ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಸಿಯಿಂದ ಆಂಧ್ರದಲ್ಲಿ ನವಯುಗ ಶಾಲೆ

Last Updated 20 ನವೆಂಬರ್ 2018, 20:15 IST
ಅಕ್ಷರ ಗಾತ್ರ

ಬೆಂಗಳೂರು: ಬಂದರುಗಳನ್ನು ನಿರ್ಮಿಸಿ ಯಶಸ್ವಿಯಾಗಿ ವ್ಯವಹಾರ ವೃದ್ಧಿಸಿಕೊಂಡಿರುವ ಕೃಷ್ಣಪಟ್ಟಣಂ ಪೋರ್ಟ್‌ ಕಂಪನಿ (ಕೆಪಿಸಿ) ಈಗ ಶಿಕ್ಷಣ ಕ್ಷೇತ್ರಕ್ಕೂ ಕಾಲಿಟ್ಟಿದೆ.

ಈ ಕಂಪನಿ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ನವಯುಗ ವರ್ಲ್ಡ್‌ ಸ್ಕೂಲ್‌ ಎಂಬ ಶಾಲೆ ಕಟ್ಟಿದೆ. ಇದರ ತರಗತಿಗಳು 2019ರ ಏಪ್ರಿಲ್‌ 7ರಿಂದ ಆರಂಭವಾಗಲಿವೆ. ಇಲ್ಲಿ ಪ್ರೀ–ನರ್ಸರಿಯಿಂದ 7ನೇ ತರಗತಿಯವರೆಗೆ ಪ್ರವೇಶಾತಿ ಪಡೆಯಬಹುದಾಗಿದೆ. ಜಾಗತಿಕ ಗುಣಮಟ್ಟದ ಶಿಕ್ಷಣ ನೀಡಲು ಎಲ್ಲ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ.

ಗಣಿತ ವಿಷಯ ಬೋಧನೆಯ ಸಂಶೋಧಿತ ವಿಧಾನಗಳನ್ನು ತರಗತಿಗಳಲ್ಲಿ ಪರಿಚಯಿಸಲು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಈ ಶಾಲೆಯನ್ನು 8 ಎಕರೆ ಪ್ರದೇಶದಲ್ಲಿ ಕಟ್ಟಲಾಗಿದ್ದು, ಸುಂದರ ಉದ್ಯಾನವಿದೆ. ಹವಾನಿಯಂತ್ರಿತ ವ್ಯವಸ್ಥೆ ಇರುವ ತರಗತಿಗಳಿವೆ. ಕ್ರೀಡಾ ಚಟುವಟಿಕೆಗಳಿಗೆ ಅಗತ್ಯವಾದ ಸೌಲಭ್ಯಗಳಿವೆ. ಬ್ಯಾಡ್ಮಿಂಟನ್‌, ಟೆನ್ನಿಸ್‌, ಫುಟ್‌ಬಾಲ್‌, ಕ್ರಿಕೆಟ್‌, ವಾಲಿಬಾಲ್‌ನೊಂದಿಗೆ ಜಲಸಾಹಸ ಕ್ರೀಡೆ, ಗಾಲ್ಫ್‌ ಮತ್ತು ಕುದುರೆ ಸವಾರಿಯನ್ನು ಕಲಿಸುವ ವ್ಯವಸ್ಥೆ ಇದೆ. ಪೌಷ್ಟಿಕಾಂಶಯುಕ್ತ ತಿಂಡಿ ಮತ್ತು ಊಟವನ್ನು ನೀಡಲಾಗುತ್ತದೆ.

ಶಾಲೆಯಲ್ಲಿನ ಕಲಿಕಾ ಗುಣಮಟ್ಟವನ್ನು ಕಾಯ್ದುಕೊಳ್ಳಲು ಎಲ್ಲ ಶಿಕ್ಷಕರಿಗೆ ಕಾಲ–ಕಾಲಕ್ಕೆ ಬೊಧನಾ ಕೌಶಲ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಮುಂಬರುವ ದಿನಗಳಲ್ಲಿ ಸಿಬಿಎಸ್‌ಇ ಪಠ್ಯವನ್ನು ಅಳವಡಿಸಿಕೊಳ್ಳಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

www. navayuga worldschool.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT