ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಕುಮಾರ ಸ್ವಾಮೀಜಿಗೆ ಇಲ್ಲ ಭಾರತ ರತ್ನ: ಮೋದಿ ವಿರುದ್ಧ ಜಾಲತಾಣಗಳಲ್ಲಿ ಆಕ್ರೋಶ

Last Updated 26 ಜನವರಿ 2019, 2:00 IST
ಅಕ್ಷರ ಗಾತ್ರ

ಬೆಂಗಳೂರು: ನಡೆದಾಡುವ ದೇವರು, ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ ಅವರಿಗೆ ಕೇಂದ್ರ ಸರ್ಕಾರ ದೇಶದ ಅತ್ಯುನ್ನತ ‘ಭಾರತ ರತ್ನ’ ಪ್ರಶಸ್ತಿ ನೀಡದಿರುವುದಕ್ಕೆ ರಾಜ್ಯದ ಜನತೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಶುಕ್ರವಾರ ಶಿಕ್ಷಣ ತಜ್ಞ ನಾನಾಜಿ ದೇಶಮುಖ್, ಸಂಗೀತ ನಿರ್ದೇಶಕ ಭೂಪೆನ್ ಹಜಾರಿಕಾ (ಮರಣೋತ್ತರ) ಹಾಗೂ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಘೋಷಣೆ ಮಾಡಿದೆ.

ಜನವರಿ 21ರಂದು ಲಿಂಗೈಕ್ಯರಾದತುಮಕೂರಿನಸಿದ್ಧಗಂಗ ಮಠದ ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ನೀಡಲಾಗುವುದು ಎಂದು ರಾಜ್ಯದ ಜನತೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಇದೀಗ ಮೋದಿ ಸರ್ಕಾರ ಕನ್ನಡಿಗರ ನಿರೀಕ್ಷೆಯನ್ನು ಹುಸಿಗೊಳಿಸಿದೆ. ಇತ್ತೀಚೆಗೆಮುಖ್ಯಮಂತ್ರಿ ಕುಮಾರಸ್ವಾಮಿ ಕೂಡಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ಪತ್ರ ಬರೆದಿದ್ದರು. ಹಿಂದಿನ ಕಾಂಗ್ರೆಸ್‌ ಸರ್ಕಾರ ಸಹಭಾರತ ರತ್ನಕ್ಕೆಶಿಫಾರಸುಮಾಡಿತ್ತು.

ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನನೀಡದಿರುವುದಕ್ಕೆ ನಿರಾಶೆಗೊಂಡಿರುವರಾಜ್ಯದ ಜನತೆ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಾತಿ, ಧರ್ಮ ಪಕ್ಷ ಬೇಧ ಮರೆತ ಕನ್ನಡಿಗರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ನಿರಾಸೆ ತಂದಿದೆ: ಕುಮಾರಸ್ವಾಮಿ

ಕೆಲವು ಸಾಧಕರಿಗೆ ಮರಣೋತ್ತರವಾಗಿಯಾದರೂ ಈ ಪ್ರಶಸ್ತಿ ಘೋಷಣೆಯಾಗಿರುವುದು ಹರ್ಷ ತಂದಿದೆ.
ಆದರೆ ಸಿದ್ದಗಂಗಾ ಶ್ರೀಗಳಿಗೆ ಭಾರತರತ್ನ ಹಾಗೂ ಇನ್ನೂ ಹಲವು ಅರ್ಹ ಸಾಧಕರಿಗೆ ಪದ್ಮ ಪ್ರಶಸ್ತಿ ನಿರೀಕ್ಷಿಸಿದ್ದೆವು. ಇದು ಕೈಗೂಡದಿರುವುದು ನಿರಾಸೆ ತಂದಿದೆ ಎಂದು ಮುಖ್ಯಮಂತ್ರಿ ಕುಮಾರ ಸ್ವಾಮಿ ಟ್ವೀಟ್‌ ಮಾಡಿದ್ದಾರೆ.

ಬಿಜೆಪಿಯ ಹಿರಿಯ ನಾಯಕ ಹಾಗೂ ಶಾಸಕ ಸುರೇಶ್‌ ಕುಮಾರ್‌ ’ಪ್ರಣಬ್ ಮುಖರ್ಜಿ, ಭೂಪೇನ್ ಹಜಾರಿಕಾ ಮತ್ತು ನಾನಾಜಿ ದೇಶ್ ಮುಖ್ ರಿಗೆ "ಭಾರತರತ್ನ" ನೀಡಿರುವುದು ಅತ್ಯಂತ ಸೂಕ್ತ. ಇವರೊಂದಿಗೆ ಪರಮಪೂಜ್ಯ ಸಿದ್ದಗಂಗಾ ಶ್ರೀಗಳ ಹೆಸರೂ ಇದ್ದಿದ್ದರೆ "ಭಾರತರತ್ನ" ದ ಮೆರಗು ಬಹಳಷ್ಟು ಹೆಚ್ಚುತ್ತಿತ್ತು ಎಂಬುದು ಎಲ್ಲರ ಭಾವನೆ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಇದು ದುರ್ದೈವ: ಸಿದ್ದರಾಮಯ್ಯ

ರಾಜ್ಯ ಸರ್ಕಾರ ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ನೀಡುವಂತೆ ಎರಡು ಸಲ ಶಿಫಾರಸು ಮಾಡಿದ್ದರೂ ಕೇಂದ್ರ ಸರ್ಕಾರ ನಿರ್ಲಕ್ಷ್ಯ ಮಾಡಿದೆ. ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ಪುರಸ್ಕಾರ ಸಿಗದಿರುವುದು ದುರ್ದೈವ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.

‘ಭಾರತ ರತ್ನ’ ಘೋಷಿಸದಿರುವುದು ದುರದೃಷ್ಟಕರ:ಜಿ. ಪರಮೇಶ್ವರ

‘ಸಿದ್ಧಗಂಗಾ ಶ್ರೀಗಳಿಗೆ ಕೇಂದ್ರ ಸರ್ಕಾರ ‘ಭಾರತ ರತ್ನ’ ಘೋಷಿಸದಿರುವುದು ದುರದೃಷ್ಟಕರ’ ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಹೇಳಿದ್ದಾರೆ.‘ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲೇ ಈ ಬಗ್ಗೆ ಕೇಂದ್ರಕ್ಕೆ ಶಿಫಾರಸು ಮಾಡಲಾಗಿತ್ತು. ಸಮ್ಮಿಶ್ರ ಸರ್ಕಾರ ಕೂಡಾ ಈ ಬಗ್ಗೆ ಮನವಿ ಮಾಡಿದರೂ ಕೇಂದ್ರ ಸ್ಪಂದಿಸಿಲ್ಲ’ ಎಂದು ಹೇಳಿದ್ದಾರೆ.

ಮೋದಿಯಿಂದ ಲಿಂಗಾಯಿತರಿಗೆ ಮಂಕು ಬೂದಿ...

2018ರ ವಿಧಾನಸಭೆಯಲ್ಲಿ ಮೂರು ಪಕ್ಷಗಳಿಂದ 58 ಲಿಂಗಾಯತ ಶಾಸಕರು ಆಯ್ಕೆಯಾಗಿದ್ದಾರೆ. 38 ಜನರು ಬಿಜೆಪಿ ಪಕ್ಷದಿಂದಲೇ ಆಯ್ಕೆಯಾಗಿದ್ದಾರೆ. ಹಾಗೂಬಿಜೆಪಿಯಿಂದ ಹೆಚ್ಚು ಲಿಂಗಾಯತ ಸಂಸದರು ಇದ್ದರೂ ಕೇಂದ್ರದ ಮೇಲೆ ಪ್ರಭಾವ ಬೀರಿಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ಕೊಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗಿವೆ.

ಆರ್‌ಎಸ್‌ಎಸ್‌ ಹಿಡಿತದಲ್ಲಿರುವ ಬಿಜೆಪಿ ಲಿಂಗಾಯತರನ್ನು ಮತಗಳಿಗೆ ಮಾತ್ರ ಬಳಸಿಕೊಂಡು ಅವರಿಗೆ ಮಂಕುಬೂದಿ ಎರಚಿದ್ದು, ಈಗಲಾದರು ಲಿಂಗಾಯತ ಸಮುದಾಯದವರು ಎಚ್ಚೆತ್ತುಕೊಳ್ಳಬೇಕು ಎಂದು ಫೇಸ್‌ಬುಕ್‌ನಲ್ಲಿ ಕೆಲವರು ಪೋಸ್ಟ್‌ಗಳನ್ನು ಹಾಕಿದ್ದಾರೆ.

ಬಿಜೆಪಿಯಲ್ಲಿ ಶೂದ್ರರಿಗೆ ಸೂಕ್ತ ಸ್ಥಾನಮಾನ ಇಲ್ಲ ಎಂಬುದಕ್ಕೆ ಇದೊಂದು ಜ್ವಲಂತ ಉದಾಹರಣೆ ಎಂದು ಕೆಲವರು ಪೋಸ್ಟ್‌ಗಳನ್ನು ಪ್ರಕಟಿಸಿದ್ದಾರೆ. ಕಿರಣ್‌ ಗಾಜನೂರು ಎಂಬುವರು ’ ಸ್ವಾಮಿ ಆಗಿದ್ದರೇನು, ಹಸಿವು ನೀಗಿಸಿದ್ದರೇನು#ಶೂದ್ರಶೂದ್ರನೇ. . . ಇದು#ರತ್ನದಕಥೆ... ಎಂದುಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಇನ್ನು ಕೆಲವರು ’ಲಿಂಗಾಯತರು ಈಗಲಾದರೂ ಬಿಜೆಪಿಯವರ ಬುದ್ದಿಯನ್ನು ಅರಿತು ಆ ಪಕ್ಷದಿಂದ ದೂರು ಇರಬೇಕು’ ಎಂದು ಸಲಹೆ ಮಾಡಿದ್ದಾರೆ.

ನಾಯಿಗೆ ಇರುವ ನಿಯತ್ತು...?

ಎಲ್‌.ಸಿ.ನಾಗರಾಜ್‌ ತಮ್ಮ ಫೇಸ್‌ಬುಕ್‌ ಗೋಡೆಯಲ್ಲಿ ‘ಬರಪೀಡಿತ ಪ್ರದೇಶಗಳ ಮಕ್ಕಳಿಗೆ ಊಟ , ಬಟ್ಟೆ , ಶಿಕ್ಷಣ ಕೊಟ್ಟ ಈ ತಾಯಿ ಮಮತೆಯ ಸಂತನ ಬದಲು ನಾನಾಜಿ ದೇಶಮುಖ್ ಗೆ ಭಾರತ ರತ್ನ ಸಿಗುವುದಾದರೆ ಸಿಗಲಿ ಬಿಡಿ. ಗಾಯಗೊಂಡ ನಾಯಿಯನ್ನ ತಂದು , ಸಾಕಿ ಸಲಹಿದ ತಾಯಿ ಮಮತೆ ದೊಡ್ಡದು , ನಾಯಿಯ ನಿಯತ್ತು ದೊಡ್ಡದು!ಈಗ ದೇಶವೇ ಗಾಯಗೊಂಡಿದೆ. ಎಂದು ಮಾರ್ಮಿಕವಾಗಿ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

ಶೂದ್ರ ಮಕ್ಕಳಿಗೆ ವಿದ್ಯೆ ಕೊಟ್ಟವರೂ ಬರಲಿಲ್ಲಭಾರತ ರತ್ನ....

ವರ್ಷಂಪ್ರತಿ 12,000 ಶೂದ್ರ ಮಕ್ಕಳಿಗೆಅನ್ನ ಅಕ್ಷರದ ಆಶ್ರಯವಿತ್ತಸಿದ್ದಗಂಗಾ ಶ್ರೀಗಳಿಗೆಭಾರತರತ್ನ ಬರುತ್ತದೆಂದು
ನಾಡಿನ ಜನರೆಲ್ಲ ಹಂಬಲಿಸಿದ್ದರು. ಶೂದ್ರರಿಗೆ ವಿದ್ಯೆ ಕೊಟ್ಟವರಿಗೆ ಪ್ರಶಸ್ತಿ ಕೊಡಲಾರರೆಂಬುದನ್ನು ನಾನು ಊಹಿಸಿದ್ದೆ! ಎಂದುಮುಕುಂದರಾಜ್‌ ಲಕ್ಕೇನಹಳ್ಳಿ ನರೇಸೆಗೌಡ ಎಂಬುವರು ತಮ್ಮ ಫೇಸ್‌ಬುಕ್‌ ಪುಟದಲ್ಲಿ ಬರೆದುಕೊಂಡಿದ್ದಾರೆ.

ಅಯೋಗ್ಯರು ನೀಡುವ ಯಾವ ಪುರಸ್ಕಾರಗಳೂ ಮಹನೀಯರ ಸಾಧನೆಯ ಮಾನದಂಡವಲ್ಲ ಎಂದು ನವೀನ್‌ ಕುಮಾರ್‌ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಭಾರತ ರತ್ನ ಎಂದರೆ ಹಿಂದಿ ಲಾಬಿಗೆ ಬಗ್ಗುವಂಥದ್ದು...

ಭಾರತ ರತ್ನದ ವಿಚಾರವಾಗಿ ಪ್ರಸ್ತುತ ಕೇಂದ್ರ ಸರ್ಕಾರವನ್ನು ಮಾತ್ರ ಟೀಕಿಸುವುದು ತರವಲ್ಲ. ವಿಶ್ವೇಶ್ವರಯ್ಯನವರು ಬ್ರಿಟಿಷ್ ಎಂಪೈರ್ ಅಡಿಯಲ್ಲೇ ನೈಟ್ ಕಮ್ಯಾಂಡರ್ ಹಾನರ್ ಪಡೆದಿದ್ದವರು ಮತ್ತು ಹಿಂದಿ ಭಾಷಿಕರ ಪ್ರಭಾವ ಇರುವಲ್ಲಿ ಬಹಳಷ್ಟು ಕೆಲಸ ಮಾಡಿದ್ದವರು ಅದಕ್ಕಾಗಿ ಅವರಿಗೆ ಭಾರತ ರತ್ನ ನೀಡುವುದು ಅನಿವಾರ್ಯವಿತ್ತು. ಭೀಮಸೇನ್ ಜೋಷಿ ಅವರು ಹಿಂದೂಸ್ಥಾನಿ ಗಾಯಕರು ಅವರ ಪ್ರಭಾವ-ವಲಯ ಕೂಡ ಹಿಂದೀ ವಲಯವೇ ಆಗಿದ್ದರಿಂದ ಅವರ ಪ್ರತಿಭೆಗೆ ಸನ್ಮಾನ ದೊರಕಿತು. ಸಿ ಎನ್ ಆರ್ ರಾವ್ ಜಗತ್ತಿಗೆ ಸಲ್ಲುವಂಥ ವಲಯದವರಾದ್ದರಿಂದ ಭಾರತ ರತ್ನ ನೀಡಲೇಬೇಕಿತ್ತು, ನೀಡಿದ್ದು ನಿಧಾನವೇ ಆಯಿತು. ಭಾರತ ರತ್ನ ಎಂದರೆ ಹಿಂದಿ ಲಾಬಿಗೆ ಬಗ್ಗುವಂಥದ್ದು, ಹಿಂದಿ ಭಾಷಿಕರ, ಹಿಂದಿ ಪ್ರಭಾವಲಯದಲ್ಲಿ ಬರುವಂಥದ್ದು ಎಂಬ ಪರಂಪರೆಯೇ ಬೆಳೆದುಬಿಟ್ಟಿದೆ. ಕನ್ನಡದ ಐಡೆಂಟಿಟಿ ಅಡಿಯಲ್ಲಿ ಯಾರನ್ನೂ ಈವರೆಗೂ ಗುರುತಿಸಿಲ್ಲ, ಅಂದರೆ ಕನ್ನಡ-ಕರ್ನಾಟಕ ಕೇಂದ್ರಿತವಾಗಿ ಆದ ಯಾವುದೇ ಕೆಲಸ ತುಂಬಾ ಸೀಮಿತ, ಅವು ಲೋಕಲ್ ಪ್ರಶಸ್ತಿಗೆ ಅರ್ಹ ಭಾರತ ರತ್ನಕ್ಕಲ್ಲ ಎಂಬ ಮನೋಭಾವ ತುಂಬಿದ್ದಾರೆ. ಉದಾ: ಶಿವಕುಮಾರ ಸ್ವಾಮೀಜಿಗಳು ಅಂದುಕೊಳ್ಳೋಣ. ಆವರು ಕರ್ನಾಟಕದಲ್ಲಿ ಮಾಡಿದ ಇದೇ ಕೆಲಸವನ್ನು ಉತ್ತರಪ್ರದೇಶದಲ್ಲಿ ಮಾಡಿದ್ದರೆ ಅವರಿಗೆ ಅಖಂಡ ಭಾರತ ರತ್ನ ಪ್ರಶಸ್ತಿ ಕೊಡುತಿದ್ದರು. ಪ್ರಶಸ್ತಿ ಮನೆ ಹಾಳಾಯ್ತು, ಅದರಿಂದ ಅವರ ಮಹತ್ವ ಹೆಚ್ಚಾಗಬೇಕಿಲ್ಲ. ಆದರೆ ಈ ಸಮಯದಲ್ಲೂ ಈ ಒಳಸೂಕ್ಷ್ಮವನ್ನು ಅರ್ಥಮಾಡಿಕೊಳ್ಳುವಷ್ಟು ಬುದ್ಧಿ ಬಲಿಯದಿದ್ದರೇ ನಾವು/ನೀವು ಕನ್ನಡಿಗರು ಜನ್ಮೇಪಿ ಉದ್ಧಾರ ಆಗಲ್ಲ. ಇದು ಸತ್ಯ ಸತ್ಯ ಸತ್ಯ. ಎಂದು ಕರಣಂ ಪವನ್ ಪ್ರಸಾದ್‌ ಎಂಬುವರು ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ಟ್ವೀಟರ್‌ನಲ್ಲಿ ಸಾಕಷ್ಟು ಜನರು ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ. ಕೆಲವು ಆಯ್ದ ಪೋಸ್ಟ್‌ಗಳುಇಂತಿವೆ.

**

*

***

***

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT