ಜ್ಯೋತಿರ್ಲಿಂಗ ಅಭಿಷೇಕಕ್ಕೆ ಅವಕಾಶ

ಭಾನುವಾರ, ಮಾರ್ಚ್ 24, 2019
32 °C

ಜ್ಯೋತಿರ್ಲಿಂಗ ಅಭಿಷೇಕಕ್ಕೆ ಅವಕಾಶ

Published:
Updated:
Prajavani

ಮಹಾಶಿವರಾತ್ರಿ ಪ್ರಯುಕ್ತ ಉತ್ತರಹಳ್ಳಿ ರಸ್ತೆಯ ಶ್ರೀನಿವಾಸಪುರದ ಓಂಕಾರೇಶ್ವರ ಜ್ಯೋತಿರ್ಲಿಂಗ ದೇವಸ್ಥಾನದಲ್ಲಿ ಗರ್ಭಗುಡಿ ಪ್ರವೇಶಿಸಿ ದರ್ಶನ ಪಡೆಯಲು ಮತ್ತು ಜಲಾಭಿಷೇಕ ಮಾಡಲು ಭಕ್ತಾರಿಗೆ ಮುಕ್ತ ಅವಕಾಶ ನೀಡಲಾಗಿದೆ.

ಮಾ. 4ರಂದು (ಸೋಮವಾರ) ಬೆಳಿಗ್ಗೆ 6 ರಿಂದ ಮಂಗಳವಾರ ಬೆಳಿಗ್ಗೆ 6 ಗಂಟೆಯವರೆಗೆ ದೇವರ ದರ್ಶನ ಮತ್ತು ಅಭಿಷೇಕಕ್ಕೆ ಅವಕಾಶ ಇದೆ.

ಓಂಕಾರೇಶ್ವರ ಜ್ಯೋತಿರ್ಲಿಂಗ ರಥೋತ್ಸವ ಬೆಳಿಗ್ಗೆ 11 ಗಂಟೆಗೆ ಹಾಗೂ ರಾತ್ರಿ 7ಕ್ಕೆ ಪಲ್ಲಕ್ಕಿ ಉತ್ಸವ ಹಮ್ಮಿಕೊಂಡಿದ್ದು ಸಂಜೆ 4 ರಿಂದ ರಾತ್ರಿ 11ರವರೆಗೂ ಭಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಓಂಕಾರ ಆಶ್ರಮದ ಮದುಸೂಧನಾನಂದಪುರಿ ಸ್ವಾಮೀಜಿ ರುದ್ರಾಭಿಷೇಕ, ಗಂಗಾಜಲಾಭಿಷೇಕ, ಕ್ಷೀರಾಭಿಷೇಕ, ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ನೆರವೇರಿಸುವರು.

ಮೈಲಸಂದ್ರ ಮುನಿರಾಜು ಮಾತನಾಡಿ, ದ್ವಾದಶ ಜ್ಯೋತಿರ್ಲಿಂಗಗಳನ್ನು ನೋಡಲು ಭಾರತದಾದ್ಯಂತ ಪ್ರವಾಸ ಮಾಡಬೇಕಾಗಿಲ್ಲ. ಇದೊಂದೇ ದೇವಸ್ಥಾನದಲ್ಲಿ ಎಲ್ಲಾ ದ್ವಾದಶ ಜ್ಯೋತಿರ್ಲಿಂಗಗಳನ್ನು ದರ್ಶನ ಪಡೆದು ಭಕ್ತರು ಪುನೀತರಾಗಬಹುದು. ಜ್ಯೋತಿರ್ಲಿಂಗ ದರ್ಶನಕ್ಕೆ ಬರುವ ಭಕ್ತರು ಮಜ್ಜಿಗೆ, ಪಾನಕ, ಪ್ರಸಾದ ವಿನಿಯೋಗವನ್ನು ಓಂಕಾರ್ ಆಶ್ರಮದ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಭಕ್ತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಅಗತ್ಯ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !