ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ ಹೇಳಿಕೆಗೆ ಕುಮಾರಸ್ವಾಮಿ, ಸಿದ್ದರಾಮಯ್ಯ ಖಂಡನೆ

ಸಾಮಾಜಿಕ ಜಾಲತಾಣದಲ್ಲಿಯೂ ಚರ್ಚೆ
Last Updated 28 ಫೆಬ್ರುವರಿ 2019, 18:34 IST
ಅಕ್ಷರ ಗಾತ್ರ

ಬೆಂಗಳೂರು: ‘ಉಗ್ರರ ನೆಲೆಗಳ ಮೇಲೆ ವಾಯುಪಡೆ ನಡೆಸಿದ ದಾಳಿಯಿಂದ ಬಿಜೆಪಿಗೆ ಲಾಭವಾಗಲಿದೆ’ ಎನ್ನುವ ಯಡಿಯೂರಪ್ಪ ಅವರ ಹೇಳಿಕೆಯನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಖಂಡಿಸಿದ್ದಾರೆ.ಯಡಿಯೂರಪ್ಪ ಹೇಳಿಕೆಯನ್ನು ಪಾಕ್ಪ್ರಧಾನಿ ಇಮ್ರಾನ್‌ ಖಾನ್ ನೇತೃತ್ವದ ರಾಜಕೀಯ ಪಕ್ಷ ತೆಹ್ರೀಕ್–ಎ–ಇನ್ಸಾಫ್ (ಪಿಟಿಐ) ಗುರುವಾರ ಟ್ವೀಟ್ ಮಾಡಿವ್ಯಂಗ್ಯವಾಡಿತ್ತು.

ಯಡಿಯೂರಪ್ಪ ಅವರ ರಾಜಕೀಯ ಲಾಭದಹೇಳಿಕೆಯನ್ನು ಖಂಡಿಸಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ‘ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿಕೇಂದ್ರ ಸರ್ಕಾರ ಮತ್ತು ಸಶಸ್ತ್ರಪಡೆಗಳನ್ನು ಇಡೀ ದೇಶ ಒಗ್ಗೂಡಿ ಬೆಂಬಲಿಸುತ್ತಿದೆ. ಆದರೆ ಬಿಜೆಪಿ ನಾಯಕ ಯಡಿಯೂರಪ್ಪ ಮಾತ್ರ ವಾಯುದಾಳಿ ಮತ್ತು ಯುದ್ಧದಿಂದ ತಮ್ಮ ಪಕ್ಷಎಷ್ಟು ಸ್ಥಾನ ಗೆಲ್ಲಲು ಸಹಾಯ ಮಾಡಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದಾರೆ. ನಮ್ಮ ಯೋಧರ ತ್ಯಾಗ–ಬಲಿದಾನವನ್ನು ಚುನಾವಣಾ ಲಾಭಕ್ಕೆ ಬಳಸಿಕೊಳ್ಳುವುದು ನಾಚಿಕೆಗೇಡಿನ ವಿಚಾರ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಡಿಯೂರಪ್ಪ ಹೇಳಿಕೆಯನ್ನು ಖಂಡಿಸಿರುವ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ‘ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರಯೋಧರ ಸಾವಿನಲ್ಲಿ ರಾಜಕೀಯ ಲಾಭ ಕಾಣುತ್ತಿರುವ ಯಡಿಯೂರಪ್ಪಅವರ ಹೇಳಿಕೆ ಅಧಿಕಾರದಲ್ಲಿರುವ ಬಿಜೆಪಿಯ ಉದ್ದೇಶದ ಬಗ್ಗೆ ಸಂಶಯ ಹುಟ್ಟುವಂತೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿಇದಕ್ಕೆ ಸ್ಪಷ್ಟೀಕರಣ‌ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.

‘ಹುತಾತ್ಮರಾದ ವೀರಯೋಧರ ಶವಗಳನ್ನು ಮುಂದಿಟ್ಟುಕೊಂಡು ಚುನಾವಣಾ ಲಾಭದ ಕನಸು ಕಾಣುತ್ತಿರುವ ಯಡಿಯೂರಪ್ಪ ಅವರ ರಾಜಕೀಯ ದುರಾಸೆಯ ಹೇಳಿಕೆಯನ್ನು ಖಂಡಿಸುತ್ತೇನೆ. ಮಡಿದ ಸೈನಿಕರ ಕುಟುಂಬದವರ ಕಣ್ಣೀರು ಇನ್ನೂ ನಿಂತಿಲ್ಲ, ಆಗಲೇ ಸೀಟುಗಳ ಲೆಕ್ಕಾಚಾರ’ ಎಂದು ಟ್ವಿಟರ್‌ನಲ್ಲಿ ಬೇಸರ ತೋಡಿಕೊಂಡಿದ್ದಾರೆ.

ಯಡಿಯೂರಪ್ಪ ಹೇಳಿಕೆ, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.ಕೆಲವರು ಯಡಿಯೂರಪ್ಪ ಅವರನ್ನು ಕುಟುಕಿದ್ದರೆ, ಇನ್ನು ಕೆಲವರು ಸಹಮತ ವ್ಯಕ್ತಪಡಿಸಿದ್ದಾರೆ.

**

ಜೈಲೂರಪ್ಪ ಪಾಕಿಸ್ತಾನ ಮೇಲೆ ದಾಳಿ ಮಾಡಿದ್ದು, ಭಾರತೀಯ ವಾಯುಸೇನೆ ನಿಮ್ಮ ಬ್ಲೂಜೆಪಿಯ ಅಂಧಭಕ್ತರಲ್ಲ. ಸೇನೆಯ ಯಶಸ್ಸನ್ನು ನಿಮ್ಮ ಪಕ್ಷದ ಪ್ರಚಾರಕ್ಕೆ ಬಳಸಿಕೊಳ್ಳುವ ನೀವು ಎಂಥವರು ಎಂಬುದು ಗೊತ್ತಾಯಿತು.

- ಅಶ್ವಿನ್‌ ಗೌಡ

ಯೋ ಇಮ್ರಾನ್‌ ಖಾನ್‌, ನಮ್ಮ ಯಡ್ಡಿ ಬಗ್ಗೆ ಹಂಗೆಲ್ಲ ವ್ಯಂಗ್ಯ ಮಾಡಬೇಡ. ತಲೆ ಕೆಟ್ರೆ ಅಲ್ಲಿಗೆ ಬಂದು, ಅಪರೇಷನ್‌ ಕಮಲ ಮಾಡಿ, ನಿನ್ನ ಇಳ್ಸಿ, ನಮ್‌ ಯಡ್ಡಿನೇ ಪಿ.ಎಂ. ಆಗ್ತಾರೆ.. ಬೀ ಕೇರ್‌ಫುಲ್‌.

- ರಂಗಸ್ವಾಮಿ

ಚುನಾವಣೆಗಾಗಿ ನಮ್ಮ ಯೋಧರನ್ನ ಬಲಿ ತಗೊಂಡ್ರಾ, ಸತ್ಯ ಹೊರಬೀಳಲೇಬೇಕು. ಈಗ ಯಡಿಯೂರಪ್ಪ ಬಾಯಿಂದ ಬರ್ತಿದೆ.

- ಸಿದ್ದು ಅಮರಗೊಳ

ನೀವೊಬ್ಬ ಉತ್ತಮ ನಾಯಕ. ಆದರೆ, ನಿಮ್ಮ ಹೇಳಿಕೆ ಖಂಡಿತವಾಗಿಯೂ ತಪ್ಪು.

- ನಿಖಿಲ್‌

ಮೋದಿಜಿ ಹೆಸರು ಹಾಳ್ ಮಾಡೋಕೆ ನಿಮ್ಮಂಥವರು ಇದ್ರೆ ಸಾಕು. ನೀವ್ ಹಿಂಗ್ ಮಾತಾಡಿದರೆ 5 ಸ್ಥಾನನೂ ಗೆಲ್ಲೋದಿಲ್ಲ. ಇಂತಹ ಸಮಯದಲ್ಲಿ ರಾಜಕೀಯ ಅವಶ್ಯಕತೆ ಇತ್ತ?

- ಸೂಗನಗೌಡ

ನೀವು ಉತ್ತಮ ನಾಯಕ. ಆದರೆ ಇತ್ತೀಚಿಗೆ ನಿಮ್ಮ ಅಸಂಬದ್ಧ ಮಾತು ನಿಮ್ಮನ್ನು ಖಳನಾಯಕನಾಗಿ ಮಾಡ್ತಿದೆ.

-ಗಗನಾ ಆಚಾರ್‌

ಎಂಥ ಸತ್ಯವಾದ ಮಾತು ಒಪ್ಪಿಕೊಂಡ್ರಿ ಗ್ರೇಟ್, ಸೈನಿಕರ ಸಾವು ನಿಮಗೆ ರಾಜಕೀಯ ಲಾಭ ಪಡೆಯುವ ವಿಷಯ
ವಾಯಿತಲ್ಲ.

- ಸನಾ ಸನಿ

ಇನ್ನಷ್ಟು ಓದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT