ಬುಧವಾರ, ಆಗಸ್ಟ್ 12, 2020
25 °C

ಮಂಡ್ಯ | ಕಾಮಗಾರಿ ವೇಳೆ ಜೆಸಿಬಿ ಚಾಲಕನಿಗೆ ಹಲ್ಲೆ ನಡೆಸಿದ ಮಾಜಿ ಶಾಸಕ ರಮೇಶ್ ಬಾಬು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಜೆಸಿಬಿ ಚಾಲಕನ ಮೇಲೆ ಶ್ರೀರಂಗಪಟ್ಟಣ ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಹಲ್ಲೆ ನಡೆಸಿರುವ ಘಟನೆ ಅರೆಕೆರೆ ಗ್ರಾಮದಲ್ಲಿ ನಡೆದಿದೆ.

ಅರಕೆರೆ ಗ್ರಾಮದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ವೇಳೆ ಘಟನೆ ಮಾಜಿ ಶಾಸಕ ಹಾಗೂ ಅವರ ಬೆಂಬಲಿಗರಿಂದ ಕಾಮಗಾರಿಗೆ ತಡೆದಿದ್ದಾರೆ. ಪರಿಹಾರ ನೀಡದೆ ವಿಸ್ತರಣೆ ಬೇಡ ಎಂದು ಒತ್ತಾಯ ಮಾಡಿದ್ದಾರೆ. ಒತ್ತಾಯದ ನಡುವೆಯೂ ಜೆಸಿಬಿ ಚಾಲಕ ಮನೆ ತೆರವು ಮಾಡುತ್ತಿದ್ದ ಎನ್ನಲಾಗಿದೆ. ಈ ಸಮಯದಲ್ಲಿ ಜೆಸಿಬಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಕೂಡಲೆ ಭಯಗೊಂಡ ಚಾಲಕ ಜೆಸಿಬಿಯಿಂದ ಇಳಿದು ಓಡಲು ಆರಂಭಿಸಿದ್ದಾರೆ. ಕೂಡಲೆ ಆತನತ್ತ ಓಡಿದ ಮಾಜಿ ಶಾಸಕ ಚಾಲಕನನ್ನು ಹಿಡಿದು ಹಲ್ಲೆ ನಡೆಸಿದ್ದಾರೆ.

'ಮಹಿಳೆಯೊಬ್ಬರ ಮೇಲೆ ಜೆಸಿಬಿ ಹತ್ತಿಸಲು ಯತ್ನಿಸಿದ ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದೆವು' ಎಂದು ರಮೇಶ್ ಬಾಬು ಬಂಡಿಸಿದ್ದೇಗೌಡ ತಿಳಿಸಿದರು.


ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಜೆಸಿಬಿ ಚಾಲಕನ ಮೇಲೆ ಹಲ್ಲೆ ನಡೆಸುತ್ತಿರುವುದು.

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು