ಉತ್ತರ ಕರ್ನಾಟಕ ನಿರ್ಲಕ್ಷ್ಯ ಬಿಜೆಪಿ ಹೋರಾಟ

7

ಉತ್ತರ ಕರ್ನಾಟಕ ನಿರ್ಲಕ್ಷ್ಯ ಬಿಜೆಪಿ ಹೋರಾಟ

Published:
Updated:

ಬೆಳಗಾವಿ: ಉತ್ತರ ಕರ್ನಾಟಕದ ಅಭಿವೃದ್ಧಿಗೆ ಮೈತ್ರಿ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿ ಬಿಜೆಪಿಯು ಸೋಮವಾರದಿಂದ ವಿಧಾನಮಂಡಲದ ಅಧಿವೇಶನದಲ್ಲಿ ಹೋರಾಟ ನಡೆಸಲು ಮುಂದಾಗಿದೆ.

ಸದನದ ಕಲಾಪಗಳಿಗೆ ಭಂಗ ಬಾರದ ರೀತಿಯಲ್ಲಿ ದಿನಕ್ಕೊಂದು ವಿಚಾರದ ಬಗ್ಗೆ ಹೋರಾಟ ನಡೆಸಲು ಪಕ್ಷದ ಶಾಸಕರ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಕಲಾಪಕ್ಕೆ ಅಡ್ಡಿ ಪಡಿಸಿದರೆ ಉತ್ತರ ಕರ್ನಾಟಕದ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿಕೊಳ್ಳಬೇಕಾಗುತ್ತದೆ ಎಂಬ ಆತಂಕದಿಂದ ಕಮಲ ಪಡೆ ಈ ತಂತ್ರಕ್ಕೆ ಮೊರೆ ಹೋಗಿತ್ತು.

’ಮುಖ್ಯಮಂತ್ರಿ ಅವರು ಹಾಸನ, ಮಂಡ್ಯ ಹಾಗೂ ರಾಮನಗರ ಜಿಲ್ಲೆಗಳಿಗಷ್ಟೇ ಯೋಜನೆಗಳನ್ನು ಕೇಂದ್ರೀಕರಿಸಿ
ದ್ದಾರೆ. ಉತ್ತರದ 13 ಜಿಲ್ಲೆಗಳಿಗೆ ಬೆರಳೆಣಿಕೆ ಸಲವಷ್ಟೇ ಭೇಟಿ ನೀಡಿದ್ದಾರೆ. ಅಭಿವೃದ್ಧಿಯಲ್ಲೂ ತಾರತಮ್ಯ ತೋರುತ್ತಿ
ದ್ದಾರೆ‘ ಎಂಬುದು ಬಿಜೆಪಿಯ ಆರೋಪ. 

10 ಸರ್ಕಾರಿ ಕಚೇರಿಗಳನ್ನು ಬೆಳಗಾವಿ ಹಾಗೂ ಕಲಬುರ್ಗಿಗೆ ಸ್ಥಳಾಂತರಿಸುವುದಾಗಿ ಕುಮಾರಸ್ವಾಮಿ ಭರವಸೆ ನೀಡಿ ನಾಲ್ಕು ತಿಂಗಳುಗಳು ಕಳೆದವು. ಒಂದೇ ಒಂದು ಕಚೇರಿ ಇಲ್ಲಿಯವರೆಗೆ ಸ್ಥಳಾಂತರವಾಗಿಲ್ಲ. ಇದು ಅವರ ಕಾಳಜಿಯನ್ನು ತೋರಿಸುತ್ತದೆ’ ಎಂದು ಮುಖಂಡರು ದೂರಿದರು.

‘ಸೋಮವಾರದಿಂದ ಸದನದ ಒಳಗೆ ಹಾಗೂ ಹೊರಗೆ ಈ ವಿಷಯ ಕುರಿತು ಹೋರಾಟ ನಡೆಸುತ್ತೇವೆ’ ಎಂದು ಯಡಿಯೂರಪ್ಪ ಪ್ರಕಟಿಸಿದ್ದಾರೆ.

‘ಕೈ’ಶಾಸಕರಿಂದಲೂ ಧ್ವನಿ: ಸಂಪುಟದಲ್ಲಿ ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ಸಿಕ್ಕಿಲ್ಲ, ಅನುದಾನ ಹಂಚಿಕೆಯಲ್ಲೂ ತಾರ
ತಮ್ಯ ಮಾಡಲಾಗುತ್ತಿದೆ ಎಂದು ಸದನದಲ್ಲಿ ಧ್ವನಿ ಎತ್ತಲು ಕಾಂಗ್ರೆಸ್‌ ಶಾಸಕರು ನಿರ್ಧರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !