ಗುರುವಾರ , ಜುಲೈ 29, 2021
21 °C

ಕೊರೊನಾ ಬಿಕ್ಕಟ್ಟುನಿಧಿ ಸ್ಥಾಪನೆಗೆ ನೆರವು ಐರೋಪ್ಯ ರಾಷ್ಟ್ರಗಳಿಗೆ ಮನವಿ

ಎಪಿ Updated:

ಅಕ್ಷರ ಗಾತ್ರ : | |

Prajavani

ಬ್ರುಸೆಲ್ಸ್‌: ‘ಐರೋಪ್ಯ ಒಕ್ಕೂಟದ ರಾಷ್ಟ್ರಗಳು ಭಿನ್ನಾಭಿಪ್ರಾಯಗಳನ್ನು ಮರೆತು, ಕೋವಿಡ್‌ ಪರಿಣಾಮಗಳನ್ನು ಎದುರಿಸಲು 2.85 ಲಕ್ಷ ಕೋಟಿ ಯೂರೊ (2.1 ಲಕ್ಷ ಕೋಟಿ ಡಾಲರ್‌) ನಿಧಿ ಸ್ಥಾಪಿಸಲು ಮುಂದಾಗಬೇಕು’ ಎಂದು ಒಕ್ಕೂಟದ ಮಂಡಳಿ ಅಧ್ಯಕ್ಷ ಚಾರ್ಲ್ಸ್‌ ಮೈಕೆಲ್‌ ಅವರು ಸದಸ್ಯ ರಾಷ್ಟ್ರಗಳಲ್ಲಿ ಭಾನುವಾರ ಮನವಿ ಮಾಡಿದ್ದಾರೆ.

ಈ ವಿಚಾರವಾಗಿ ಒಕ್ಕೂಟ ರಾಷ್ಟ್ರಗಳ ನಾಯಕರನ್ನು ಒಗ್ಗೂಡಿಸಲು ಚಾರ್ಲ್ಸ್‌ ಅವರು ಹಲವು ದಿನಗಳಿಂದ ಶ್ರಮಿಸುತ್ತಿದ್ದಾರೆ. ಈವರೆಗಿನ ಸಭೆಗಳಲ್ಲಿ ಯಾವುದೇ ಸಕಾರಾತ್ಮಕ ಅಂಶಗಳು ಮೂಡಿಬರದ ಕಾರಣ ಭಾನುವಾರ ರಾತ್ರಿ ಅಂತಿಮವಾಗಿ ಈ ಮನವಿಯನ್ನು ಮಾಡಿದ್ದಾರೆ.

‘ಒಕ್ಕೂಟದಲ್ಲಿರುವ 27 ರಾಷ್ಟ್ರಗಳ ನಾಯಕರು ಒಗ್ಗಟ್ಟು ಪ್ರದರ್ಶಿಸಬೆಕಾಗಿದೆ. ಪರಸ್ಪರರ ಮೇಲಿನ ಅಪನಂಬಿಕೆಯಿಂದ ಒಕ್ಕೂಟವನ್ನು ದುರ್ಬಲಗೊಳಿಸಿದಂತಾಗುತ್ತದೆ. ನಿಧಿ  ಸ್ಥಾಪನೆಗೆ ಸದಸ್ಯ ರಾಷ್ಟ್ರಗಳು ಸಮ್ಮತಿಸಿದರೆ, ‘ಐರೋಪ್ಯ ಒಕ್ಕೂಟ ಅಸಾಧ್ಯವಾದುದನ್ನು ಸಾಧಿಸಿದೆ’ ಎಂದುಪತ್ರಿಕೆಗಳು ತಲೆಬರಹ ಬರೆಯುತ್ತವೆ’ ಎಂದು ಮೈಕೆಲ್‌ ಹೇಳಿದರು.

ನಿಧಿ ಸ್ಥಾಪನೆ ಕುರಿತು ಸೋಮವಾರ ನಸುಕಿನವರೆಗೆ ಸಭೆ ನಡೆದರೂ ನಿರ್ಧಾರಕ್ಕೆ ಬರಲು ನಾಯಕರಿಗೆ ಸಾಧ್ಯವಾಗಲಿಲ್ಲ. ಜರ್ಮನಿಯ ಚಾನ್ಸ್‌ಲರ್‌ ಏಂಜೆಲಾ ಮರ್ಕೆಲ್‌ ಹಾಗೂ ಫ್ರಾನ್ಸ್‌ ಅಧ್ಯಕ್ಷ ಎಮಾನ್ಯುಯಲ್‌ ಮ್ಯಾಕ್ರಾನ್‌ ಅವರಿಗೂ ಸಾಂಪ್ರದಾಯಿಕವಾಗಿ ಬಲಿಷ್ಠರೆನಿಸಿಕೊಂಡಿರುವ ಫ್ರಾಂಕೊ– ಜರ್ಮನ್‌ ಒಕ್ಕೂಟದ ಮನವೊಲಿಸಲು ಸಾಧ್ಯವಾಗಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು