ವೀರಶೈವ ಲಿಂಗಾಯತರ ರಾಜಕೀಯ ಶಕ್ತಿ ಕ್ಷೀಣ

7
ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಿದ್ಧಗಂಗಾಮಠದ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಕಳವಳ

ವೀರಶೈವ ಲಿಂಗಾಯತರ ರಾಜಕೀಯ ಶಕ್ತಿ ಕ್ಷೀಣ

Published:
Updated:
ಸಿದ್ದಲಿಂಗ ಸ್ವಾಮೀಜಿ

ತುಮಕೂರು: ‘ವೀರಶೈವ ಲಿಂಗಾಯತ ಸಮಾಜವು ರಾಜಕೀಯವಾಗಿ ದುರ್ಬಲವಾಗುತ್ತಿದೆ’ ಎಂದು ಸಿದ್ಧಗಂಗಾಮಠದ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ಭಾನುವಾರ ಸಿದ್ಧಗಂಗಾ ತಾಂತ್ರಿಕ ಕಾಲೇಜಿನಲ್ಲಿ ಜಿಲ್ಲಾ ವೀರಶೈವ ಲಿಂಗಾಯತ ಸೇವಾ ಸಮಿತಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ನೂತನ ಶಾಸಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿಂದೆ ನಮ್ಮ ಸಮಾಜವು ರಾಜಕೀಯವಾಗಿ ಪ್ರಬಲವಾಗಿತ್ತು. ಈಗ ದುರ್ಬಲವಾಗಿದೆ ಎಂಬ ಭಾವನೆ ಬಂದಿದೆ. ಸಮಾಜದವರು ಪಕ್ಷ ಬೇಧ ಮರೆತು ಸಂಘಟಿತರಾದಾಗ ರಾಜಕೀಯವಾಗಿ ಹೆಚ್ಚು ಅವಕಾಶಗಳು ಲಭಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

'ಬಿ.ಎಸ್.ಯಡಿಯೂರಪ್ಪ ಅವರು ವೀರಶೈವ ಲಿಂಗಾಯತ ಸಮಾಜದ ಧೀಮಂತ ನಾಯಕರು. ಬೇರೆ ಸಮಾಜದವರು ಅವರ ಸಮಾಜದ ರಾಜಕೀಯ ನಾಯಕರ ಬಗ್ಗೆ ಅಭಿಮಾನ ಪಡುತ್ತವೆ. ಹಾಗೆಯೇ ನಾವೂ ಯಡಿಯೂರಪ್ಪ ಅವರನ್ನು ಧೀಮಂತ ನಾಯಕರು ಎಂದು ಹೇಳಿದರೆ ತಪ್ಪೇನಿಲ್ಲ’ ಎಂದು ನುಡಿದರು.

'ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಲ್ಲಿ ಬಿ.ವೈ.ವಿಜಯೇಂದ್ರ ಸ್ಪರ್ಧಿಸಿದ್ದರೆ ಇವತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುತ್ತಿತ್ತು. ವಿಜಯೀಂದ್ರ ಆ ಭಾಗದಲ್ಲಿ ಜನರ ಪ್ರೀತಿ ಗಳಿಸಿದ್ದಾರೆ. ಅವರಿಂದಲೇ 5–6 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಿತ್ತು ಎಂದು ನನ್ನನ್ನು ಭೇಟಿ ಮಾಡಿದ ಅನೇಕ ಜನರು ಹೇಳಿದ್ದಾರೆ. ಭವಿಷ್ಯದಲ್ಲಿ ಯಡಿಯೂರಪ್ಪ ಅವರ ತರಹ ಧೀಮಂತ ನಾಯಕರಾಗಿ ಹೊರಹೊಮ್ಮುವ ವಿಶ್ವಾಸವಿದೆ’ ಎಂದು ಸ್ವಾಮೀಜಿ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !