ಶುಕ್ರವಾರ, ಜುಲೈ 30, 2021
28 °C

ಕುವೈತ್ | ವಲಸೆ ಮಸೂದೆಗೆ ಅನುಮೋದನೆ: 8 ಲಕ್ಷ ಭಾರತೀಯರು ಹೊರಬೀಳುವ ಸಾಧ್ಯತೆ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಕುವೈತ್/ನವದೆಹಲಿ: ದೇಶದಲ್ಲಿರುವ ವಲಸಿಗರನ್ನು ಹೊರಹಾಕಲು ಅನುವು ಮಾಡಿಕೊಡುವ ಮಸೂದೆಗೆ ಕುವೈತ್‌ನ ಕಾನೂನು ಮತ್ತು ಶಾಸಕಾಂಗ ಸಮಿತಿಯು ಅನುಮೋದನೆ ನೀಡಿದೆ. ಇದರಿಂದಾಗಿ ಸುಮಾರು 8 ಲಕ್ಷ ಭಾರತೀಯರು ಆ ದೇಶದಿಂದ ಹೊರಬೀಳುವ ಸಾಧ್ಯತೆ ಇದೆ.

ಭಾರತೀಯರ ಪ್ರಮಾಣವು ದೇಶದ ಜನಸಂಖ್ಯೆ ಶೇ.15ಕ್ಕಿಂತ ಹೆಚ್ಚು ಇರಬಾರದು ಎಂದು ಹೇಳುವ ವಲಸೆ ಮಸೂದೆಯನ್ನು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಸಾಂವಿಧಾನಿಕವಾಗಿ ಅಂಗೀಕರಿಸಲು ನಿರ್ಧರಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಸದ್ಯದಲ್ಲೇ ಇದಕ್ಕೆ ಸಂಬಂಧಿಸಿದ ಸಮಗ್ರ ಯೋಜನೆ ರಚನೆಯಾಗಲಿದೆ ಎಂದೂ ಹೇಳಲಾಗಿದೆ.

ಕುವೈತ್‌ ಜನಸಂಖ್ಯೆ 43 ಲಕ್ಷವಾಗಿದ್ದು, ಇದರಲ್ಲಿ 30 ಲಕ್ಷ ವಲಸಿಗರಿದ್ದಾರೆ. 14.5 ಲಕ್ಷ ಭಾರತೀಯರು ಆ ದೇಶದಲ್ಲಿ ವಾಸವಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು