ಪ್ರಸಾದ್ ರಕ್ಷಿದಿಗೆ ವತ್ಸಲಾದೇವಿ ಪ್ರಶಸ್ತಿ

7

ಪ್ರಸಾದ್ ರಕ್ಷಿದಿಗೆ ವತ್ಸಲಾದೇವಿ ಪ್ರಶಸ್ತಿ

Published:
Updated:
ಪ್ರಸಾದ್ ರಕ್ಷಿದಿ

ಬೆಂಗಳೂರು: ಹಿರಿಯ ರಂಗಸಾಧಕ ಪ್ರಸಾದ್ ರಕ್ಷಿದಿ ಅವರು ‘ಡಾ.ಸಿ.ವಿ ವತ್ಸಲಾದೇವಿ ಸ್ಮಾರಕ ಪ್ರಶಸ್ತಿ’ಗೆ ಆಯ್ಕೆ ಆಗಿದ್ದಾರೆ.

ರಂಗಭೂಮಿ ಚಟುವಟಿಕೆಗಳ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಸಮಾಜಸೇವೆಗೆ ಅವರು ಹೆಸರಾಗಿದ್ದಾರೆ. ‘ಸಿರಿಮನೆ ಪ್ರತಿಷ್ಠಾನ’ ನೀಡುವ ಪ್ರಶಸ್ತಿಯು ₹ 25 ಸಾವಿರ ನಗದು ಬಹುಮಾನವನ್ನು ಒಳಗೊಂಡಿದೆ.

ಪ್ರಶಸ್ತಿ ಪ್ರದಾನ ಸಮಾರಂಭ ಜುಲೈ 9ರಂದು ಬೆಂಗಳೂರಿನ ಸಾಹಿತ್ಯ ಪರಿಷತ್ತಿನಲ್ಲಿ ನಡೆಯಲಿದೆ.

‘ಪ್ರಸಾದ್ ರಕ್ಷಿದಿ ಅವರು ಹಾಸನಜಿಲ್ಲೆಯ ಸಕಲೇಶಪುರ ತಾಲ್ಲೂಕಿನಲ್ಲಿ ಸಮಾನ ಮನಸ್ಕರೊಂದಿಗೆ ಸೇರಿ ಅವರು ಸ್ಥಾಪಿಸಿದ ’ಜೈ ಕರ್ನಾಟಕ ಸಂಘ ಬೆಳ್ಳೇಕೆರೆ’ ಸಂಸ್ಥೆ, ಆಸುಪಾಸಿನ ಹಳ್ಳಿಗಳ ಮಕ್ಕಳಿಗೆ ಹಾಗೂ ಕಾಯಕ ಜೀವಿಗಳಿಗೆ ಅಭಿವ್ಯಕ್ತಿಯ ಹೊಸಬಗೆಯನ್ನು ಪರಿಚಯಿಸಿತು’ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ.ಸಿ.ವೀರಣ್ಣ ಹೇಳಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !