ಶನಿವಾರ, 7 ಮಾರ್ಚ್ 2026
×
ADVERTISEMENT

Photos: ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ವಿರೋಶ್’

Published : 26 ಫೆಬ್ರುವರಿ 2026, 13:57 IST
Last Updated : 27 ಫೆಬ್ರುವರಿ 2026, 7:56 IST
ADVERTISEMENT
ಫಾಲೋ ಮಾಡಿ
Comments
ಉದಯಪುರದ ಹೊರವಲಯದಲ್ಲಿರುವ ಐಷಾರಾಮಿ ಹೋಟೆಲ್‌ನಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತೇಷ್ಟರು ಭಾಗವಹಿಸಿದ್ದ ಖಾಸಗಿ ಸಮಾರಂಭದಲ್ಲಿ ವಿವಾಹ ನೆರವೇರಿತು.

ಮದುವೆ ಉಡುಗೆಯಾಗಿ ರಶ್ಮಿಕಾ ಮಂದಣ್ಣ ಸಾಂಪ್ರದಾಯಿಕ ಚಿನ್ನಾಭರಣಗಳೊಂದಿಗೆ ಕೆಂಪು ಸೀರೆಯನ್ನು ಧರಿಸಿದ್ದರು. ವಿಜಯ್‌ ದೇವರಕೊಂಡ ಬಿಳಿ ಬಣ್ಣದ ಧೋತಿ ಮತ್ತು ಕೆಂಪು ಶಾಲು ಧರಿಸಿ,ಯುವರಾಜನಂತೆ ಕಂಗೊಳಿಸಿದ್ದಾರೆ.

ವಿಜಯ್ ಹಾಗೂ ರಶ್ಮಿಕಾ ವಿವಾಹದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳಿಂದ ಹಾರೈಕೆಗಳ ಮಹಾಪೂರವೇ ಹರಿದುಬಂದಿದೆ.

ವಿಜಯ್‌ ಅವರ ತೆಲುಗು ಮತ್ತು ರಶ್ಮಿಕಾ ಅವರ ಕೊಡವ ಸಂಪ್ರದಾಯ, ಎರಡನ್ನೂ ಅನುಸರಿಸಿ, ವಿವಾಹ ನೆರವೇರಿತು.

ವಿವಾಹ ಸಮಾರಂಭವು ಮೂರು ದಿನ ನಡೆಯಲಿದೆ. ವಿವಾಹ ನಡೆದ ಸ್ಥಳ ಮತ್ತು ಸುತ್ತಮುತ್ತ ಭಾರಿ ಭದ್ರತೆ ಕೈಗೊಳ್ಳಲಾಗಿತ್ತು.

ದೇವರಕೊಂಡ ಮತ್ತು ರಶ್ಮಿಕಾ ಜೋಡಿಯು ತೆಲುಗು ಚಿತ್ರ ‘ಗೀತ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್’ನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ.

ವಿಜಯ್ ದೇವರಕೊಂಡ ಅವರನ್ನು ರಶ್ಮಿಕಾ ಮಂದಣ್ಣ ಅವರು 2018ರಲ್ಲಿ ಮೊದಲ ಬಾರಿಗೆ ಗೀತ ಗೋವಿಂದಂ ಚಿತ್ರದ ಚಿತ್ರೀಕರಣದ ವೇಳೆ ಭೇಟಿಯಾಗಿದ್ದರು.

ದಕ್ಷಿಣ ಭಾರತದ ಖ್ಯಾತ ಜೋಡಿಯು ಸುಮಾರು 8 ವರ್ಷಗಳಿಂದ ರಿಲೇಷನ್‌ಶಿಪ್‌ನಲ್ಲಿದ್ದು, ತಮ್ಮ ನಡುವಿನ ಸಂಬಂಧದ ಕುರಿತು ಗೌಪ್ಯತೆ ಕಾಪಾಡಿಕೊಂಡು ಬಂದಿದ್ದರು. ಅಂತಿಮವಾಗಿ ವಿವಾಹಕ್ಕೆ ಮೂರು ದಿನಗಳು ಬಾಕಿ ಇರುವಾಗ ಮದುವೆಯ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ತಾರಾ ಜೋಡಿಗೆ ಅವರ ಅಭಿಮಾನಿಗಳು ‘ವಿರೋಶ್’ ಎಂದು ಹೆಸರು ಕೊಟ್ಟಿದ್ದು, ರಶ್ಮಿಕಾ ಹಾಗೂ ವಿಜಯ್ ತಮ್ಮ ವಿವಾಹ ಸಮಾರಂಭಕ್ಕೆ ವಿರೋಶ್ ಎಂದು ಹೆಸರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT