ನನಗೂ ಲೈಂಗಿಕ ಕಿರುಕುಳ ನೀಡಿದ್ದರು: ಕಂಗನಾ ಆರೋಪ

7

ನನಗೂ ಲೈಂಗಿಕ ಕಿರುಕುಳ ನೀಡಿದ್ದರು: ಕಂಗನಾ ಆರೋಪ

Published:
Updated:

ನವದೆಹಲಿ: ‘ಕ್ವೀನ್‌’ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದ ನಟಿ ಕಂಗನಾ ರನೌತ್‌, ‘ಚಿತ್ರದ ನಿರ್ದೇಶಕ ವಿಕಾಸ್‌ ಬಹ್ಲ ನನಗೆ ಲೈಂಗಿಕ ಕಿರುಕುಳ’ ನೀಡಿದ್ದರು ಎಂದು ಆರೋಪಿಸಿದ್ದಾರೆ.

‘ಇಂಡಿಯಾ ಟುಡೆ’ ಸಂದರ್ಶನದಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ.

ತನುಶ್ರೀ ದೂರು: 2008ರಲ್ಲಿ ಸಿನಿಮಾ ಚಿತ್ರೀಕರಣದ ವೇಳೆ ಹಿರಿಯ ನಟ ನಾನಾ ಪಾಟೇಕರ್‌ ಅವರು ಲೈಂಗಿಕ ಕಿರುಕುಳ ನೀಡಿದ್ದರು ಎಂದು ದೂರಿ ನಟಿ ತನುಶ್ರೀ ದತ್ತಾ ಶನಿವಾರ ದೂರು ದಾಖಲಿಸಿದ್ದಾರೆ.

ನೃತ್ಯ ಸಂಯೋಜಕ ಗಣೇಶ್‌ ಆಚಾರ್ಯ, ನಿರ್ಮಾಪಕ ಸಮೀರ್‌ ಸಿದ್ಧಿಕಿ, ನಿರ್ದೇಶಕ ರಾಕೇಶ್‌ ಸಾರಂಗ್‌ ವಿರುದ್ಧವೂ ದೂರು ದಾಖಲಿಸಿದ್ದಾರೆ.

ಶಿಲ್ಪಾಶೆಟ್ಟಿ ಬೆಂಬಲ: ಲೈಂಗಿಕ ದೌರ್ಜನ್ಯದ ಕುರಿತು ‘ಮೀಟೂ’ ಎಂಬ ಬದಲಾಗಿ ‘ಯೂಟೂ’ ಎಂದು ತಪ್ಪೆಸಗುವ ಪುರುಷರಿಗೆ ಮಹಿಳೆಯರು ತಿರುಗೇಟು ನೀಡಬೇಕು ಎಂದು ನಟಿ ಶಿಲ್ಪಾ ಶೆಟ್ಟಿ ಸಲಹೆ ನೀಡಿದ್ದಾರೆ.

ತನುಶ್ರೀಯನ್ನು ಬೆಂಬಲಿಸಿದ ಶಿಲ್ಪಾ, ಇದು ಚಳವಳಿ ರೀತಿಯ ಅಭಿಯಾನಕ್ಕೆ ನಾಂದಿ ಹಾಡಲಿದೆ ಎಂದರು.

 

Tags: 

ಬರಹ ಇಷ್ಟವಾಯಿತೆ?

  • 5

    Happy
  • 1

    Amused
  • 0

    Sad
  • 0

    Frustrated
  • 3

    Angry

Comments:

0 comments

Write the first review for this !