ಶುಕ್ರವಾರ, ಜೂನ್ 18, 2021
24 °C
CET Exam Vocational Courses

ವೃತ್ತಿಶಿಕ್ಷಣ: ಈ ವರ್ಷವೂ ಆನ್‌ಲೈನ್‌ನಲ್ಲಿ ಸಿಇಟಿ ಇಲ್ಲ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಿಯು ನಂತರ ಹಲವು ವೃತ್ತಿಪರ ಶಿಕ್ಷಣಕ್ಕೆ ಪ್ರವೇಶ ಪಡೆಯುವ ನಿಟ್ಟಿನಲ್ಲಿ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಈ ವರ್ಷವೂ ಆನ್‌ಲೈನ್‌ನಲ್ಲಿ ನಡೆಯುವುದು ಬಹುತೇಕ ಅಸಾಧ್ಯ ಎಂದೇ ಹೇಳಲಾಗುತ್ತಿದೆ.

ಕಳೆದ ಬಾರಿ ಸಿಇಟಿ ಫಲಿತಾಂಶ ಪ್ರಕಟಿಸುವ ವೇಳೆ, 2020ರ ಸಿಇಟಿ ಆನ್‌ಲೈನ್‌ ಮಾದರಿಯಲ್ಲಿ ನಡೆಯಲಿದೆ ಎಂದು ಅಂದಿನ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದರು. ಆದರೆ ಆಫ್‌ಲೈನ್‌ನಿಂದ ಆನ್‌ಲೈನ್‌ಗೆ ಬದಲಾವಣೆ ಹೊಂದುವ ಪ್ರಸ್ತಾವಕ್ಕೆ ಸರ್ಕಾರ ಇನ್ನೂ ಅನುಮತಿ ನೀಡಿಲ್ಲ. ಹೀಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಈ ಬಾರಿಯೂ ಆಫ್‌ಲೈನ್‌ನಲ್ಲೇ ಸಿಇಟಿ ನಡೆಸುವುದಕ್ಕೆ ಸಿದ್ಧತೆ ಆರಂಭಿಸಿದೆ. ಈ ತಿಂಗಳ ಮೂರನೇ ವಾರದಲ್ಲಿ 2020ರ ಸಿಇಟಿ ಪರೀಕ್ಷೆಗಳ ಮಾಹಿತಿಯನ್ನು ಕೆಇಎ ಪ್ರಕಟಿಸುವ ನಿರೀಕ್ಷೆ ಇದೆ.

‘ಆನ್‌ಲೈನ್‌ ಮಾದರಿಯಲ್ಲಿ ಪರೀಕ್ಷೆ ನಡೆಸುವುದಾದರೆ ಅದಕ್ಕೆ ಬಹಳ ಸಿದ್ಧತೆ ಅಗತ್ಯವಿದೆ. ಸುಮಾರು
2 ಲಕ್ಷದಷ್ಟು ಕಂಪ್ಯೂಟರ್‌ಗಳು ಬೇಕು. (ಸದ್ಯ ಇಷ್ಟು ಕಂಪ್ಯೂಟರ್‌ಗಳು ಲಭ್ಯ ಇವೆ). ಈ ಹಂತದಲ್ಲಿ
ಅದನ್ನು ಪ್ರಕಟಿಸಿದರೆ ವಿದ್ಯಾರ್ಥಿಗಳು ತೀವ್ರ ಗೊಂದಲಕ್ಕೆ ಒಳಗಾಗಬಹುದು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತರಬೇತಿಯ ಅಗತ್ಯವಿದೆ’ ಎಂದು ಕೆಇಎ ಅಧಿಕಾರಿಯೊಬ್ಬರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು