ಭಾನುವಾರ, ಸೆಪ್ಟೆಂಬರ್ 15, 2019
23 °C
ವಿಶ್ವದ ಗಮನ ಸೆಳೆದಿರುವ ‘ಐಆರ್‌ಎಂಎ’

ಗ್ರಾಮೀಣಾಭಿವೃದ್ಧಿ ಚಿಂತಕರ ಗಂಗೋತ್ರಿ

Published:
Updated:

ಬೆಂಗಳೂರು: ಗುಜರಾತ್‌ನ ಆನಂದ್‌ನಲ್ಲಿರುವ ದಿ ಇನ್‌ಸ್ಟಿಟ್ಯೂಟ್ ಆಫ್‌ ರೂರಲ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆ (ಐಆರ್‌ಎಂಎ) ಗ್ರಾಮೀಣಾಭಿವೃದ್ಧಿ ನಿರ್ವಹಣೆಗೆ  ತುಡಿಯುವ ಮನಸ್ಸುಗಳಿಗೆ ಹೇಳಿ ಮಾಡಿಸಿದ ಸ್ಥಳ. 

1979ರಲ್ಲಿ ಸ್ಥಾಪನೆಯಾದ ಈ ಸಂಸ್ಥೆಯ ಉದ್ದೇಶ ಗ್ರಾಮೀಣ ಅಭಿವೃದ್ಧಿ ವ್ಯವಸ್ಥಾಪಕರ ಹೊಸ ಪೀಳಿಗೆಯನ್ನು ಸೃಷ್ಟಿಸುವುದು. ಇದರಲ್ಲಿ ಸಂಸ್ಥೆ ಯಶಸ್ವಿಯಾಗಿದ್ದು ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ದೇಶದ ಇತರ ಹಲವು ಸಂಸ್ಥೆಗಳಲ್ಲಿ ಐಆರ್‌ಎಂಎ ಸಂಸ್ಥೆಯ ಶೈಕ್ಷಣಿಕ ಮಹತ್ವ ಬಿಂಬಿತವಾಗಿದೆ.

ಐಆರ್‌ಎಂಎ ಮೂರು ಹಂತದ ಕೋರ್ಸ್‌ಗಳನ್ನು ನೀಡುತ್ತದೆ. 1.ಪೋಸ್ಟ್‌ ಗ್ರಾಜುವೇಟ್‌ ‍‍ಡಿಪ್ಲೊಮಾ ಇನ್‌ ರೂರಲ್‌ ಮ್ಯಾನೇಜ್‌ಮೆಂಟ್‌ (ಪಿಜಿಡಿಆರ್‌ಎಂ),  2.ಪೋಸ್ಟ್‌ ಗ್ರಾಜುವೇಟ್‌ ಪ್ರೋಗ್ರಾಂ ಇನ್‌ ರೂರಲ್‌ ಮ್ಯಾನೇಜ್‌ಮೆಂಟ್‌ (ಪಿಆರ್‌ಎಂ) 3. ಫೆಲೊ ಪ್ರೋಗ್ರಾಂ ಇನ್‌ ರೂರಲ್‌ ಮ್ಯಾನೇಜ್‌ಮೆಂಟ್‌ (ಎಫ್‌ಪಿಆರ್‌ಎಂ).

ಅರ್ಹತೆ: ಪಿಜಿಡಿಆರ್‌ಎಂ ಅಥವಾ ಪಿಆರ್‌ಎಂಗೆ ಯಾವುದೇ ಪದವಿಯಲ್ಲಿ ಶೇ 50ರಷ್ಟು (ಪರಿಶಿಷ್ಟ ಜಾತಿ, ಪಂಗಡದವರಿಗೆ ಶೇ 45) ಅಂಕ ಇರಬೇಕು. ಸಿಎಟಿ ಅಥವಾ ಎಕ್ಸ್‌ಎಟಿ ಪರೀಕ್ಷೆಗೆ ಹಾಜರಾಗಿರಬೇಕು.  ಐಆರ್‌ಎಂಎ ಸಂಸ್ಥೆಯ ಪ್ರತ್ಯೇಕ  ಅರ್ಹತಾ ಪರೀಕ್ಷೆಯಲ್ಲಿ (ಐಆರ್‌ಎಂಎಎಸ್‌ಎಟಿ) ಬಹು  ಆಯ್ಕೆಯ 40 ಪ್ರಶ್ನೆಗಳಿದ್ದು, 80 ನಿಮಿಷದಲ್ಲಿ ಉತ್ತರಿಸಬೇಕು. 4 ಪ್ರಶ್ನೆ ತಪ್ಪಿದರೆ 1ರಂತೆ ನೆಗೆಟಿವ್ ಅಂಕವೂ ಇರುತ್ತದೆ. ಅಭ್ಯರ್ಥಿಗಳು ಈ ಮೂರೂ ಪರೀಕ್ಷೆಗಳಲ್ಲಿ ಗಳಿಸುವ ಅಂಕದ ಆಧಾರದಲ್ಲಿ ಆಯ್ಕೆಯಾಗುತ್ತಾರೆ. ಎಸ್‌ಸಿಗೆ ಶೇ 15, ಎಸ್‌ಟಿಗೆ ಶೇ 7., ಒಬಿಸಿಗೆ ಶೇ 27, ಅಂಗವಿಕಲರಿಗೆ ಶೇ 3ರಷ್ಟು ಸೀಟು ಮೀಸಲಿದೆ.

ಐಆರ್‌ಎಂಎ ನೀಡುವ ಪಿಜಿಡಿಆರ್‌ಎಂ ಒಂದು ರೀತಿಯಲ್ಲಿ ಇತರ ಸಂಸ್ಥೆಗಳು ನೀಡುವ ಎಂಬಿಎ ಕೋರ್ಸ್‌. ಎಂಬಿಎಗೆ ಇರುವ ಪಠ್ಯಗಳೆಲ್ಲವೂ ಇಲ್ಲಿಯೂ ಇವೆ. ಆದರೆ ಗ್ರಾಮೀಣ ಅಭಿವೃದ್ಧಿಗೆ ಸಂಬಂಧಿಸಿದಂತೆ ಇದುವರೆಗೆ ಸ್ಪರ್ಶಿಸದ ಹಲವು ಕ್ಷೇತ್ರಗಳನ್ನು ಈ ಕೋರ್ಸ್‌ ತಲುಪಿದೆ. ಒಂದು ಕೋರ್ಸ್ ಅವಧಿಯಲ್ಲಿ 5 ಕ್ಲಾಸ್‌ರೂಂ ಕೋರ್ಸ್‌ಗಳು ಹಾಗೂ 3 ಇಂಟರ್ನ್‌ಶಿಪ್‌ಗಳಿರುತ್ತವೆ. ಒಂದು ಇಂಟರ್ನ್‌ಶಿಪ್‌ ಅವಧಿಯಲ್ಲಿ ಅಭ್ಯರ್ಥಿ ಯಾವುದೇ ಸೌಲಭ್ಯ ಇಲ್ಲದ ಗ್ರಾಮೀಣ ಪ್ರದೇಶದಲ್ಲಿ 8 ವಾರ ಇದ್ದು ಅಲ್ಲಿನ ಜನಜೀವನ ಅಧ್ಯಯನ ನಡೆಸಬೇಕಾಗುತ್ತದೆ. ಹೀಗಾಗಿ ಇದೊಂದು ಗ್ರಾಮೀಣ ಅಭಿವೃದ್ಧಿಗೆ ಇರುವ ನಿಜವಾದ ಪ್ರಾಯೋಗಿಕ ತರಗತಿ ಎನಿಸಿಬಿಟ್ಟಿದೆ.

ಎರಡು ವರ್ಷದ ಕೋರ್ಸ್‌ಗೆ ₹ 12 ಲಕ್ಷ ಶುಲ್ಕ ಇದೆ. ಊಟ–ವಸತಿ ಸೌಲಭ್ಯ ಇದೆ. ಮಾಹಿತಿಗೆ ಸಂಪರ್ಕಿಸಿ: 02692-260391,260181

***

ಎಂಬಿಎಗೆ ಪರ್ಯಾಯ

ಐಆರ್‌ಎಂಎ ನೀಡುವ ಪಿಜಿಡಿಆರ್‌ಎಂಗೂ ಎಂಬಿಎ ಕೋರ್ಸ್‌ಗೂ ಯಾವುದೇ ವ್ಯತ್ಯಾಸ ಇಲ್ಲ. 2018ರ ಸಿಎಟಿ ಬರೆದವರ ಮೊದಲ ಆದ್ಯತೆ ಇತರ ಸಂಸ್ಥೆಗಳ ಎಂಬಿಎ ಆಗಿರಲಿಲ್ಲ, ಬದಲಿಗೆ ಐಆರ್‌ಎಂಎ ಸಂಸ್ಥೆಯ ಪಿಜಿಡಿಆರ್‌ಎಂ ಆಗಿತ್ತು. ಇಲ್ಲಿಗೆ ಪ್ರವೇಶ ಪಡೆಯಲು ಜನವರಿ ಹೊತ್ತಿಗೇ ತಯಾರಿ ನಡೆಸಬೇಕಾಗಿರುತ್ತದೆ. ಈ ವರ್ಷ ವಿಳಂಬವಾಯಿತು ಎಂದೆನಿಸಿದರೂ, ಮುಂದಿನ ದಿನಗಳಲ್ಲಿ ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಗಮನ ಇರಿಸಬಹುದು.

Post Comments (+)