ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

bribery case

ADVERTISEMENT

ಗ್ಯಾಸ್‌ ಪೈಪ್‌ಲೈನ್‌ ಯೋಜನೆಗಾಗಿ ಲಂಚ: ಬಂಧನ

ಗ್ಯಾಸ್‌ ಪೈಪ್‌ಲೈನ್‌ ಯೋಜನೆಗಳಲ್ಲಿ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲು ₹50 ಲಕ್ಷ ಲಂಚ ಪಡೆದ ಆರೋಪದಲ್ಲಿ ಭಾರತೀಯ ಅನಿಲ ಪ್ರಾಧಿಕಾರದ(ಜಿಎಐಎಲ್‌) ಕಾರ್ಯನಿರ್ವಾಹಕ ನಿರ್ದೇಶಕ (ಯೋಜನೆ) ಕೆ. ಬಿ. ಸಿಂಗ್ ಅವರನ್ನು ಸಿಬಿಐ ಬಂಧಿಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
Last Updated 5 ಸೆಪ್ಟೆಂಬರ್ 2023, 14:26 IST
ಗ್ಯಾಸ್‌ ಪೈಪ್‌ಲೈನ್‌ ಯೋಜನೆಗಾಗಿ ಲಂಚ: ಬಂಧನ

ಕಾಸರಗೋಡು: ಲಂಚ ಪಡೆಯುತ್ತಿದ್ದ ಗ್ರಾಮಾಧಿಕಾರಿ, ಸಹಾಯಕ ಬಂಧನ

ಲಂಚ ಪಡೆಯುತ್ತಿದ್ದ ಆರೋಪದಲ್ಲಿ ಚಿತ್ತಾರಿ ಗ್ರಾಮಾಧಿಕಾರಿ, ಕೊಡಕ್ಕಾಡ್ ವೆಳ್ಳಚ್ಚಾಲ್ ನಿವಾಸಿ ಸಿ.ಅರುಣ್ (40) ಮತ್ತು ಸಹಾಯಕ ಗ್ರಾಮಾಧಿಕಾರಿ, ಪಿಲಿಕೋಡ್ ವರಕ್ಕಾಡ್ ವಯಲ್ ನಿವಾಸಿ ಕೆ.ವಿ.ಸುಧಾಕರನ್ (52) ಎಂಬವರನ್ನು ಜಾಗೃತ ದಳ ಬಂಧಿಸಿದೆ.
Last Updated 25 ಆಗಸ್ಟ್ 2023, 12:35 IST
ಕಾಸರಗೋಡು: ಲಂಚ ಪಡೆಯುತ್ತಿದ್ದ ಗ್ರಾಮಾಧಿಕಾರಿ, ಸಹಾಯಕ ಬಂಧನ

BESCOM | ವಿದ್ಯುತ್ ಸಂಪರ್ಕಕ್ಕೆ ₹3.5 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದ ಎಇಇ ಬಂಧನ

ಕಟ್ಟಡವೊಂದಕ್ಕೆ 23 ಕಿಲೋವಾಟ್‌ ಸಾಮರ್ಥ್ಯದ ವಿದ್ಯುತ್‌ ಸಂಪರ್ಕಕ್ಕೆ ಮಂಜೂರಾತಿ ನೀಡಲು ₹ 3.5 ಲಕ್ಷ ಲಂಚ ಪಡೆಯುತ್ತಿದ್ದ ಬೆಸ್ಕಾಂ ಎಸ್‌–1 ಜಯನಗರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಧನಂಜಯ ವಿ. ಅವರನ್ನು ಲೋಕಾಯುಕ್ತ ಪೊಲೀಸರು ಬುಧವಾರ ಸಂಜೆ ಬಂಧಿಸಿದ್ದಾರೆ.
Last Updated 16 ಆಗಸ್ಟ್ 2023, 13:53 IST
BESCOM | ವಿದ್ಯುತ್ ಸಂಪರ್ಕಕ್ಕೆ ₹3.5 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದ ಎಇಇ ಬಂಧನ

ಆಸ್ಪತ್ರೆಗೆ ಬರುವ ರೋಗಿಗಳಿಂದಲೇ ಲಂಚ ಪಡೆದ ಆರೋಪ: ವೈದ್ಯಾಧಿಕಾರಿ ಅಮಾನತು

ಆಸ್ಪತ್ರೆಗೆ ಬರುವ ರೋಗಿಗಳಿಂದ ಲಂಚ ಪಡೆದ ಆರೋಪದ ಮೇಲೆ ಇಲ್ಲಿನ ಶಾಂತಿನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಕೆ.ಪಿ. ಕೋಮಲಾ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
Last Updated 4 ಜುಲೈ 2023, 9:16 IST
ಆಸ್ಪತ್ರೆಗೆ ಬರುವ ರೋಗಿಗಳಿಂದಲೇ ಲಂಚ ಪಡೆದ ಆರೋಪ: ವೈದ್ಯಾಧಿಕಾರಿ ಅಮಾನತು

ನಾಗಮಂಗಲ | ಗ್ರಾಮ ಲೆಕ್ಕಿಗನ ಮೇಲೆ ಲಂಚದ ಆರೋಪ

ಗ್ರಾಮ ಲೆಕ್ಕಿಗನು ಜಮೀನನ್ನು ಖಾತೆ ಮಾಡಿಕೊಡಲು ಸುಮಾರು 66 ಸಾವಿರ ಲಂಚವನ್ನು ಫೋನ್ ಪೇ ಮತ್ತು ನಗದು ರೂಪದಲ್ಲಿ ಹಲವು ಕಂತುಗಳಲ್ಲಿ ಪಡೆದಿದ್ದಾನೆ ಎಂದು ಮಹಿಳೆಯೊಬ್ಬರು ಆರೋಪ ಮಾಡಿದ್ದಾರೆ.
Last Updated 1 ಜುಲೈ 2023, 15:57 IST
fallback

ಹರಿಯಾಣ | ಗುತ್ತಿಗೆ ಮಂಜೂರಿಗೆ ಲಂಚ ಕೇಳಿದ ಪ್ರಕರಣ: ಐಎಎಸ್ ಅಧಿಕಾರಿ ಬಂಧನ

ಭ್ರಷ್ಟಚಾರ ಪ್ರಕರಣ ಸಂಬಂಧ ಐಎಎಸ್ ಅಧಿಕಾರಿಯೊಬ್ಬರನ್ನು ಗುರುಗ್ರಾಮದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 16 ಮೇ 2023, 7:50 IST
ಹರಿಯಾಣ | ಗುತ್ತಿಗೆ ಮಂಜೂರಿಗೆ ಲಂಚ ಕೇಳಿದ ಪ್ರಕರಣ: ಐಎಎಸ್ ಅಧಿಕಾರಿ ಬಂಧನ

ಡ್ರಗ್ಸ್‌ ಪ್ರಕರಣ | ಶಾರುಖ್‌ ಖಾನ್‌ ಬಳಿ ₹25 ಕೋಟಿ ಲಂಚಕ್ಕೆ ಬೇಡಿಕೆ

ಆರ್ಯನ್‌ ಖಾನ್‌ನನ್ನು ಡ್ರಗ್ಸ್‌ ಪ್ರಕರಣದಿಂದ ಬಿಡುಗಡೆಗೊಳಿಸಲು ಆತನ ತಂದೆ, ಬಾಲಿವುಡ್ ನಟ ಶಾರುಖ್‌ ಖಾನ್‌ ಬಳಿ ₹25 ಕೋಟಿ ಲಂಚಕ್ಕೆ ಬೇಡಿಕೆ ಇಡಲಾಗಿತ್ತು. ಹಣ ಕೊಡದಿದ್ದರೆ ಆರ್ಯನ್‌ನನ್ನು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಸಲಾಗಿತ್ತು ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
Last Updated 15 ಮೇ 2023, 15:52 IST
ಡ್ರಗ್ಸ್‌ ಪ್ರಕರಣ | ಶಾರುಖ್‌ ಖಾನ್‌ ಬಳಿ ₹25 ಕೋಟಿ ಲಂಚಕ್ಕೆ ಬೇಡಿಕೆ
ADVERTISEMENT

ಲಂಚ ಪ್ರಕರಣ: ಆರೋಗ್ಯ ಸಚಿವಾಲಯದ ಅಧೀನ ಕಾರ್ಯದರ್ಶಿ ಸೆರೆ

ವಿದೇಶದಲ್ಲಿ ಉನ್ನತ ವೈದ್ಯಕೀಯ ವ್ಯಾಸಂಗಕ್ಕೆ ಅಗತ್ಯವಿರುವ ಅನುಮತಿ ಪತ್ರ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧೀನ ಕಾರ್ಯದರ್ಶಿ ಸೋನು ಕುಮಾರ್‌ ಅವರನ್ನು ಸಿಬಿಐ ಶನಿವಾರ ಬಂಧಿಸಿದೆ.
Last Updated 6 ಮೇ 2023, 13:48 IST
ಲಂಚ ಪ್ರಕರಣ: ಆರೋಗ್ಯ ಸಚಿವಾಲಯದ ಅಧೀನ ಕಾರ್ಯದರ್ಶಿ ಸೆರೆ

ಲಂಚ: ಇಬ್ಬರು ಐ.ಟಿ ಅಧಿಕಾರಿಗಳಿಗೆ ನಾಲ್ಕು ವರ್ಷಗಳ ಜೈಲು

ತೆರಿಗೆಗೆ ಸಂಬಂಧಿಸಿದ ಪ್ರಕರಣವೊಂದನ್ನು ಕೈಬಿಡಲು ವ್ಯಕ್ತಿಯೊಬ್ಬರಿಂದ ₹ 2.5 ಲಕ್ಷ ಲಂಚ ಪಡೆದಿದ್ದ ಪ್ರಕರಣದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಾದ ಅಭಿಷೇಕ್‌ ತ್ರಿಪಾಠಿ ಮತ್ತು ಅಲೋಕ್‌ ತಿವಾರಿ ಎಂಬುವವರಿಗೆ ಧಾರವಾಡದ ಸಿಬಿಐ ವಿಶೇಷ ನ್ಯಾಯಾಲಯ ತಲಾ ನಾಲ್ಕು ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ತಲಾ ₹ 1.10 ಲಕ್ಷ ದಂಡ ವಿಧಿಸಿದೆ.
Last Updated 31 ಮಾರ್ಚ್ 2023, 19:30 IST
ಲಂಚ: ಇಬ್ಬರು ಐ.ಟಿ ಅಧಿಕಾರಿಗಳಿಗೆ ನಾಲ್ಕು ವರ್ಷಗಳ ಜೈಲು

ಭ್ರಷ್ಟಾಚಾರ: ಸಫ್ದರ್‌ಜಂಗ್‌ ಆಸ್ಪತ್ರೆಯ ನರರೋಗ ತಜ್ಞ ಬಂಧನ

ಲಂಚ ಮತ್ತು ಭ್ರಷ್ಟಾಚಾರ ಆರೋಪದಡಿ ಕೇಂದ್ರ ತನಿಖಾ ದಳದ ಅಧಿಕಾರಿಗಳು (ಸಿಬಿಐ) ಸಫ್ದರ್‌ಜಂಗ್‌ ಆಸ್ಪತ್ರೆಯ ನರರೋಗ ತಜ್ಞ ಮನೀಶ್‌ ರಾವತ್‌ ಸೇರಿ ನಾಲ್ವರನ್ನು ಬಂಧಿಸಿದ್ದಾರೆ. ಇವರು ರೋಗಿಗಳನ್ನು ನಿರ್ದಿಷ್ಟ ಕಂಪನಿಗಳ ಹೆಚ್ಚಿನ ಬೆಲೆಯ ಶಸ್ತ್ರಚಿಕಿತ್ಸಾ ಉಪಕರಣಗಳನ್ನು ಖರೀದಿಸುವಂತೆ ಒತ್ತಾಯಿಸುತ್ತಿದ್ದರು ಎನ್ನಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
Last Updated 30 ಮಾರ್ಚ್ 2023, 14:04 IST
ಭ್ರಷ್ಟಾಚಾರ: ಸಫ್ದರ್‌ಜಂಗ್‌ ಆಸ್ಪತ್ರೆಯ ನರರೋಗ ತಜ್ಞ ಬಂಧನ
ADVERTISEMENT
ADVERTISEMENT
ADVERTISEMENT