ಸೂಪರ್ಮ್ಯಾನ್ ಹೀರೊ ಆದ ಕಥೆ
ಕಾಮಿಕ್ ಪುಸ್ತಕಗಳಲ್ಲಿ ಬರುವ ಸೂಪರ್ ಹೀರೊಗಳ ಪೈಕಿ ಅತ್ಯಂತ ಹೆಚ್ಚು ಜನಪ್ರಿಯ ವ್ಯಕ್ತಿ ಸೂಪರ್ಮ್ಯಾನ್ ಎಂಬುದರಲ್ಲಿ ಅನುಮಾನವೇ ಇಲ್ಲ. ಸೂಪರ್ಮ್ಯಾನ್ ಪಾತ್ರ ಜನಪ್ರಿಯವಾದ ನಂತರ ಅಮೆರಿಕದಲ್ಲಿ ಕಾಮಿಕ್ ಪುಸ್ತಕಗಳಿಗೆ ಸುವರ್ಣ ಯುಗ ಆರಂಭವಾಯಿತು. ಕೆನಡಾದ ಕಲಾವಿದ ಜೋ ಶಸ್ಟರ್ ಮತ್ತು ಅಮೆರಿಕದ ಬರಹಗಾರ ಜೆರ್ರಿ ಸೀಗಲ್ ಈ ಪಾತ್ರದ ಸೃಷ್ಟಿಕರ್ತರು. ಈ ಪಾತ್ರ ಮೊದಲು ಕಾಮಿಕ್ ಪುಸ್ತಕಗಳಲ್ಲಿ ಬಂದಿದ್ದು 1938ರಲ್ಲಿ.Last Updated 17 ಆಗಸ್ಟ್ 2019, 19:30 IST