ಬರಿದಾದ ‘ಅಂಚೆ ಪೆಟ್ಟಿಗೆ’ ಇನ್ನು ನೆನಪು ಮಾತ್ರ
ಒಂದು ಕಾಲಕ್ಕೆ ಜನರು ‘ನಮ್ಮ ಬೀದಿಯಲ್ಲೂ ಒಂದು ಅಂಚೆ ಪೆಟ್ಟಿಗೆ ಬೇಕು’ ಎಂದು ಬೇಡಿಕೆ ಇಡುತ್ತಿದ್ದರು. ಅಂಚೆ ಕಚೇರಿ ಬೇಕೆಂದು ಮನವಿ ಸಲ್ಲಿಸುತ್ತಿದ್ದರು. ಆದರೆ ಬದಲಾದ ಕಾಲಘಟ್ಟದಲ್ಲಿ ಇಡೀ ಇಲಾಖೆಯೇ ಜನರ ಮನಸ್ಸಿನಿಂದ, ಅಗತ್ಯದಿಂದ ದೂರ ಸರಿಯುತ್ತಿದೆ. ಇದಕ್ಕೆ ನಿದರ್ಶನವೆಂಬಂತೆ ಪ್ರಾಚೀನ ಕಾಲದ ಪಳೆಯುಳಿಕೆಯಂತೆ ಮಳೆ, ಗಾಳಿಗೆ ಮೈಯೊಡ್ಡಿ ನಡು ಬೀದಿಯಲ್ಲಿ ನಿಂತಿರುವ ಅಂಚೆ ಪೆಟ್ಟಿಗೆಯೇ ಸಾಕ್ಷಿ.Last Updated 20 ನವೆಂಬರ್ 2019, 17:09 IST