ಇಂದು ಸೋದೆ ಮಠದ ವಶಕ್ಕೆ ಶಿರೂರು ಮಠ

7

ಇಂದು ಸೋದೆ ಮಠದ ವಶಕ್ಕೆ ಶಿರೂರು ಮಠ

Published:
Updated:
Deccan Herald

ಉಡುಪಿ: ಶ್ರೀಕೃಷ್ಣಮಠದ ರಥಬೀದಿಯಲ್ಲಿರುವ ಶಿರೂರು ಮಠವನ್ನು ಆ.13ರಂದು ದ್ವಂದ್ವಮಠವಾದ ಸೋದೆ ಮಠಕ್ಕೆ ಬಿಟ್ಟುಕೊಡಲಿದ್ದಾರೆ ಎಂದು ಮಠದ ದಿವಾನ ಶ್ರೀನಿವಾಸ ತಂತ್ರಿ ತಿಳಿಸಿದ್ದಾರೆ.

ಶೀಘ್ರವೇ ಹಿರಿಯಡಕದಲ್ಲಿರುವ ಮೂಲಮಠವನ್ನು ಸೋದೆ ಮಠದ ಸುಪರ್ದಿಗೆ ಬರಲಿದ್ದು, ಹಸ್ತಾಂತರ ಪ್ರಕ್ರಿಯೆಗಳು ಮುಗಿದ ಬಳಿಕ ಶಿರೂರು ಶ್ರೀಗಳ ಆರಾಧನೆಯನ್ನು ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

‌ಈಚೆಗೆ ಆರೂರು ಶ್ರೀಗಳು ವನಮಹೋತ್ಸವ ತರಿಸಿದ್ದ ಗಿಡಗಳನ್ನು ವಿತರಣೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಶಿರೂರು ಶ್ರೀಗಳ ಸಾವಿನ ಬಳಿಕ ತನಿಖೆಯ ಉದ್ದೇಶದಿಂದ ಪೊಲೀಸರು ರಥಬೀದಿಯ ಶಿರೂರು ಮಠ ಹಾಗೂ ಹಿರಿಯಡಕದಲ್ಲಿರುವ ಮೂಲಮಠವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !