ಮರಳಿದ ಫೇಸ್‌ಬುಕ್, ವಾಟ್ಸ್‌ಆ್ಯಪ್ ಸೇವೆ: ಟ್ವಿಟರ್‌ನಲ್ಲಿ ಮುಗಿಯದ ಟ್ರೆಂಡ್!
ವಾಷಿಂಗ್ಟನ್: ನಿತ್ಯದ ಬಹುತೇಕ ಸಂವಹನಗಳಿಗೆ ಮೆಸೇಜಿಂಗ್ ಅಪ್ಲಿಕೇಷನ್‌ಗಳ ಮೊರೆ ಹೋಗಿರುವವರು ಸೋಮವಾರ ಸಂಜೆಯಿಂದ ಫೇಸ್‌ಬುಕ್ ಸಮೂಹದ ಆ್ಯಪ್‌ಗಳಿಗೆ 'ಶಾಪ' ಹಾಕಿದ್ದಾರೆ! ಟ್ವಿಟರ್‌ಗೆ ಬಂದ ಬಳಕೆದಾರರು ಫೇಸ್‌ಬುಕ್ ಮೆಸೆಂಜರ್, ವಾಟ್ಸ್‌ಆ್ಯಪ್ ಹಾಗೂ ಇನ್‌ಸ್ಟಾಗ್ರಾಮ್ ಆ್ಯಪ್‌ಗಳ ಬಳಕೆಯಲ್ಲಿ ವ್ಯತ್ಯಯ ಎದುರಾಗಿರುವುದನ್ನು ಹೇಳಿಕೊಂಡರು. ಕೆಲವರು ಸಿಟ್ಟಿಗೆದ್ದು ಫೇಸ್‌ಬುಕ್ ಅಳಿಸಿ ಹಾಕುವಂತೆ ಟ್ರೆಂಡ್ ಸೃಷ್ಟಿಸಿದರು, ಇನ್ನೂ ಕೆಲವರು ಮೀಮ್ಸ್ ಹರಿಬಿಟ್ಟರು...ಈ ನಡುವೆ 'ವ್ಯತ್ಯಯ ಸರಿಪಡಿಸಲಾಗಿದೆ, ಅಡಚಣೆಗೆ ವಿಷಾದಿಸುತ್ತೇವೆ' ಎಂದು ಫೇಸ್‌ಬುಕ್ ಪ್ರಕಟಿಸಿದೆ.Last Updated 5 ಅಕ್ಟೋಬರ್ 2021, 2:11 IST