ಪಿಯು ಪೂರಕ ಪರೀಕ್ಷೆ ಮೊದಲ ದಿನ ಸರಾಗ

7

ಪಿಯು ಪೂರಕ ಪರೀಕ್ಷೆ ಮೊದಲ ದಿನ ಸರಾಗ

Published:
Updated:

ಬೆಂಗಳೂರು: ದ್ವಿತೀಯ ಪಿಯು ಪೂರಕ ಪರೀಕ್ಷೆ ಶುಕ್ರವಾರ ಆರಂಭಗೊಂಡಿದ್ದು, ಮೊದಲ ದಿನ ಯಾವುದೇ ಅಡೆತಡೆಗಳಿಲ್ಲದೆ ಪರೀಕ್ಷೆ ನಡೆದಿದೆ.

ಸಮಾಜಶಾಸ್ತ್ರ, ಲೆಕ್ಕಶಾಸ್ತ್ರ, ಗಣಿತ ಪರೀಕ್ಷೆಗಳು ನಡೆದವು. ರಾಜ್ಯದಾದ್ಯಂತ 301 ಕೇಂದ್ರಗಳಲ್ಲಿ, ಖಾಸಗಿ ಹಾಗೂ ಪುನರಾವರ್ತಿತ ಅಭ್ಯರ್ಥಿಗಳು ಸೇರಿ ಸುಮಾರು 2.5 ಲಕ್ಷ ಮಂದಿ ಪರೀಕ್ಷೆ ಬರೆದಿದ್ದಾರೆ. 

ರಾಜ್ಯದ ಯಾವ ಕೇಂದ್ರದಲ್ಲಿಯೂ ವಿದ್ಯಾರ್ಥಿಗಳು ಡಿಬಾರ್‌ ಆಗಿಲ್ಲ. ಅಕ್ರಮ ಎಸಗಿದ ಪ್ರಕರಣಗಳೂ ನಡೆದಿಲ್ಲ ಎಂದು ಪದವಿಪೂರ್ಣ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ.ಶಿಖಾ ತಿಳಿಸಿದರು.

ಪ್ರಯತ್ನ ಯಶಸ್ವಿ: ‘ಆನ್‌ಲೈನ್‌ ಮೂಲಕ ಪ್ರಶ್ನೆಪತ್ರಿಕೆ ರವಾನಿಸುವ ಪ್ರಕ್ರಿಯೆ ಸುಗಮವಾಗಿ ನಡೆದಿದ್ದು, ಯಾವುದೇ ರೀತಿಯ ತಾಂತ್ರಿಕ ದೋಷಗಳು ಉಂಟಾಗಿಲ್ಲ. ಪರೀಕ್ಷೆಗಳು ಪೂರ್ಣಗೊಂಡ ನಂತರ ಆನ್‌ಲೈನ್‌ ಪ್ರಕ್ರಿಯೆಯ ಸಾಧಕ–ಭಾದಕಗಳ ಕುರಿತು ಮಾಹಿತಿ ನೀಡಲಾಗುವುದು’ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !