ರಾಧಾಕೃಷ್ಣನ್‌ ಜಯಂತಿ ಸಲ್ಲ

7

ರಾಧಾಕೃಷ್ಣನ್‌ ಜಯಂತಿ ಸಲ್ಲ

Published:
Updated:

ಗದಗ: ‘ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುವ ಬದಲು ದೇಶದ ಮೊದಲ ಶಿಕ್ಷಕಿ ಸಾವಿತ್ರಿ ಬಾ ಫುಲೆ ಹೆಸರಿನಲ್ಲಿ ಶಿಕ್ಷಕರ ದಿನಾಚರಣೆ ನಡೆಯಬೇಕು’ ಎಂದು ಗದಗಿನ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.

ಬುಧವಾರ ಇಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರಾಧಾಕೃಷ್ಣನ್‌ ಅವರು ಬ್ರಾಹ್ಮಣರಾಗಿದ್ದರು. ಹೀಗಾಗಿ ಪ್ರಾಧಾನ್ಯತೆ ನೀಡಲಾಗಿದೆ. ಅವರ ಜಯಂತಿ ಆಚರಣೆಯನ್ನು ಸರ್ಕಾರ ಕೈಬಿಡ
ಬೇಕು’ ಎಂದು ಆಗ್ರಹಿಸಿದರು.

‘ಹಿಂದೆ, ಫುಲೆ ಅವರನ್ನು ಅವಮಾನಿಸಿದ್ದ ಮನುವಾದಿಗಳ ಸಮುದಾಯಕ್ಕೆ ಸೇರಿದವರೇ ಈಗ ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಆಗಿದ್ದಾರೆ. ಅಲ್ಲಿನ ವಿಶ್ವವಿದ್ಯಾಲಯವೊಂದಕ್ಕೆ ಮುಖ್ಯಮಂತ್ರಿ  ಫಡಣವೀಸ್ ಅವರು ಸಾವಿತ್ರಿ ಬಾ ಫುಲೆ ಹೆಸರು ನಾಮಕರಣ ಮಾಡಿದ್ದು ಈಗ ಇತಿಹಾಸ. ಕೇಂದ್ರ ಸರ್ಕಾರ ಸಾವಿತ್ರಿ ಬಾ ಫುಲೆ ಹಾಗೂ ಜ್ಯೋತಿ ಬಾ ಫುಲೆ ಅವರಿಗೆ ಭಾರತ ರತ್ನ ನೀಡುವ ಮೂಲಕ ತನಗೆ ಅಂಟಿದ ಕಳಂಕ ತೊಳೆದುಕೊಳ್ಳಬೇಕು’ ಎಂದು ಸ್ವಾಮೀಜಿ ಹೇಳಿದರು.

‘ಎಲ್ಲ ಧರ್ಮಗ್ರಂಥಗಳಿಗಿಂತ ಶ್ರೇಷ್ಠ ಗ್ರಂಥ ಸಂವಿಧಾನ. ಆದರೆ, ಮತಾಂಧರು ದೆಹಲಿಯಲ್ಲಿ ಈ ಸಂವಿಧಾನವನ್ನೇ ಸುಟ್ಟು ಹಾಕಿದರು. ಅವರನ್ನು ಇನ್ನೂ ಬಂಧಿಸಿಲ್ಲ’ ಎಂದರು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !