ಲಕ್ಷ್ಮೀವರ ತೀರ್ಥರ ದೇಹದಲ್ಲಿ ವಿಷದ ಅಂಶ: ಪೊಲೀಸರಿಗೆ ಮಾಹಿತಿ

7

ಲಕ್ಷ್ಮೀವರ ತೀರ್ಥರ ದೇಹದಲ್ಲಿ ವಿಷದ ಅಂಶ: ಪೊಲೀಸರಿಗೆ ಮಾಹಿತಿ

Published:
Updated:
ಲಕ್ಷ್ಮೀವರ ತೀರ್ಥ ಸ್ವಾಮೀಜಿ

ಉಡುಪಿ: 'ಶೀರೂರು ಮಠದ ಲಕ್ಷ್ಮೀವರ ತೀರ್ಥರ ದೇಹದಲ್ಲಿ ವಿಷದ ಅಂಶ ಪತ್ತೆಯಾಗಿದೆ. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದೇವೆ' ಎಂದು ಶ್ರೀಗಳಿಗೆ ಚಿಕಿತ್ಸೆ ನೀಡಿದ ವೈದ್ಯ ಡಾ.ಅವಿನಾಶ್‌ ಶೆಟ್ಟಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
'ಹೊಟ್ಟೆನೋವಿನಿಂದ ಬಳಲುತ್ತಿದ್ದ ಸ್ವಾಮೀಜಿಗೆ ಚಿಕಿತ್ಸೆ ಕೊಟ್ಟೆವು. ಆದರೆ ಬಹುಅಂಗಗಳ ವೈಫಲ್ಯದಿಂದ ಸ್ವಾಮೀಜಿ ಮೃತಪಟ್ಟರು' ಎಂದು ಅವರು ಸ್ಪಷ್ಟಪಡಿಸಿದರು.

'ಶ್ರೀಗಳನ್ನು ಉಳಿಸಿಕೊಳ್ಳಲು ನಾವು  ನಾವು ಸತತ ಪ್ರಯತ್ನ ಪಟ್ವಿ. ಆದರೆ ಪ್ರಯೋಜನವಾಗಲಿಲ್ಲ. ಬೆಳಿಗ್ಗೆ 8.30ಕ್ಕೆ ಅವರು ನಿಧನರಾದರು. ವಿಷಪ್ರಾಶನವಾಗಿರುವ ಶಂಕೆ ಇದೆ. ಈ ಕುರಿತು ಪೊಲೀಸ್ ಇಲಾಖೆಗೆ ಮಾಹಿತಿ ಕೊಟ್ಟಿದ್ದೇವೆ' ಎಂದು ಅವರು ಹೇಳಿದರು.

ತನಿಖೆಗೆ ಒತ್ತಾಯ

ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕೆಲ ಸ್ವಾಮೀಜಿಗಳು ಸಹ ಸಮಗ್ರ ತನಿಖಗೆ ಒತ್ತಾಯಿಸಿದ್ದಾರೆ.

ಸ್ವಾಮೀಜಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪೇಜಾವರ ಮಠದಲ್ಲಿ ಈ ಹಿಂದೆ ಪೀಠತ್ಯಾಗ ಮಾಡಿದ್ದ ಕಿರಿಯ ಯತಿ ವಿಶ್ವ ವಿಜಯ ತೀರ್ಥರು 'ಲಕ್ಷ್ಮೀವರ ತೀರ್ಥರದು ನೈಸರ್ಗಿಕ ಸಾವು ಅಲ್ಲ. ಈ ಕುರಿತು ಸಮಗ್ರ ತನಿಖೆ ಆಗಬೇಕು' ಎಂದು ಒತ್ತಾಯಿಸಿದ್ದಾರೆ.

'ಪಟ್ಟದ ದೇವರ ವಿಚಾರವನ್ನು ಲಕ್ಷ್ಮೀವರ ತೀರ್ಥರು ಅತಿಯಾಗಿ ಮನಸಿಗೆ ಹಚ್ಚಿಕೊಂಡಿದ್ದರು. ಅವರ ಆರೋಗ್ಯ ಚೆನ್ನಾಗಿತ್ತು. ಸಾಯುವಂಥ ಅನಾರೋಗ್ಯ ಇರಲಿಲ್ಲ. ನ್ಯಾಯಾಲಯದಲ್ಲಿ ಹೋರಾಟ ನಡೆಸಲು ಸಿದ್ಧತೆ ಮಾಡಿಕೊಂಡಿದ್ದರು' ಎಂದು ಕೇಮಾರು ಮಠದ ಶ್ರೀಗಳು ಹೇಳಿದ್ದಾರೆ.

'ವನಮಹೋತ್ಸವ ಕಾರ್ಯಕ್ರಮದ ನಂತರ ಆಹಾರ ಸೇವಿಸಿದ್ದರಿಂದ ಅವರಿಗೆ ಫುಡ್‌ಫಾಯ್ಸನ್ ಆಗಿದೆ ಎನ್ನುವುದು ಸುಳ್ಳು. ಒಂದು ವೇಳೆ ಹೀಗಾಗಿದ್ದರೆ ಅವರ ಜೊತೆಯಲ್ಲಿದ್ದ ಎಲ್ಲರಿಗೂ ವಾಂತಿಯಾಗಬೇಕಿತ್ತು' ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

'ಶ್ರೀಗಳ ಅನುಮಾನಾಸ್ಪದ ಸಾವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ಸಮಗ್ರ ತನಿಖೆ ನಡೆಸಬೇಕು' ಎಂದು ಆಗ್ರಹಿಸಿರುವ ಅವರು, 'ಲಕ್ಷ್ಮೀವರ ತೀರ್ಥರು ಬಡವರ ಪರ ಇದ್ದ, ಜಾತಿಮತದ ಎಲ್ಲೆ ಮೀರಿದ ಸ್ವಾಮೀಜಿ' ಎಂದು ನೆನಪಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 46

  Happy
 • 3

  Amused
 • 6

  Sad
 • 1

  Frustrated
 • 3

  Angry

Comments:

0 comments

Write the first review for this !