ಶುಕ್ರವಾರ, ಸೆಪ್ಟೆಂಬರ್ 20, 2019
28 °C

ಪ್ರೌಢಶಿಕ್ಷಣ ಮಂಡಳಿ ಎಡವಟ್ಟು

Published:
Updated:
Prajavani

ಬ್ರಹ್ಮಾವರ: ಪ್ರೌಢಶಿಕ್ಷಣ ಮಂಡಳಿಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಉತ್ತರ ಪತ್ರಿಕೆ ನಕಲು ಪ್ರತಿಯಲ್ಲಿ ಬೇರೊಬ್ಬ ವಿದ್ಯಾರ್ಥಿಯ ಉತ್ತರ ಪ್ರತಿಗಳನ್ನು ಸೇರಿಸಿ ವಿದ್ಯಾರ್ಥಿನಿಗೆ ಕಳುಹಿಸಿದ ಪ್ರಕರಣ ಬೆಳಕಿಗೆ ಬಂದಿದೆ.

ಬ್ರಹ್ಮಾವರ ಸರ್ಕಾರಿ ಪ್ರೌಢಶಾಲೆಯಲ್ಲಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿಯೊಬ್ಬಳು ವಿಜ್ಞಾನ ಪರೀಕ್ಷೆ ಉತ್ತರ ಪತ್ರಿಕೆ ನಕಲು ಪ್ರತಿಗಾಗಿ ಅರ್ಜಿ ಸಲ್ಲಿಸಿದ್ದಳು. ಶುಕ್ರವಾರ ವಿದ್ಯಾರ್ಥಿನಿಗೆ ನಕಲು ಪ್ರತಿ ದೊರಕಿದ್ದು, ವಿದ್ಯಾರ್ಥಿನಿ ಬರೆದ ಎಲ್ಲ ಪುಟಗಳ ಪ್ರತಿಯೊಂದಿಗೆ ಬೇರೊಬ್ಬ ವಿದ್ಯಾರ್ಥಿ ಎರಡು ಉತ್ತರ ಪ್ರತಿಯ ಪುಟಗಳನ್ನು ಸೇರಿಸಿ ಮಂಡಳಿ ಕಳುಹಿಸಿ ಕೊಟ್ಟಿದೆ. ವಿದ್ಯಾರ್ಥಿನಿ ಪುಟ ಸಂಖ್ಯೆ 19 ಮತ್ತು 20 ರೊಂದಿಗೆ ಬೇರೊಬ್ಬ ವಿದ್ಯಾರ್ಥಿಯ 19 ಮತ್ತು 20ನೇ ಪುಟಗಳನ್ನೂ ಉತ್ತರ ಪತ್ರಿಕೆ ಜತೆ ನೀಡಲಾಗಿದೆ.

ಆದರೆ, ವಿದ್ಯಾರ್ಥಿನಿಯ ಅಂಕ ಹಾಗೂ ಪುಟಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

Post Comments (+)