ರುಮೇಶ್ ರತ್ನಾಯಕೆ ಲಂಕಾ ಕೋಚ್
ಕೊಲಂಬೊ: ಸ್ವದೇಶದಲ್ಲಿ ನ್ಯೂಜಿಲೆಂಡ್ ಎದುರು ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಆಡುವ ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ಹಂಗಾಮಿ ಕೋಚ್ ಆಗಿ ಮಾಜಿ ಟೆಸ್ಟ್ ವೇಗದ ಬೌಲರ್ ರುಮೇಶ್ ರತ್ನಾಯಕೆ ಅವರನ್ನು ನೇಮಕ ಮಾಡಲಾಗಿದೆ ಎಂದು ಶ್ರೀಲಂಕಾ ಕ್ರಿಕೆಟ್ ಬುಧವಾರ ತಿಳಿಸಿದೆ.
ಮುಖ್ಯಕೋಚ್ ಆಗಿರುವ ಚಂಡಿಕ ಹತುರಸಿಂಘೆ ಅವರನ್ನು ಪದಚ್ಯುತಿ ಮಾಡಲಾಗಿದೆಯೇ ಎಂಬ ಬಗ್ಗೆ ಸ್ಪಷ್ಟಪಡಿಸಲು ಅದು ನಿರಾಕರಿಸಿದೆ. ಶ್ರೀಲಂಕಾ ವಿಶ್ವಕಪ್ನಲ್ಲಿ ನೀರಸ ಪ್ರದರ್ಶನ ನೀಡಿದ ನಂತರ ಅವರ ತಲೆದಂಡವಾಗಬಹುದೆಂಬ ನಿರೀಕ್ಷೆ ಹಬ್ಬಿದೆ.Last Updated 8 ಆಗಸ್ಟ್ 2019, 20:00 IST