ಶಿವಮೊಗ್ಗ: ಕಚೇರಿಗೆ ಬಾಡಿಗೆ ಬಿಟ್ಡಿದ್ದ ವಾಹನದ ಬಾಡಿಗೆ ಹಣ ನೀಡಲು ₹40,000 ಲಂಚ ಪಡೆಯುವಾಗ ಇಲ್ಲಿನ ರಾಷ್ಟ್ರೀಯ ಹೆದ್ದಾರಿ -206 ರ ವಿಶೇಷ ಭೂಸ್ವಾಧೀನಾಧಿಕಾರಿಯೂ ಆದ ಹಿರಿಯ ಕೆಎಎಸ್ ಅಧಿಕಾರಿ ಸಿದ್ಧಲಿಂಗ ರೆಡ್ಡಿ ಹಾಗೂ ಮಧ್ಯವರ್ತಿ, ಹೊಳಲೂರು ಗ್ರಾಮ ಪಂಚಾಯ್ತಿ ಗ್ರಾಮ ಸಹಾಯಕ ರಾಜೇಶ್ ಶನಿವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಶಿವಮೊಗ್ಗದ ಹೆಚ್ಚುವರಿ ಜಿಲ್ಲಾಧಿಕಾರಿ ಆಗಿದ್ದ ಸಿದ್ಧಲಿಂಗ ರೆಡ್ಡಿ ಈಚೆಗಷ್ಟೇ ರಾಷ್ಟ್ರೀಯ ಹೆದ್ದಾರಿ ವಿಭಾಗದ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದರು.

ಪ್ರಕರಣದ ವಿವರ: ತಾಲ್ಲೂಕಿನ ಓತಿಘಟ್ಟ ಗ್ರಾಮದ ಚಾಲಕ ವಿ.ಕೇಶವಮೂರ್ತಿ ತಮ್ಮ ಮಾರುತಿ ಎರ್ಟಿಗಾ ಕಾರನ್ನು ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನಾಧಿಕಾರಿ ಕಚೇರಿಗೆ ಕಳೆದ ಎರಡು ವರ್ಷಗಳಿಂದ ಬಾಡಿಗೆಗೆ ಬಿಟ್ಟಿದ್ದರು. ಪ್ರತೀ ತಿಂಗಳು ಬಾಡಿಗೆ ಹಣವನ್ನು ಚೆಕ್ ಮೂಲಕ ಪಡೆಯುತ್ತಿದ್ದರು. ಕೇಶವಮೂರ್ತಿ ಅವರಿಗೆ ಕಳೆದ ನವೆಂಬರ್ ತಿಂಗಳಿಂದ ಬಾಡಿಗೆ ಬಾಕಿ ಉಳಿಸಿಕೊಂಡಿದ್ದು, ಅದನ್ನು ಪಾವತಿಸಲು ಸಿದ್ಧಲಿಂಗರಡ್ಡಿ ₹40,000 ಲಂಚ ನೀಡಲು ರಾಜೇಶ್ ಮೂಲಕ ಬೇಡಿಕೆ ಇಟ್ಡಿದ್ದರು. ಹೀಗಾಗಿ ಕೇಶವಮೂರ್ತಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು ಎಂದು ತಿಳಿದುಬಂದಿದೆ.

ಶಿವಮೊಗ್ಗದ ನೆಹರೂ ಕ್ರೀಡಾಂಗಣದ ಬಳಿ ರಾಜೇಶ್ ಸಂಜೆ ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಡಿವೈಎಸ್ಪಿ ಬಿ.ಪಿ.ಚಂದ್ರಶೇಖರ ನೇತೃತ್ವದ ತಂಡ ದಾಳಿ ನಡೆಸಿದೆ. ನಂತರ ಸಿದ್ಧಲಿಂಗರೆಡ್ಡಿ ಹಾಗೂ ರಾಜೇಶ್ ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಂಧಿಸಿದ್ದಾರೆ. ಬಂಧನದ ನಂತರದ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದರು.

ಲೋಕಾಯುಕ್ತ ಎಸ್ಪಿ ಎಂ.ಎಸ್.ಕೌಲಾಪುರೆ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಶಿವಮೊಗ್ಗ ಲೋಕಾಯುಕ್ತ ಠಾಣೆ ಇನ್ಸ್ಪೆಕ್ಟರ್ಗಳಾದ ಕೆ.ಪಿ.ರುದ್ರೇಶ್, ಗುರುರಾಜ್ ಮೈಲಾರ್, ವೀರಬಸಪ್ಪ ಎಲ್.ಕುಸಲಾಪುರ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ಉತ್ತರ ಕರ್ನಾಟಕದವರ ದಿರಿಸಿನಲ್ಲಿ ಲೋಕಾಯುಕ್ತ ಪೊಲೀಸರು..

ಲಂಚದ ಹಣ ಪಡೆಯಲು ರಾಜೇಶ್ ದೂರುದಾರ ಕೇಶವಮೂರ್ತಿ ಅವರನ್ನು ನೆಹರೂ ಕ್ರೀಡಾಂಗಣ ಬಳಿಯ ಹೋಟೆಲ್ಗೆ ಕರೆಸಿದ್ದನು. ಅಲ್ಲಿ ಕಾಫಿ ಕುಡಿದು ಹಣ ಸ್ವೀಕರಿಸಿದ್ದನು. ಈ ಬಗ್ಗೆ ಮೊದಲೇ ಮಾಹಿತಿ ಇದ್ದ ಲೋಕಾಯುಕ್ತ ಪೊಲೀಸರ ತಂಡ ಹೋಟೆಲ್ನಲ್ಲಿಯೇ ಗಿರಾಕಿಗಳ ರೀತಿ ಕುಳಿತು ಎಲ್ಲವನ್ನೂ ಗಮನಿಸಿತ್ತು. ವಿಶೇಷವೆಂದರೆ ಉತ್ತರ ಕರ್ನಾಟಕ ಭಾಗದವರು ಹಾಕುವಂತೆ ತಲೆಗೆ ಗಾಂಧಿ ಟೊಪ್ಪಿ ಜುಬ್ಬಾ ಪೈಜಾಮ ಹಾಕಿಕೊಂಡು ಕುಳಿತು ಎಲ್ಲವನ್ನೂ ಗಮನಿಸುತ್ತಿದ್ದರು. ಹಣ ಪಡೆದದ್ದು ಖಚಿತವಾಗುತ್ತಿದ್ದಂತೆಯೇ ರಾಜೇಶ್ನನ್ನು ವಶಕ್ಕೆ ಪಡೆದು ಪ್ರಕ್ರಿಯೆಗಳ ಕೈಗೊಂಡರು. ಇದೆಲ್ಲದಕ್ಕೂ ಸ್ಟೇಡಿಯಂ ಪರಿಸರದಲ್ಲಿ ಸಂಜೆ ವಾಯುವಿಹಾರ ಮಾಡುತ್ತಿದ್ದವರು ಸಾಕ್ಷಿಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.