ಪರಿಷತ್‌ಗೆ ನಾಮನಿರ್ದೇಶನ: ‘ಕೈ’ ಅಭ್ಯರ್ಥಿ ಹೆಸರು ಅಂತಿಮ

7

ಪರಿಷತ್‌ಗೆ ನಾಮನಿರ್ದೇಶನ: ‘ಕೈ’ ಅಭ್ಯರ್ಥಿ ಹೆಸರು ಅಂತಿಮ

Published:
Updated:
Deccan Herald

ಬೆಂಗಳೂರು: ವಿಧಾನಪರಿಷತ್‌ನ ಮೂರು ನಾಮನಿರ್ದೇಶಿತ ಸ್ಥಾನಗಳ ಪೈಕಿ, ಕಾಂಗ್ರೆಸ್‌ ಪಾಲಿನ ಎರಡು ಸ್ಥಾನಗಳಿಗೆ ಯು.ಬಿ. ವೆಂಕಟೇಶ್‌ ಮತ್ತು ಪ್ರಕಾಶ ರಾಥೋಡ್‌ ಹೆಸರು ಅಂತಿಮಗೊಂಡಿದೆ.

ಕಾಂಗ್ರೆಸ್‌ ಎರಡೂ ಹೆಸರುಗಳನ್ನು ಈಗಾಗಲೇ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಗೆ ನೀಡಿದೆ. ಜೆಡಿಎಸ್‌ಗೆ ಒಂದು ಸ್ಥಾನ ಸಿಗಲಿದೆ. ಆ ಹೆಸರು ಇನ್ನೂ ಅಂತಿಮಗೊಂಡಿಲ್ಲ. ಹೀಗಾಗಿ, ರಾಜ್ಯಪಾಲರ ಅಂಗೀಕಾರಕ್ಕೆ ಪಟ್ಟಿ ಕಳುಹಿಸಲು ವಿಳಂಬವಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ.

ಜೆಡಿಎಸ್‌ನಿಂದ ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ ಹೆಸರು ಮುಂಚೂಣಿಯಲ್ಲಿದೆ. ಅಲ್ಲದೆ, ಗಿರಿಜನ ಕಲ್ಯಾಣಕ್ಕೆ ಗಣನೀಯ ಸೇವೆ ಸಲ್ಲಿಸುತ್ತಿರುವ ಡಾ. ಎಚ್. ಸುದರ್ಶನ್ ಹೆಸರನ್ನೂ ಪಕ್ಷ ಪರಿಗಣಿಸುತ್ತಿದೆ.

‘ಮುಖ್ಯಮಂತ್ರಿ’ಗೆ ಕೈ ತಪ್ಪಿದ ಅವಕಾಶ: ನಾಮನಿರ್ದೇಶನಕ್ಕೆ ರಾಜ್ಯದಿಂದ ಕಳುಹಿಸಲಾಗಿದ್ದ ಕಾಂಗ್ರೆಸ್‌ ಪಟ್ಟಿಯಲ್ಲಿ ‘ಮುಖ್ಯಮಂತ್ರಿ’ ಚಂದ್ರು ಸೇರಿ ಒಟ್ಟು ಆರು ಆಕಾಂಕ್ಷಿಗಳ ಹೆಸರು ಇತ್ತು.

ಚಂದ್ರು ಅವರ ಪತ್ನಿ ಬಿಜೆಪಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಕಾರಣ ನೀಡಿ ಅವರನ್ನು ಪಟ್ಟಿಯಿಂದ ಕೈಬಿಡುವಂತೆ ರಾಹುಲ್‌ ಗಾಂಧಿ ಮೇಲೆ ರಾಜ್ಯದ ಹಿರಿಯ ನಾಯಕರೊಬ್ಬರು ಒತ್ತಡ ಹಾಕಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !