು ವಿಫಲರಾದ ಬಳಿಕ ವೋಲ್, ಏಕದಿನ ಪಂದ್ಯಗಳಲ್ಲಿ ತಮ್ಮ ಎರಡನೇ ಶತಕ ಪೂರೈಸಿದರು. ಅದಕ್ಕೆ ಮೊದಲು ಅವರಿಗೆ ಎರಡು ಜೀವದಾನ ದೊರಕಿತ್ತು. 22 ವರ್ಷ ವೋಲ್ ಅವರು 19 ರನ್ ಗಳಿಸಿದ್ದಾಗ ದೀಪ್ತಿ ಶರ್ಮಾ ಬೌಲಿಂಗ್ನಲ್ಲಿ (14ನೇ ಓವರ್) ಕ್ರಾಂತಿ ಗೌಡ್ ಲಾಂಗ್ಆನ್ನಲ್ಲಿ ಕಷ್ಟದ ಕ್ಯಾಚ್ ಬಿಟ್ಟರು. ನಂತರ ಕಶ್ವಿ ಗೌತಮ್ ಬೌಲಿಂಗ್ನಲ್ಲಿ ಮಿಡ್ವಿಕೆಟ್ನಲ್ಲಿ ಸ್ಮೃತಿ ಮಂದಾನ ಸುಲಭ ಕ್ಯಾಚ್ ನೆಲಕ್ಕೆ ಹಾಕಿದರು.

ವೋಲ್ ಮತ್ತು ಲಿಚ್ಫೀಲ್ಡ್ ಎರಡನೇ ವಿಕೆಟ್ಗೆ 119 ರನ್ ಸೇರಿಸಿದ್ದರಿಂದ ಆಸ್ಟ್ರೇಲಿಯಾ ತಂಡದ ಹಾದಿ ಸುಗಮವಾಯಿತು. 82 ಎಸೆತಗಳನ್ನು ಆಡಿದ ವೋಲ್ ಒಂದು ಸಿಕ್ಸರ್, 13 ಬೌಂಡರಿಗಳನ್ನು ಬಾರಿಸಿದರು. ಲಿಚ್ಫೀಲ್ಡ್ 62 ಎಸೆತಗಳ ಇನಿಂಗ್ಸ್ನಲ್ಲಿ ಒಂದು ಸಿಕ್ಸರ್, 11 ಬೌಂಡರಿಗಳನ್ನು ಹೊಡೆದರು.

ಇದಕ್ಕೆ ಮೊದಲು, ಪ್ರತಿಕಾ ರಾವಲ್ ಮತ್ತು ಸ್ಮೃತಿ ಮಂದಾನ (31) ಜೋಡಿ ಮೊದಲ ವಿಕೆಟ್ಗೆ 78 ರನ್ ಸೇರಿಸಿ ಭಾರತ ತಂಡಕ್ಕೆ ಉತ್ತಮ ಆರಂಭ ನೀಡಿತ್ತು. ಮಧ್ಯಮ ಹಂತದಲ್ಲಿ ಹರ್ಮನ್ಪ್ರೀತ್ ಉಪಯುಕ್ತ ಇನಿಂಗ್ಸ್ ಆಡಿದರು.

ಸಂಕ್ಷಿಪ್ತ ಸ್ಕೋರು:

ಭಾರತ: 50 ಓವರುಗಳಲ್ಲಿ 9 ವಿಕೆಟ್ಗೆ 251 (ಪ್ರತೀಕಾ ರಾವಲ್ 52, ಹರ್ಮನ್ಪ್ರೀತ್ ಕೌರ್ 54, ಕಶ್ವಿ ಗೌತಮ್ 25; ಆ್ಯಶ್ಲೆ ಗಾರ್ಡನರ್ 39ಕ್ಕೆ2, ಅನ್ನಾಬೆಲ್ ಸದರ್ಲ್ಯಾಂಡ್ 37ಕ್ಕೆ2, ಅಲನಾ ಕಿಂಗ್ 41ಕ್ಕೆ2);

ಆಸ್ಟ್ರೇಲಿಯಾ: 36.1 ಓವರುಗಳಲ್ಲಿ 5 ವಿಕೆಟ್ಗೆ 252 (ಫೋಬಿ ಲಿಚ್ಫೀಲ್ಡ್ 80, ಜಾರ್ಜಿಯಾ ವೋಲ್ 101, ಬೆತ್ ಮೂನಿ 31; ಕಶ್ವಿ ಗೌತಮ್ 47ಕ್ಕೆ2, ದೀಪ್ತಿ ಶರ್ಮಾ 32ಕ್ಕೆ2)

ಪಂದ್ಯದ ಆಟಗಾರ್ತಿ: ಜಾರ್ಜಿಯಾ ವೋಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.