ಮೊಬೈಲ್‌ನಲ್ಲಿ ಮಾತನಾಡುತ್ತ ಸೇತುವೆಯಿಂದ ಬಿದ್ದ ಯುವತಿ

7

ಮೊಬೈಲ್‌ನಲ್ಲಿ ಮಾತನಾಡುತ್ತ ಸೇತುವೆಯಿಂದ ಬಿದ್ದ ಯುವತಿ

Published:
Updated:

ಬೆಂಗಳೂರು: ಮೊಬೈಲ್‌ನಲ್ಲಿ ಮಾತನಾಡುತ್ತ ಹೊರಟಿದ್ದ ಯುವತಿಯೊಬ್ಬರು, ಸೇತುವೆಯಿಂದ ಆಯತಪ್ಪಿ ಬಿದ್ದು ತೀವ್ರ  ಗಾಯಗೊಂಡಿರುವ ಘಟನೆ ಮೇಖ್ರಿ ವೃತ್ತದಲ್ಲಿ ಮಂಗಳವಾರ ನಡೆದಿದೆ.

ಪುಣೆಯ ಆರತಿ ಯಾದವ್‌ ಗಾಯಗೊಂಡವರು. ಅವರನ್ನು ಎಂ.ಎಸ್‌.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

‘ಪದವೀಧರರಾದ ಅವರು, ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದರು. ಪರಿಚಯಸ್ಥರೊಬ್ಬರ ಮನೆಯಲ್ಲಿ ಉಳಿದುಕೊಂಡಿದ್ದರು. ಮಂಗಳವಾರ ಬೆಳಿಗ್ಗೆ ಮೇಖ್ರಿ ವೃತ್ತಕ್ಕೆ ಬಂದಿದ್ದರು. ಮೊಬೈಲ್‌ನಲ್ಲಿ ಮಾತನಾಡುತ್ತಲೇ ಸೇತುವೆ ಮೇಲೆ ನಡೆದುಕೊಂಡು ಹೊರಟಿದ್ದಾಗಲೇ ಈ ಅವಘಡ ಸಂಭವಿಸಿದೆ’ ಎಂದು ಸದಾಶಿವನಗರ ಪೊಲೀಸರು ಹೇಳಿದರು.

‘ಯುವತಿ ಸದ್ಯ ಮಾತನಾಡುವ ಸ್ಥಿತಿಯಲ್ಲಿಲ್ಲ. ಪುಣೆಯಲ್ಲಿರುವ ಅವರ ಪೋಷಕರಿಗೆ ಮಾಹಿತಿ ನೀಡಲಾಗಿದೆ’ ಎಂದು ಹೇಳಿದರು.  

ಬಿಎಂಟಿಸಿ ಬಸ್ ಗುದ್ದಿ ಬಾಣಸಿಗ ಸಾವು: ಸರ್ಜಾಪುರ ರಸ್ತೆಯ ವಿಪ್ರೊ ಕಚೇರಿ ಎದುರು ಬಿಎಂಟಿಸಿ ಬಸ್‌ ಗುದ್ದಿದ್ದರಿಂದ ಬಾಣಸಿಗ ಸುನೀಲ್ ಎಂಬುವರು ಮೃತಪಟ್ಟಿದ್ದಾರೆ.

ಅಸ್ಸಾಂನ ಅವರು ಕೆಲವು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು. ದೊಡ್ಡಕನ್ನಳ್ಳಿಯಲ್ಲಿ ವಾಸವಿದ್ದರು. ಬೆಳಿಗ್ಗೆ 11.30 ಗಂಟೆಗೆ ಕೆಲಸಕ್ಕೆ ಹೊರಟಿದ್ದಾಗ ಬಸ್‌ ಗುದ್ದಿತ್ತು. ನಂತರ, ಅವರ ಮೇಲೆಯೇ ಬಸ್‌ ಚಕ್ರಗಳು ಹರಿದುಹೋಗಿದ್ದವು. ಅದರಿಂದಾಗಿ ಅವರು ಸ್ಥಳದಲ್ಲೇ ಮೃತಪಟ್ಟರು. ಬಸ್‌ ಚಾಲಕ ಮಲ್ಲಪ್ಪ ಎಂಬಾತನನ್ನು ಬಂಧಿಸಲಾಗಿದೆ ಎಂದು ಎಚ್‌ಎಸ್‌ಆರ್‌ ಲೇಔಟ್ ಸಂಚಾರ ಪೊಲೀಸರು ಹೇಳಿದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !