‘ಪ್ರೀತಿಸುವ ಮುನ್ನ’ ಕುಂದಾಪ್ರ ಕನ್ನಡದ ಕಿರುಚಿತ್ರ ಚೆನ್ನ
ಸಂತೆಯಲ್ಲಿ ವ್ಯಾಪಾರಿಯೊಬ್ಬನ ಮಾತಿನೊಂದಿಗೆ ತೆರೆದುಕೊಳ್ಳುವ ಈ ಕಿರುಚಿತ್ರ ತನ್ನ ನಿರೂಪಣಾ ಶೈಲಿಯಿಂದ ಗಮನ ಸೆಳೆಯುತ್ತದೆ. ವೀಕ್ಷಕರಿಗೆ ನೇರವಾಗಿ ಕತೆ ಹೇಳಲು ಆರಂಭಿಸುವ ವ್ಯಾಪಾರಿ ಈಗಿನ ಕಾಲದ ಹುಡುಗರ ಪ್ರೀತಿ ಪ್ರೇಮ ತರಲೆ ಕಿತಾಪತಿಯ ಸುದ್ದಿ ಹೇಳುತ್ತಾ ತಾನು ಹೆಣ ನೋಡಲು ಹೋದದ್ದನ್ನು ತೆರೆದಿಡುತ್ತಾನೆ. ಅಲ್ಲಿ ಸಾವಿನ ಕಾರಣವನ್ನು ಯುವಕರ ಹತ್ತಿರ ವಿಚಾರಿಸಿದಾಗ ಕತೆ ಫ್ಲ್ಯಾಶ್ ಬ್ಯಾಕ್ ಗೆ ಹೊರಳುತ್ತದೆ.Last Updated 1 ಜುಲೈ 2018, 10:03 IST