ಪೌಲ್ ಅಕ್ರಮ ಆಸ್ತಿಗೂ, ನನಗೂ ಸಂಬಂಧವಿಲ್ಲ: ಉದ್ಯಮಿ ಹುಸ್ಕೂರು ಆನಂದ್
‘ಪಿಎಸ್ಐ ನೇಮಕಾತಿ ಹಗರಣದಲ್ಲಿ ಬಂಧಿತರಾಗಿರುವ ಎಡಿಜಿಪಿ ಅಮ್ರಿತ್ ಪೌಲ್ ತಾಲ್ಲೂಕಿನಲ್ಲಿ ಖರೀದಿಸಿರುವ ಜಮೀನಿಗೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ತಮಗೆ ನೋಟಿಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಡೆದ ತನಿಖೆ ವೇಳೆ ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ. ಪೌಲ್ ಅಕ್ರಮ ಆಸ್ತಿಗೂ, ತಮಗೂ ಯಾವುದೇ ಸಂಬಂಧವಿಲ್ಲ. ಈ ವಿಚಾರದಲ್ಲಿ ವಿನಾಕಾರಣ ನನ್ನ ಹೆಸರನ್ನು ಸಿಲುಕಿಸಲಾಗುತ್ತಿದೆ’ ಎಂದು ರಿಯಲ್ ಎಸ್ಟೇಟ್ ಉದ್ಯಮಿ ಹುಸ್ಕೂರು ಆನಂದ್ ಹೇಳಿದರು.Last Updated 6 ಆಗಸ್ಟ್ 2022, 19:34 IST