ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 World Update| ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 40 ಲಕ್ಷ ಸನಿಹಕ್ಕೆ

Last Updated 23 ಜುಲೈ 2020, 16:37 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಜಗತ್ತಿನ ಕೊರೊನಾ ವೈರಸ್‌ ಸೋಂಕಿತರ ಅಂಕಿ ಸಂಖ್ಯೆಗಳ ಮೇಲೆ ನಿಗಾ ಇಟ್ಟಿರುವ ಅಮೆರಿಕದ ಜಾನ್ಸ್‌ ಹಾಪ್‌ಕಿನ್ಸ್‌ ವಿಶ್ವವಿದ್ಯಾಲಯದ ಮಾಹಿತಿಯ ಪ್ರಕಾರ ಅಮೆರಿಕದ ಸೋಂಕಿತರ ಸಂಖ್ಯೆ ಗುರುವಾರ 40 ಲಕ್ಷ ಸನಿಹಕ್ಕೆ ಬಂದಿದೆ.

ಸದ್ಯ ಅಮೆರಿಕದಲ್ಲಿ 39,73,370 ಸೋಂಕಿತರಿದ್ದು, 1,43,446 ಮಂದಿ ಮೃತಪಟ್ಟಿದ್ದಾರೆ. ಬ್ರೆಜಿಲ್‌ನಲ್ಲಿ ಸೋಂಕಿತರ ಸಂಖ್ಯೆ 22,27,514 ಆಗಿದ್ದು, 82,771 ಮಂದಿ ಮೃತಪಟ್ಟಿದ್ದಾರೆ. ನಂತರದ ಸ್ಥಾನದಲ್ಲಿ ಭಾರತ ಇದ್ದು 12,38,798 ಸೋಂಕಿತರಾಗಿದ್ದಾರೆ. 29,861 ಮಂದಿ ಸಾವಿಗೀಡಿದ್ದಾರೆ.

ರಷ್ಯಾದಲ್ಲಿ 7,93,720 ಪ್ರಕರಣಗಳಿದೆ. ಕೊರೊನಾ ವೈರಸ್‌ನ ಹೊಸಾ ಹಾಟ್‌ಸ್ಪಾಟ್‌ ಎನಿಸಿಕೊಂಡಿರುವ ದಕ್ಷಿಣ ಆಫ್ರಿಕಾದಲ್ಲಿ ಸೋಂಕಿತರ ಸಂಖ್ಯೆ 4 ಲಕ್ಷ ಸನಿಹಕ್ಕೆ ಬಂದಿದೆ. ಅಲ್ಲಿ 3,94,948 ಸೋಂಕಿತರಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ 5,940 ಮಂದಿ ಸಾವಿಗೀಡಾಗಿದ್ದಾರೆ.

ಕೊರೊನಾ ವೈರಸ್‌ನ ಮೂಲ ಎನಿಸಿಕೊಂಡಿರುವ ಚೀನಾದಲ್ಲಿ ಮಾತ್ರ ಇಂದು ಕೇವಲ 18 ಹೊಸ ಕೊರೊನಾ ವೈರಸ್‌ ಸೊಂಕು ಪ್ರಕರಣಗಳು ಪತ್ತೆಯಾಗಿವೆ. ನೆರೆಯ ಪಾಕಿಸ್ತಾನದಲ್ಲಿ ಗುರುವಾರ 1763 ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 269,191 ಗೆ ಏರಿದೆ. ಪಾಕಿಸ್ತಾನದ ಒಟ್ಟಾರೆ ಸಾವಿನ ಸಂಖ್ಯೆ 5,709.

ಕೆಲವೇ ದೇಶಗಳಲ್ಲಿ ತೀವ್ರ ಪ್ರಸರಣೆ

‘ಜಗತ್ತಿನ ಕೆಲವೇ ಕೆಲವು ರಾಷ್ಟ್ರಗಳಲ್ಲಿ ಮಾತ್ರ ಕೊರೊನಾ ವೈರಸ್‌ ಅತಿ ವೇಗವಾಗಿ ಪ್ರಸರಣೆಗೊಳ್ಳುತ್ತಿದೆ. ಜಗತ್ತಿನಲ್ಲಿ ಈ ವರೆಗೆ ವರದಿಯಾದ ಎಲ್ಲಾ ಪ್ರಕರಣಗಳ ಪೈಕಿ ಅರ್ಧದಷ್ಟು ಕೇವಲ ಮೂರು ದೇಶಗಳಿಂದ ಬಂದವಾಗಿವೆ,’ ಎಂದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಟೆಡ್ರೊಸ್ ಅದಾನೊಮ್ ಗೆಬ್ರೆಯೆಸಸ್ ಗುರುವಾರ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT