ಕೃಷಿ ಭೂಮಿಯಲ್ಲಿ 20 ಮರ ಬೆಳೆಸುವುದು ಕಡ್ಡಾಯ: ಕಾನೂನಿಗೆ ಚಿಂತನೆ

7

ಕೃಷಿ ಭೂಮಿಯಲ್ಲಿ 20 ಮರ ಬೆಳೆಸುವುದು ಕಡ್ಡಾಯ: ಕಾನೂನಿಗೆ ಚಿಂತನೆ

Published:
Updated:

ಬೆಂಗಳೂರು: ಒಂದು ಎಕರೆ ಕೃಷಿ ಭೂಮಿ ಇದ್ದರೆ ಅದರಲ್ಲಿ ಕನಿಷ್ಠ 20 ಮರಗಳನ್ನು ರೈತರು ಕಡ್ಡಾಯವಾಗಿ ಬೆಳೆಸಬೇಕು ಎಂಬ ಕಾನೂನು ಜಾರಿಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅರಣ್ಯ ಸಚಿವ ಆರ್‌.ಶಂಕರ್‌ ಈ ವಿಷಯ ತಿಳಿಸಿದರು.

ರಾಜ್ಯದಲ್ಲಿ ಹಸಿರೀಕರಣ ಮತ್ತು ಪರಿಸರ ಸಮತೋಲನ ಕಾಯ್ದುಕೊಳ್ಳಲು ಈ ಯೋಜನೆ ನೆರವಾಗಲಿದೆ. ಹೀಗೆ ಬೆಳೆಸುವ ಪ್ರತಿ ಮರಕ್ಕೆ ₹100 ಪ್ರೋತ್ಸಾಹ ಧನವನ್ನೂ ಸರ್ಕಾರ ನೀಡಲಿದೆ ಎಂದು ಅವರು ಹೇಳಿದರು.

ಕೃಷಿ ಭೂಮಿಯಲ್ಲಿ ಶ್ರೀಗಂಧ, ಬೇವು, ಹೆಬ್ಬೇವು ಸೇರಿದಂತೆ ಯಾವುದೇ ಬಗೆಯ ಮರಗಳನ್ನು ಬೆಳೆಸಬಹುದಾಗಿದೆ. ಒಂದು ಹೆಕ್ಟೇರ್‌ನಲ್ಲಿ 400 ಮರಗಳನ್ನು ಬೆಳೆಸಬಹುದು. ಇದರಿಂದ ರೈತರಿಗೆ ಆರ್ಥಿಕವಾಗಿಯೂ ಅನುಕೂಲವಾಗಲಿದೆ ಎಂದು ಅವರು ವಿವರಿಸಿದರು. 

ರಾಜ್ಯದಲ್ಲಿ ಮೀಸಲು ಮತ್ತು ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ರೆಸಾರ್ಟ್‌ ಸ್ಥಾಪನೆಗೆ ಅವಕಾಶ ನೀಡಿಲ್ಲ. ಅನುಮತಿ ಇಲ್ಲದೆ ರೆಸಾರ್ಟ್‌ ಸ್ಥಾಪಿಸಿದರೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದೂ ಎಚ್ಚರಿಕೆ ನೀಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !