ಮಂಗಳವಾರ, ನವೆಂಬರ್ 19, 2019
27 °C

ಗಣಪತಿ ವಿಸರ್ಜಿಸಲು ತೆರಳಿದ ವ್ಯಕ್ತಿ ಜಲಪಾತದಲ್ಲಿ ಕೊಚ್ಚಿ ಹೋದ

Published:
Updated:
Prajavani

ಗೋಕಾಕ: ಇಲ್ಲಿಗೆ ಸಮೀಪದ ಗೋಕಾಕ ಫಾಲ್ಸ್‌ ಬಳಿ ಭಾನುವಾರ ರಾತ್ರಿ ಗಣಪತಿ ವಿಸರ್ಜನೆಗೆ ಹೋಗಿದ್ದ ಸಂಗಮೇಶ ಗಣಪತಿ ನಾಯಿಕ (42) ಫಾಲ್ಸ್‌ ನೀರಿನಲ್ಲಿಯೇ ಕೊಚ್ಚಿಹೋಗಿದ್ದಾರೆ.

ಜಲಪಾತದ ನೀರು 186 ಅಡಿ ಆಳಕ್ಕೆ ಧುಮುಕುತ್ತಿದ್ದು, ಜಲಪಾತದ ಅಡಿಯಲ್ಲಿ ಶೋಧ ಕಾರ್ಯ ನಡೆದಿದೆ. ಗೋಕಾಕ ಶಹರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)