ಏನ್ರೀ ಜನಾರ್ದನ ರೆಡ್ಡಿ ಅವರೇ...’ ವಿಡಿಯೊ ಡಬ್‌ ಆಯ್ತು ಸಿದ್ದರಾಮಯ್ಯ ಮಾತು

7

ಏನ್ರೀ ಜನಾರ್ದನ ರೆಡ್ಡಿ ಅವರೇ...’ ವಿಡಿಯೊ ಡಬ್‌ ಆಯ್ತು ಸಿದ್ದರಾಮಯ್ಯ ಮಾತು

Published:
Updated:

ಬೆಂಗಳೂರು: ಗಡಸು ಧ್ವನಿ, ನೇರ–ನಿಷ್ಠುರ ಮಾತುಗಳಿಂದಲೇ ಹೆಸರುವಾಸಿಯಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಭಾಷಣ ಮಾಡಿದ ಕಡೆಯಲ್ಲೆಲ್ಲ ಶಿಳ್ಳೆ, ಚಪ್ಪಾಳೆ ಸಾಮಾನ್ಯ. 

ಇದೆನಪ್ಪ ಇದ್ದಕ್ಕಿದ್ದ ಹಾಗೆ ಸಿದ್ದರಾಮಯ್ಯ ಅವರ ಭಾಷಣದ ಬಗ್ಗೆ ಮಾತನಾಡುತ್ತಿದ್ದಾರೆ ಅಂದುಕೊಳ್ಳುತ್ತೀದ್ದೀರಾ? ಹೌದು, ಸಾಕಷ್ಟು ಜನಪ್ರಿಯತೆಗಳಿಸಿರುವ ಸಿದ್ದರಾಮಯ್ಯ ಅವರ ಭಾಷಣದ ತುಣುಕುಗಳು ಈಗ ವಿಡಿಯೊ ಡಬ್‌ಗಾಗಿ (ಈ ರೀತಿ ಡಬ್‌ ಆಗುವ ವಿಡಿಯೊಗಳು ಜನರ ಬಾಯಲ್ಲಿ ಡಬ್‌ಸ್ಮ್ಯಾಷ್‌ ಎಂದೇ ಕರೆಸಿಕೊಳ್ಳುತ್ತವೆ) ರೂಪಿಸಿರುವ ಆ್ಯಪ್‌ ಟಿಕ್‌ಟಾಕ್‌ನಲ್ಲಿ ಸದ್ದು ಮಾಡುತ್ತಿವೆ. 

ಹೀಗೆ ಡಬ್‌ಸ್ಮ್ಯಾಶ್ ಮಾಡುವುದಕ್ಕೆ ಸಿನಿಮಾ ಕಲಾವಿದರ ಸಂಭಾಷಣೆಗಳನ್ನೇ ಜನ  ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಅಲ್ಲಿ ರಾಜಕಾರಣಿಯ ದನಿ ಕೇಳುವುದು ವಿರಳ. ಮುಖ್ಯಮಂತ್ರಿ ಕುಮಾರಸ್ವಾಮಿ, ಯಡಿಯೂರಪ್ಪ.. ಹೀಗೆ ಕೆಲ ರಾಜಕಾರಣಿಗಳ ಮಾತುಗಳು ಟ್ರೋಲ್‌ ಆಗಿವೆ ಬಿಟ್ಟರೆ, ಡಬ್‌ ವಿಡಿಯೊ ಆಗಿರುವುದು ಕಡಿಮೆ. ‌

ಹೀಗಿರುವಾಗ ಸಿದ್ದರಾಮಯ್ಯ ಅವರ ಮಾತುಗಳು ಟಿಕ್‌ಟಾಕ್‌ನಲ್ಲಿ ಕಾಣಿಸಿಕೊಂಡಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಬೇರೆ ರಾಜಕಾರಣಿಗಳ ಭಾಷಣಕ್ಕಿಂತ ಇವರದ್ದು ಭಿನ್ನವಾಗಿರುವುದರಿಂದಲೇ ಅವರ ಭಾಷಣಗಳು ಜನರ ಮೆಚ್ಚುಗೆ ಪಡೆಯುತ್ತವೆ ಎನ್ನುವುದು ಅಭಿಮಾನಿಗಳ ಮಾತು.

ಜನಾರ್ದನ ರೆಡ್ಡಿ ಸಿಸಿಬಿ ಪೊಲೀಸರಿಂದ ತೆಲೆಮರೆಸಿಕೊಂಡಿದ್ದಾಗ ಅವರ ಬಗ್ಗೆ ಸಿದ್ದರಾಮಯ್ಯ ಆಡಿರುವ ಮಾತುಗಳು ಡಬ್‌ಸ್ಮ್ಯಾಶ್ಗೆ ಆಹಾರವಾಗಿತ್ತು. ‘ಏನ್ರಿ ಜನಾರ್ದನ ರೆಡ್ಡಿ ಅವರೇ.... ನನಗೆ ಸವಾಲ್‌ ಹಾಕಿದ್ರಿ ತಾಕತ್‌ ಇದ್ರೆ ಬಳ್ಳಾರಿ ಬನ್ರಿ... ನೀ ತಾಕತ್‌ ಇದ್ರ ಬಾ ನೋಡಣ ಈಗ ಬಳ್ಳಾರಿಗೆ’ ಎಂಬ ಮಾತುಗಳಿಗೆ ಸಾಕಷ್ಟು ಮಂದಿ ಡಬ್‌ಸ್ಮ್ಯಾಶ್ ಮಾಡಿದ್ದಾರೆ.

ಇದರ ಜೊತೆಗೆ ಹೆಚ್ಚು ಟ್ರೋಲ್ ಆಗಿದ್ದ, ‘ಸಾಲ ಮನ್ನಾ ಎಲ್ಲಿ ಆಗಿದೇರೀ?’ ಅ..? ‘ಸಾಲ ಮನ್ನಾ ಎಲ್ಲಿ ಆಗಿದೇರೀ?’ ಅಯ್ಯೊ ಕೊಡ್ತಾರೆ ಕೂತ್ಕೊ. ನಾನ್ ಹೇಳಿದಿನಿ ಬಜೆಟ್‌ನಲ್ಲಿ ಕೂತ್ಕೊ ಕೊಡ್ತಾರೆ’ ಎಂಬ ಭಾಷಣ ತುಣುಕಿಗೂ ಹಲವರು ಅಭಿನಯಿಸಿದ್ದಾರೆ

ಎರಡು ಪ್ಯಾಕೆಟ್ ಕುಡಿತಿದ್ದವನೂ ಈಗ ರಡು ಕ್ವಾಟ್ರು ಕುಡಿಬೇಕು. ಎಷ್ಟ್‌ ಆಯ್ತು ಈಗ? ₹150 ಮೇಲಾಯ್ತು..’ ಇದೇ ರೀತಿ ವಿವಿಧ ಸಂದರ್ಭಗಳಲ್ಲಿ ಸಿದ್ದರಾಮಯ್ಯ ಅವರು ಮಾಡಿರುವ ಭಾಷಣಗಳ ತುಣುಕುಗಳು ಟಿಕ್‌ಟಾಕ್‌ನಲ್ಲಿ ಕಾಣಸಿಗುತ್ತವೆ.

ಸಿದ್ದರಾಮಯ್ಯ ಅವರ ಅಭಿಮಾನಿ ಎಂದು ಹೇಳಿಕೊಳ್ಳುವ ಮಹೇಶ್‌ ಎಂಬುವವರು ಕೆಲವು ವಿಡಿಯೊಗಳನ್ನು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಶೇರ್‌ ಮಾಡಿದ್ದು, ‘ಯಾವ ರಾಜಕಾರಣಿಯ ಮಾತುಗಳನ್ನೂ ಜನ ಹೀಗೆ ಡಬ್‌ ಮಾಡಿಲ್ಲ’ ಎಂದು ಬರೆದುಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 47

  Happy
 • 1

  Amused
 • 4

  Sad
 • 2

  Frustrated
 • 9

  Angry

Comments:

0 comments

Write the first review for this !