ಮಲ್ಲಿಕಾ ಘಂಟಿ ಅವಧಿ ವಿಸ್ತರಣೆ

7

ಮಲ್ಲಿಕಾ ಘಂಟಿ ಅವಧಿ ವಿಸ್ತರಣೆ

Published:
Updated:
Prajavani

ಹೊಸಪೇಟೆ: ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಮಲ್ಲಿಕಾ ಎಸ್‌. ಘಂಟಿ ಅವರ ಅಧಿಕಾರದ ಅವಧಿ ಇನ್ನೊಂದು ತಿಂಗಳಿಗೆ ವಿಸ್ತರಣೆಯಾಗಿದೆ.

ವಿಶ್ವವಿದ್ಯಾಲಯ ಕಾಯಿದೆ ಸೆಕ್ಷನ್ 13(3)(ಎ) ಪ್ರಕಾರ ಜ.9ರಿಂದ ಅನ್ವಯವಾಗುವಂತೆ ಒಂದು ತಿಂಗಳ ಕಾಲ ಸೇವಾ ಅವಧಿ ವಿಸ್ತರಿಸಿ ರಾಜ್ಯಪಾಲರು ಆದೇಶಿಸಿದ್ದಾರೆ. ಈ ವಿಷಯವನ್ನು ಮಲ್ಲಿಕಾ ಘಂಟಿ ‘ಪ್ರಜಾವಾಣಿ’ಗೆ ಕರೆ ಮಾಡಿ ತಿಳಿಸಿದ್ದಾರೆ.

2018ರ ಸೆ. 8ರಂದು ಘಂಟಿ ಅವರ ಅವಧಿ ಪೂರ್ಣಗೊಂಡಿತು. ರಾಜ್ಯಪಾಲರು ನಾಲ್ಕು ತಿಂಗಳವರೆಗೆ ಅಧಿಕಾರದ ಅವಧಿ ವಿಸ್ತರಣೆ ಮಾಡಿದ್ದರು. ಆ ಅವಧಿ ಜ.7ರಂದು ಕೊನೆಗೊಂಡಿತ್ತು.

ಹೊಸ ಕುಲಪತಿ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಜ. 7ರಂದು ನಡೆದ ಸಭೆಯಲ್ಲಿ ಶೋಧನಾ ಸಮಿತಿಯು ಮೂವರ ಹೆಸರನ್ನು ಅಂತಿಮಗೊಳಿಸಿ, ರಾಜ್ಯಪಾಲರಿಗೆ ಸಲ್ಲಿಸಿದೆ. 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !