ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ದೇವಸ್ಥಾನಗಳ ಭೇಟಿ ‘ತಲೆಯೊಳಗೆ ಮಲ ಹೊರುವ ಪದ್ಧತಿ’: ಕಾಳೇಗೌಡ ನಾಗವಾರ ಬೇಸರ

ಸಿ.ಎಸ್.ದ್ವಾರಕಾನಾಥ್ ಅವರ 'ಮೂಕ ನಾಯಕ' ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಹೇಳಿಕೆ
Last Updated 1 ಜನವರಿ 2019, 16:49 IST
ಅಕ್ಷರ ಗಾತ್ರ

ಮೈಸೂರು: ‘ಅಂದು ಬಸವಲಿಂಗಪ್ಪ ಮಲಹೊರುವ ಪದ್ಧತಿ ನಿಷೇಧಿಸಿದ್ದರು. ಆದರೆ, ಜಾತಿ ವಿನಾಶ ಮಾಡಬೇಕಾದ ಮುಖ್ಯಮಂತ್ರಿ ಇಂದು ತಮ್ಮ ತಲೆಯೊಳಗೆ ಮಲ ಇರಿಸಿಕೊಂಡಿದ್ದಾರೆ’ ಎಂದು ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಬೇಸರ ವ್ಯಕ್ತಪಡಿಸಿದರು.

ಕೋರೆಗಾಂವ್ ವಿಜಯೋತ್ಸವ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಡಾ.ಸಿ.ಎಸ್.ದ್ವಾರಕಾನಾಥ್ ಅವರ ‘ಮೂಕ ನಾಯಕ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮುಖ್ಯಮಂತ್ರಿ (ಎಚ್.ಡಿ.ಕುಮಾರಸ್ವಾಮಿ) ನೂರು ದಿನಗಳಲ್ಲಿ 150ಕ್ಕೂ ಹೆಚ್ಚು ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ‌. ಇದು ತಲೆಯೊಳಗೆ ಮಲ ಹೊರುವ ಪದ್ಧತಿಯಲ್ಲದೇ ಮತ್ತಿನ್ನೇನು? ಈ ರೀತಿಯ ಸಾರ್ವಜನಿಕ ಅಸಹ್ಯ ನಿಲ್ಲಿಸಬೇಕು’ ಎಂದು ಆಗ್ರಹಿಸಿದರು.

ಇದಕ್ಕೆ ಪೂರಕವಾಗಿ ಮಾತನಾಡಿದ ಶಾಸಕ ಎನ್‌.ಮಹೇಶ್‌, ‘ಶ್ರೀಶ್ರೀ ರವಿಶಂಕರ ಗುರೂಜಿ ಅವರು ದೇಶದಲ್ಲಿ ಜಾತಿ ವಿನಾಶವಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ದಲಿತರು ತಯಾರಿಸಿದ ಬಿಸಿಯೂಟವನ್ನು ಮೇಲ್ವರ್ಗಗಳಿಗೆ ಸೇರಿದ ಮಕ್ಕಳಿಗೆ ತಿನ್ನಲು ಬಿಡದ ಸಮಾಜ ನಮ್ಮಲ್ಲಿದೆ. ಹೀಗಿರುವಾಗ ಜಾತಿ ನಾಶವಾಗಿದೆ ಎಂದು ಹೇಗೆ ಹೇಳಲು ಸಾಧ್ಯ?’ ಎಂದುಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT