ನಾಗರಹೊಳೆಯಲ್ಲಿ ಹೆಬ್ಬಾವಿಗೆ ಬೆದರಿದ ಹುಲಿರಾಯ!

7

ನಾಗರಹೊಳೆಯಲ್ಲಿ ಹೆಬ್ಬಾವಿಗೆ ಬೆದರಿದ ಹುಲಿರಾಯ!

Published:
Updated:

ಮೈಸೂರು: ವ್ಯಾಘ್ರನ ಸದ್ದು ಕೇಳಿದರೆ ಇತರ ಪ್ರಾಣಿಗಳು ಜಾಗ ಖಾಲಿ ಮಾಡುತ್ತವೆ. ಆದರೆ, ತನ್ನ ಹಾದಿಯಲ್ಲಿ ಎದುರಾದ ಹೆಬ್ಬಾವು ಕಂಡ ಹುಲಿರಾಯ ಬೆದರಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯ ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಸಫಾರಿಗೆ ತೆರಳಿದವರು ಈ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ರಸ್ತೆಯಲ್ಲಿ ಮಲಗಿದ್ದ ಹೆಬ್ಬಾವು ನೋಡಿದ ಹುಲಿ ಸ್ವಲ್ಪ ಹೊತ್ತು ಕೀಟಲೆ ಮಾಡುತ್ತದೆ. ಪದೇಪದೇ ದಿಟ್ಟಿಸಿ ನೋಡುತ್ತಾ ಅತ್ತಿಂದಿತ್ತ ತಿರುಗಾಡುತ್ತದೆ. ಹೆಬ್ಬಾವನ್ನು ದಾಟಿ ಮುಂದೆ ಹೋಗಲು ಆ ವ್ಯಾಘ್ರ ಪ್ರಯತ್ನಿಸುತ್ತದೆ. ಹೆಬ್ಬಾವು ತಲೆ ಅಲುಗಾಡಿಸಿದಾಗ ಬೆದರಿ ಹಿಂದೆ ಸರಿಯುತ್ತದೆ. ಸ್ವಲ್ಪ ಹೊತ್ತು ಹೀಗೆ ಮಾಡಿ ಇದರ ಸಹವಾಸವೇ ಬೇಡವೆಂದು ಬೇರೆ ಹಾದಿ ಹಿಡಿಯುತ್ತದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !