PHOTOS: ಗಣರಾಜ್ಯೋತ್ಸವ ಪರೇಡ್ ರಿಹರ್ಸ್ಲ್ನಲ್ಲಿ ಗಮನಸೆಳೆದ ಕರ್ನಾಟಕದ ಸ್ತಬ್ಧ ಚಿತ್ರ
ಈ ಬಾರಿ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲಿರುವ ಕರ್ನಾಟಕದ ಸ್ತಬ್ಧ ಚಿತ್ರದರಿಹರ್ಸಲ್ಜನವರಿ23 ರಂದು ನವದೆಹಲಿಯಲ್ಲಿ ನಡೆಯಿತು.‘ಕರ್ನಾಟಕಸಾಂಪ್ರದಾಯಿಕ ಕರಕುಶಲವಸ್ತುಗಳ ತೊಟ್ಟಿಲು’ಶೀರ್ಷಿಕೆಯಡಿ ಈ ಸ್ತಬ್ಧಚಿತ್ರ ಗಣರಾಜ್ಯೋತ್ಸವ ಪರೇಡ್ನಲ್ಲಿ ಪಾಲ್ಗೊಳ್ಳಲಿದೆ.ಇನ್ನೊಂದೆಡೆ ಗಣರಾಜ್ಯೋತ್ಸವ ಪರೇಡ್ನಲ್ಲಿ ಕೇರಳ, ಪಶ್ಚಿಮ ಬಂಗಾಳ ಹಾಗೂ ತಮಿಳುನಾಡು ರಾಜ್ಯಗಳ ಸ್ತಬ್ಧಚಿತ್ರಗಳನ್ನು ಸೇರಿಸದಿರಲು ಕೈಗೊಂಡಿರುವ ನಿರ್ಧಾರದ ಮರುಪರಿಶೀಲನೆ ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಗಳು ಮಂಗಳವಾರ ಸ್ಪಷ್ಟಪಡಿಸಿದ್ದಾರೆ.ಗಣರಾಜ್ಯೋತ್ಸವ ದಿನ ನಡೆಯುವ ಪರೇಡ್ನಲ್ಲಿಸ್ತಬ್ಧಚಿತ್ರಗಳ ಪ್ರದರ್ಶನಕ್ಕಾಗಿ 12 ರಾಜ್ಯಗಳನ್ನು ಮಾತ್ರ ಆಯ್ಕೆ ಮಾಡಲಾಗಿದೆ ಎಂದೂ ಅಧಿಕಾರಿಗಳು ಹೇಳಿದ್ದಾರೆ.ತಮ್ಮ ರಾಜ್ಯಗಳ ಸ್ತಬ್ಧಚಿತ್ರಗಳಿಗೆ ಅವಕಾಶ ನೀಡದಿರುವ ಕುರಿತು ಈ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಆಕ್ಷೇಪಿಸಿರುವುದು ಹಾಗೂ ಈ ವಿಷಯ ಕುರಿತು ಸೃಷ್ಟಿಯಾಗಿರುವ ವಿವಾದದ ಹಿನ್ನೆಲೆಯಲ್ಲಿ ಸಚಿವಾಲಯದ ಅಧಿಕಾರಿಗಳಿಂದ ಈ ಸ್ಪಷ್ಟನೆ ಹೊರಬಿದ್ದಿದೆ.Last Updated 23 ಜನವರಿ 2022, 11:47 IST