ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Twitter vs Threads: ತಾಲಿಬಾನ್ ಬೆಂಬಲ ಯಾರಿಗೆ?

Published 11 ಜುಲೈ 2023, 6:01 IST
Last Updated 11 ಜುಲೈ 2023, 6:01 IST
ಅಕ್ಷರ ಗಾತ್ರ

ನವದೆಹಲಿ: ಎಲಾನ್‌ ಮಸ್ಕ್ ಒಡೆತನದ ಟ್ವಿಟರ್‌ಗೆ ಬೆಂಬಲ ಸೂಚಿಸಿರುವ ತಾಲಿಬಾನ್, ಯಾವುದೇ ಆ್ಯಪ್‌ ಟ್ವಿಟರ್‌ಗೆ ಪರ್ಯಾಯವಾಗಿ ನಿಲ್ಲಲಾರದು ಎಂದು ಹೇಳಿದೆ.

ಮೈಕ್ರೊಬ್ಲಾಗಿಂಗ್ ವೇದಿಕೆ ಟ್ವಿಟರ್‌ಗೆ ಪರ್ಯಾಯ ಎಂಬಂತೆ ಮೆಟಾ ಪ್ಲಾಟ್‌ಫಾರ್ಮ್ಸ್‌ ಕಳೆದವಾರ ಆರಂಭಿಸಿರುವ 'ಥ್ರೆಡ್ಸ್‌' ವೇದಿಕೆಯು ಬಿಡುಗಡೆಯಾದ ಐದೇ ದಿನಗಳಲ್ಲಿ 10 ಕೋಟಿಗೂ ಹೆಚ್ಚು ಬಳಕೆದಾರರನ್ನು ಸಂಪಾದಿಸಿದೆ.

ಅದರ ನಡುವೆಯೂ ತಾಲಿಬಾನ್‌ ನಾಯಕ ಅನಸ್‌ ಹಕ್ಕಾನಿ, ಟ್ವಿಟರ್‌ ಅನ್ನು ಅಧಿಕೃತವಾಗಿ ಸಮರ್ಥಿಸಿಕೊಂಡಿದ್ದಾರೆ.

'ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಹೋಲಿಸಿದರೆ ಟ್ವಿಟರ್‌ ಎರಡು ಮುಖ್ಯ ಅನುಕೂಲಗಳನ್ನು ಹೊಂದಿದೆ. ಮೊದಲನೇಯದ್ದು, ಅಭಿವ್ಯಕ್ತಿ ಸ್ವಾತಂತ್ರ್ಯ. ಎರಡನೇಯದ್ದು, ಸ್ವಾಭಾವಿಕತೆ ಮತ್ತು ವಿಶ್ವಾಸಾರ್ಹತೆ. ಟ್ವಿಟರ್‌, ಮೆಟಾ ಕಂಪನಿಯಂತೆ ಯಾವುದೇ ಅಸಹಿಷ್ಣು ನೀತಿಯನ್ನು ಹೊಂದಿಲ್ಲ. ಬೇರೆ ಯಾವ ವೇದಿಕೆಯೂ ಟ್ವಿಟರ್‌ಗೆ ಪರ್ಯಾಯ ಆಗಲಾರದು' ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಟ್ವಿಟರ್‌ನ ಸಕ್ರಿಯ ಬಳಕೆದಾರರ ಸಂಖ್ಯೆಯು 20 ಕೋಟಿ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT