ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೀನ್‌ ಚಾವ್ಲಾ ಪುಸ್ತಕ ಇಂದು ಬಿಡುಗಡೆ

ಚುನಾವಣೆ ಕುರಿತ ರೋಚಕ ಮಾಹಿತಿಯ ‘ಸ್ಟೋರಿ ಆಫ್‌ ಇಂಡಿಯಾಸ್‌ ಎಲೆಕ್ಷನ್‌’
Last Updated 17 ಫೆಬ್ರುವರಿ 2019, 20:28 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಚುನಾವಣಾ ಆಯೋಗದ ಮಾಜಿ ಆಯುಕ್ತ ನವೀನ್‌ ಚಾವ್ಲಾ ಅವರು ಬರೆದಿರುವ ‘ಎವೆರಿ ವೋಟ್‌ ಕೌಂಟ್ಸ್‌: ದ ಸ್ಟೋರಿ ಆಫ್‌ ಇಂಡಿಯಾಸ್‌ ಎಲೆಕ್ಷನ್‌’ ಪುಸ್ತಕ ಸೋಮವಾರ ಇಲ್ಲಿನ ಕ್ರೈಸ್ಟ್‌ ಕಾಲೇಜಿನಲ್ಲಿ ಬಿಡುಗಡೆಯಾಗಲಿದೆ.

ಈ ಕೃತಿಯಲ್ಲಿ 2009 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ಬಗ್ಗೆ ವಿಶೇಷ ಉಲ್ಲೇಖವಿದ್ದು, ಬಳ್ಳಾರಿ ಜಿಲ್ಲೆಯಲ್ಲಿ ಮತದಾರರನ್ನು ಬುಟ್ಟಿಗೆ ಹಾಕಿಕೊಳ್ಳಲು ರಾಜಕಾರಣಿಗಳು ಅದರಲ್ಲೂ ಜನಾರ್ದನ ರೆಡ್ಡಿ ಸಹೋದರರು ನಡೆಸಿದ ಕಸರತ್ತಿನ ಕುರಿತ ಮಾಹಿತಿ ಇದೆ.

ಚುನಾವಣೆ ಸಂದರ್ಭದಲ್ಲಿ ರಾಜಕಾರಣಿಗಳು ಮದುವೆ, ಬರ್ತ್‌ಡೇ ಪಾರ್ಟಿಗಳು, ನವವಧು–ವರರಿಗಾಗಿ ಅದ್ಧೂರಿ ಔತಣಕೂಟಗಳನ್ನು ಏರ್ಪಡಿಸುವುದು ಸಾಮಾನ್ಯವಾಗಿತ್ತು. ಬಹುತೇಕ ಸಂದರ್ಭಗಳಲ್ಲಿ ವಧು–ವರರೇ ಇರುತ್ತಿರಲಿಲ್ಲ. ಇತರ ಸಂದರ್ಭಗಳಿಗಿಂತ ಚುನಾವಣೆ ಸಂದರ್ಭದಲ್ಲಿ ನಡೆಯುತ್ತಿದ್ದ ಬರ್ತ್‌ಡೇ ಪಾರ್ಟಿಗಳೇ ಅಧಿಕ ಎಂಬುದು ಅಚ್ಚರಿ ಹುಟ್ಟಿಸುತ್ತಿದ್ದವು ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಬಳ್ಳಾರಿ ಜಿಲ್ಲೆಯಲ್ಲಿ ಚುನಾವಣೆಗೆ ಮುಖ್ಯ ಸವಾಲಾಗಿ ಎದುರಾಗಿದ್ದು ಅಲ್ಲಿನ ಜನರ ಬಡತನದ ಕಾರಣಕ್ಕಾಗಿ ಅಲ್ಲ, ಗಣಿ ಮಾಲೀಕರು ಅದರಲ್ಲೂ ರೆಡ್ಡಿ ಸಹೋದರರು ಶತಾಯಗತಾಯ ಚುನಾವಣೆ ಗೆಲ್ಲಲು ಮಾಡುತ್ತಿದ್ದ ಖರ್ಚು ಆಯೋಗ ಮತ್ತು ಆಡಳಿತಕ್ಕೆ ದೊಡ್ಡ ಸಮಸ್ಯೆ ಆಗಿ ಕಾಡಿತ್ತು. ಈ ಎಲ್ಲವೂ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT