ಮಕ್ಕಳ ಜತೆ ಬಿಸಿಯೂಟ ಸವಿದ ಶಿಕ್ಷಣ ಸಚಿವ ಮಹೇಶ್

7

ಮಕ್ಕಳ ಜತೆ ಬಿಸಿಯೂಟ ಸವಿದ ಶಿಕ್ಷಣ ಸಚಿವ ಮಹೇಶ್

Published:
Updated:
Deccan Herald

ಕೊಳ್ಳೇಗಾಲ: ತಾಲ್ಲೂಕಿನ ಮುಳ್ಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್‌ ಅವರು ಮಕ್ಕಳೊಂದಿಗೆ ಬಿಸಿಯೂಟ ಸೇವಿಸಿದರು.

ಶಾಲೆಯಲ್ಲಿ ನಿರ್ಮಿಸಿರುವ ಅಡುಗೆ ಮನೆ ಉದ್ಘಾಟಿಸಿದರು. ಇದೇ ವೇಳೆ, ಮಕ್ಕಳಿಗಾಗಿ ತಯಾರಿಸಿದ್ದ ಬಿಸಿಬೇಳೆ ಬಾತ್‌ ತಿಂದರು.

ನಗರದ ಎಂಜಿಎಸ್‍ವಿ ಸರ್ಕಾರಿ ಪ್ರೌಢಶಾಲೆಯನ್ನು ದತ್ತು ಪಡೆದುಕೊಳ್ಳುತ್ತಿದ್ದೇನೆ. ‍ಪ್ರತಿ ಶಾಸಕರೂ ಒಂದೊಂದು ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂಡರೆ ಶಾಲೆಗಳು ಅಭಿವೃದ್ಧಿಯಾಗುತ್ತವೆ’ ಎಂದು ಹೇಳಿದರು.

ಎಲ್ಲ ಸರ್ಕಾರಿ ಶಾಲೆಗಳಲ್ಲಿ ಕಡ್ಡಾಯವಾಗಿ ಶೌಚಾಲಯ ನಿರ್ಮಿಸಬೇಕು. ಇಲ್ಲವಾದರೆ, ಮುಖ್ಯಶಿಕ್ಷಕನ್ನು ನೇರ ಹೊಣೆಗಾರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.

ಬಾಲಕಿಯರನ್ನು ವೇಶ್ಯಾವಾಟಿಕೆಗೆ ನೂಕುವ ಜಾಲದ ಮೂವರ ಬಂಧನ

ದಾವಣಗೆರೆ: ಬಾಲಕಿಯರನ್ನು ಪುಸಲಾಯಿಸಿ ವೇಶ್ಯಾವಾಟಿಕೆ ದಂಧೆಗೆ ನೂಕುವ ಜಾಲ ನಗರದಲ್ಲಿ ಪತ್ತೆಯಾಗಿದ್ದು, ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಗೀತಾ, ಅನಿತಾ ಮತ್ತು ರೂಪಾ ಎಂಬುವವರನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಮೂವರ ವಿರುದ್ಧವೂ ಮಾನವ ಕಳ್ಳ ಸಾಗಣೆ ಆರೋಪ ಹಾಗೂ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಕೆಳವರ್ಗದ 15ರಿಂದ 18 ವರ್ಷದ ಬಾಲಕಿಯರಿಗೆ ಹಣ, ಇತರ ಆಮಿಷಗಳನ್ನು ಒಡ್ಡಿ, ವೇಶ್ಯಾವಾಟಿಕೆಗೆ ಬಳಸಿಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !