‘ಟಿಕೆಟ್‌ ಸಿಕ್ಕವರಿಗೆ ಸಾಥ್‌’

ಮಂಗಳವಾರ, ಮಾರ್ಚ್ 26, 2019
27 °C
ಚಿಕ್ಕಮಗಳೂರು– ಉಡುಪಿ ಲೋಕಸಭಾ ಕ್ಷೇತ್ರ

‘ಟಿಕೆಟ್‌ ಸಿಕ್ಕವರಿಗೆ ಸಾಥ್‌’

Published:
Updated:
Prajavani

ಚಿಕ್ಕಮಗಳೂರು: ‘ಉಡುಪಿ– ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಜಯಪ್ರಕಾಶ್‌ ಹೆಗ್ಡೆ ಅವರಿಗೆ ಟಿಕೆಟ್‌ ಸಿಕ್ಕರೆ ಅವರ ಪರವಾಗಿ ಕೆಲಸ ಮಾಡುತ್ತೇನೆ. ನನಗೆ ಸಿಕ್ಕಿದರೆ ಅವರು ನನ್ನ ಪರವಾಗಿ ಪ್ರಚಾರ ಮಾಡುತ್ತಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಸಂಸದೆ ಶೋಭಾ ಕರಂದ್ಲಾಜೆ ಇಲ್ಲಿ ಸೋಮವಾರ ಪ್ರತಿಕ್ರಿಯಿಸಿದರು.

‘ಪಕ್ಷ ಯಾರಿಗೇ ಟಿಕೆಟ್‌ ನೀಡಿದರೂ ಅವರ ಪರವಾಗಿ ಕೆಲಸ ಮಾಡುತ್ತೇವೆ. ನಗರದಲ್ಲಿ ಪಕ್ಷದ ಕೆಲ ಮುಖಂಡರೊಂದಿಗೆ ಈಚೆಗೆ ಸಭೆ ನಡೆಸಿದವರೂ ನಮ್ಮ ನಾಯಕರು (ಜಯಪ್ರಕಾಶ್‌ ಹೆಗ್ಡೆ). ಅವರು ಸಭೆ ನಡೆಸಿದ್ದರಲ್ಲಿ ತಪ್ಪೇನಿಲ್ಲ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. 

‘ಕ್ಷೇತ್ರದಲ್ಲಿ ಸಂಚರಿಸುವಂತೆ ಪಕ್ಷದ ಸಂಸದರೆಲ್ಲರಿಗೂ ವರಿಷ್ಠರು ಸೂಚಿಸಿದ್ದಾರೆ. ಅದರಂತೆ ಕಾರ್ಯೋನ್ಮುಖರಾಗಿದ್ದೇವೆ. ಗೆಲ್ಲುವಂಥ ಎಲ್ಲ ಕ್ಷೇತ್ರಗಳಲ್ಲಿಯೂ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಟಿಕೆಟ್‌ ಸಿಗದವರನ್ನು ಪಕ್ಷದ ನಾಯಕರು ಸಮಾಧಾನ ಮಾಡುತ್ತಾರೆ’ ಎಂದರು.

‘ಟಿಕೆಟ್‌ ಆಕಾಂಕ್ಷಿಯೊಬ್ಬರ ಕೆಲ ಹಿಂಬಾಲಕರು ಸಾಮಾಜಿಕ ಮಾಧ್ಯಮಗಳಲ್ಲಿ ‘ಗೋ ಬ್ಯಾಕ್‌ ಶೋಭಕ್ಕ’ ಪೋಸ್ಟ್‌ ಹರಿಯಬಿಟ್ಟಿದ್ದಾರೆ. ಟಿಕೆಟ್‌ ಅಪೇಕ್ಷಿಸುವುದರಲ್ಲಿ ತಪ್ಪಿಲ್ಲ. ಆದರೆ, ಟಿಕೆಟ್‌ ಕೇಳುವ ಭರದಲ್ಲಿ ಗುಂಪೊಂದರ ಮೂಲಕ ನನ್ನ ವಿರುದ್ಧವಾಗಿ ಮಾತನಾಡಿಸುವುದು ತಪ್ಪು ಎಂಬುದನ್ನು ವರಿಷ್ಠರಿಗೆ ತಿಳಿಸಿದ್ದೇನೆ’ ಎಂದು ಜಯಪ್ರಕಾಶ್‌ ಹೆಗ್ಡೆ ಅವರ ಹೆಸರು ಪ್ರಸ್ತಾಪಿಸದೆ ಪರೋಕ್ಷವಾಗಿ ಶೋಭಾ ಕುಟುಕಿದರು.

ಬರಹ ಇಷ್ಟವಾಯಿತೆ?

 • 4

  Happy
 • 3

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !