ಕಾರ್ಮಿಕರಿಂದ ಕಲ್ಲು ತೂರಾಟ ಅಶ್ರುವಾಯು, ಲಘು ಲಾಠಿ ಪ್ರಹಾರ

7
ಕ್ರೇನ್ ಬಿದ್ದು ಆರು ಜನ ಸಾವು ಪ್ರಕರಣ

ಕಾರ್ಮಿಕರಿಂದ ಕಲ್ಲು ತೂರಾಟ ಅಶ್ರುವಾಯು, ಲಘು ಲಾಠಿ ಪ್ರಹಾರ

Published:
Updated:

ಕಲಬುರ್ಗಿ: ಸೇಡಂ ತಾಲ್ಲೂಕು ಬೆನಕನಹಳ್ಳಿ ಬಳಿ ಇರುವ ಶ್ರೀ ಸಿಮೆಂಟ್ ಕಾರ್ಖಾನೆ ಆವರಣದಲ್ಲಿ ಗುರುವಾರ ಸಂಜೆ ಕ್ರೇನ್ ಬಿದ್ದು ಆರು ಜನ ಕಾರ್ಮಿಕರು ಮೃತಪಟ್ಟಿದ್ದರಿಂದ ರೊಚ್ಚಿಗೆದ್ದ ಕಾರ್ಮಿಕರು ಶುಕ್ರವಾರ ಕಾರ್ಖಾನೆ ಮೇಲೆ ಕಲ್ಲು ತೂರಿದರು.

ಇದರಿಂದ ಆರು ಜನ ಪೊಲೀಸರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಾರ್ಮಿಕರು ಕಾರ್ಖಾನೆಯ ಕಚೇರಿ ಕಿಟಕಿಗಳ ಗಾಜುಗಳನ್ನು ಜಖಂಗೊಳಿಸಿದರು. ಅಲ್ಲದೆ ಸರ್ಕಾರಿ ಬಸ್‌ವೊಂದಕ್ಕೆ ಕಲ್ಲು ಎಸೆದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಪ್ರಯೋಗಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ 30 ಕಾರ್ಮಿಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಮೃತರ ಕುಟುಂಬಕ್ಕೆ ತಲಾ ₹20 ಲಕ್ಷ ಪರಿಹಾರ ಕೊಡಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಅವರು ಕಾರ್ಖಾನೆ ಆಡಳಿತ ಮಂಡಳಿ ಸದಸ್ಯರ ಜತೆ ಮಾತುಕತೆ ನಡೆಸಿದರು. ಕಾರ್ಖಾನೆಯ ಕೋಡ್ಲಾ ಘಟಕದ ಮುಖ್ಯಸ್ಥ ಅರವಿಂದಕುಮಾರ ಪಾಟೀಲ, ‘ಮೃತರ ಕುಟುಂಬಗಳಿಗೆ ತಲಾ ₹12 ಲಕ್ಷ ಪರಿಹಾರ ನೀಡಲಾಗುವುದು’ ಎಂದು ಲಿಖಿತ ಭರವಸೆ ನೀಡಿದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !